Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಬೊಳ್ಳುಮಾಡು – ಕಾಕೋಟುಪರಂಬು : ನೂತನ ಕಾಂಕ್ರೀಟ್ ರಸ್ತೆಗಳ ಉದ್ಘಾಟನೆ*
  • *ಎಸ್‍ಐಆರ್ : ಡಿಜಟಲೀಕರಣ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*
  • *ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ತರಬೇತಿ ಕಾರ್ಯಾಗಾರ : ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಗಮನಹರಿಸಿ : ಪ್ರಸನ್ನ ಕುಮಾರ್*
  • *ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ವಿಷ ನಿರೋಧಕ ಔಷಧಿ ದಾಸ್ತಾನು ಮಾಡಿ : ಜಿಲ್ಲಾಧಿಕಾರಿ*
  • *ಯುವ ಜನರ ಸಬಲೀಕರಣಕ್ಕೆ `ಮೈ ಭಾರತ್’ ವೇದಿಕೆ ಬಳಸಿಕೊಳ್ಳಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕರೆ*
  • *ಸೋಮವಾರಪೇಟೆ : ವಾಕರ್ಸ್ ವಿಂಗ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಹರ್ಷ ಆಯ್ಕೆ*
  • ಜು.26 ರಂದು ಮಡಿಕೇರಿಯಲ್ಲಿ ಕಾಗಿ೯ಲ್ ವಿಜಯ್ ದಿವಸ್ : 125 ಸಂಘಟನೆಗಳಿಂದ ಯೋಧರಿಗೆ ಗೌರವ ನಮನ
  • *ಬಾಲಕರ ಟೇಬಲ್ ಟೆನ್ನಿಸ್ ಪಂದ್ಯಾವಳಿ – ಕೊಡಗು ವಿದ್ಯಾಲಯ ತಂಡಕ್ಕೆ ಕಂಚಿನ ಪದಕ*
  • *ಬಿಡದಿ ಹೋರಾಟಕ್ಕೆ ತೆರಳುತ್ತಿದ್ದ ರೈತ ಸಂಘದ ಪ್ರಮುಖರನ್ನು ವಶಕ್ಕೆ ಪಡೆದ ಪೊಲೀಸರು : ಮುಖಂಡರ ಅಸಮಾಧಾನ*
  • *”ನೀಟ್” ಕೇಂದ್ರದ ಧೋರಣೆ ಖಂಡಿಸಿ ವಿರಾಜಪೇಟೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ : ಕೇಂದ್ರದಿಂದ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟ : ಶಾಸಕ ಎ.ಎಸ್.ಪೊನ್ನಣ್ಣ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ನಾಪೋಕ್ಲುವಿನ  ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್‍ಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ನಾಪೋಕ್ಲುವಿನ  ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್‍ಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ*

ಡಿಸೆಂಬರ್ 13, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಡಿ.13 NEWS DESK  : ನಾಪೋಕ್ಲುವಿನ ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಗೆ ಪ್ರತಿಷ್ಠಿತ ಸಿಐಐ – ಎಫ್‍ಪಿಒ ಎಕ್ಸಲೆನ್ಸ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು, ಇದು ಕೊಡಗು ಜಿಲ್ಲೆಗೆ ಹೆಮ್ಮೆಯ ವಿಚಾರವೆಂದು ಸಂಸ್ಥೆಯ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಶಸ್ತಿಗಾಗಿ ಅರ್ಹತೆ ಪಡೆದ ದೇಶದ 144 ಉತ್ತಮ ರೈತ ಉತ್ಪಾದಕ ಕಂಪನಿಗಳಲ್ಲಿ ಈಶಾ ಫೌಂಡೇಶನ್ ನ 25 ಎಫ್‍ಪಿಒಗಳಲ್ಲಿ ಒಂದಾದ ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ನಾಲ್ಕು ಮಾದರಿಯ ಪ್ರಶಸ್ತಿಗಳಲ್ಲಿ ಖರೀದಿ ಮತ್ತು ಮಾರಾಟ ವ್ಯವಹಾರದ ಯಶಸ್ಸಿಗಾಗಿ ನಮ್ಮ ಸಂಸ್ಥೆಗೆ ಪ್ರಶಸ್ತಿ ಲಭಿಸಿದೆ ಎಂದರು.
ಭಾರತದಾದ್ಯಂತದ ರೈತ ಉತ್ಪಾದಕ ಕಂಪನಿಗಳೊಂದಿಗೆ ಸ್ಪರ್ಧಿಸಿ, ಕಠಿಣ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಪೊನ್ನಾಡ್ ಎಫ್‍ಪಿಒ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಸಿಐಐ – ಎಫ್‍ಪಿಒ ಶೃಂಗಸಭೆಯಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮಿನಾಜ್ ಆಲಂ ಅವರಿಂದ ನಾನು, ಈಶಾ ಔಟ್ರೇಚ್‍ನ ಮಾ.ಚಂದ್ರಹಾಸ ಹಾಗೂ ಪೊನ್ನಾಡ್ ಎಫ್‍ಪಿಒದ ಮಹಿಳಾ ನಿರ್ದೇಶಕಿ ರತ್ನಾ ಚರ್ಮಣ್ಣ ಈ ಪ್ರಶಸ್ತಿಯನ್ನು ಸ್ವೀಕರಿಸಿರುವುದಾಗಿ ಹೇಳಿದರು. ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಅನ್ನು 2021 ರಲ್ಲಿ ಸ್ಥಾಪಿಸಲಾಯಿತು. ಈಶಾ ಸಂಸ್ಥೆ ಪೂರ್ಣ ಸಮಯದ ಸ್ವಯಂಸೇವಕರು ನಿರ್ದೇಶಕರನ್ನು ಒಟ್ಟುಗೂಡಿಸಲು ಸಹಕರಿಸಿತು. ಕೇವಲ 2 ರಿಂದ 3 ವಾರಗಳ ಅಲ್ಪಾವಧಿಯಲ್ಲಿ, 308 ಸದಸ್ಯರನ್ನು ಸಜ್ಜುಗೊಳಿಸಿ ಕಂಪನಿಯನ್ನು ರಚಿಸಲಾಯಿತು. “10,000 ಎಫ್‍ಪಿಒಗಳ ರಚನೆ ಮತ್ತು ಪ್ರಚಾರ” ಗುರಿಯನ್ನು ಹೊಂದಿರುವ ಭಾರತ ಸರ್ಕಾರದ ಕೇಂದ್ರ ವಲಯದ ಯೋಜನೆಯು ಪೊನ್ನಾಡ್ ಎಫ್‍ಪಿಸಿಎಲ್ ಸ್ಥಾಪನೆಯನ್ನು ಸಕ್ರಿಯಗೊಳಿಸಿದೆ.
ಕಂಪನಿಯ ಕೃಷಿ ಅಗತ್ಯತೆಗಳನ್ನು ಪೂರೈಸುವ ಇನ್ಪುಟ್ ಅಂಗಡಿಯನ್ನು ಜು.1, 2022 ರಂದು ಆರಂಭಿಸಲಾಯಿತು. 2023 ರ ಜನವರಿಯ ವೇಳೆಗೆ ಕಂಪನಿಯು ಜಪಾನೀಸ್ ಜಸ್ಟ್ ಇನ್ ಟೈಮ್ ಇನ್ವೆಂಟರಿ ವಿಧಾನದಿಂದ ತನ್ನ ರೈತ ಆಸಕ್ತಿ ಗುಂಪುಗಳ ಮೂಲಕ ಉಪಾಸಿ ಪ್ರಮಾಣೀಕೃತ ಗುಣಮಟ್ಟದ ಸುಣ್ಣವನ್ನು ತಲುಪಿಸಿತು. 13,86,000 ರೂ. ಆರಂಭಿಕ ಹೂಡಿಕೆ ಮತ್ತು ಕೇವಲ 20*20 ಕಚೇರಿಯೊಂದಿಗೆ ಕಂಪನಿಯು 10 ದಿನಗಳಲ್ಲಿ ರೂ.38 ಲಕ್ಷಗಳ ವಹಿವಾಟು ಮಾಡಿ ದೊಡ್ಡ ಯಶಸ್ಸನ್ನು ಕಂಡಿತು. ವ್ಯಾಪಾರ ಆರಂಭಿಸಿದ ಮೊದಲ ವರ್ಷದಲ್ಲಿ, ಕಂಪನಿಯು 20 ಮೆಟ್ರಿಕ್ ಟನ್ ಕಾಫಿಯನ್ನು ಒಟ್ಟುಗೂಡಿಸಿ 49 ಲಕ್ಷ ರೂಪಾಯಿಗಳ ವಹಿವಾಟು ನಡೆಸಿತು. 2022 ರಲ್ಲಿ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಎಫ್‍ಪಿಸಿಎಲ್‍ನ ಎಲ್ಲಾ ಕಂಪನಿಯ ಸದಸ್ಯರಿಗೆ ತಮ್ಮ ಕಾಫಿಯನ್ನು ಎಫ್‍ಪಿಒ ಮೂಲಕ ಮಾರಾಟ ಮಾಡಲು ಕರೆ ನೀಡಲಾಯಿತು. 2023-24ರಲ್ಲಿ ಕಂಪನಿಯು ಕಾಫಿಯನ್ನು ಒಟ್ಟುಗೂಡಿಸಿ 8.5 ಕೋಟಿ ರೂ.ಗಳ ವಹಿವಾಟು ನಡೆಸಿತು. ನಿರ್ದೇಶಕರು ಈ ಯಶಸ್ಸನ್ನು ತಮ್ಮ ರೈತ ಸದಸ್ಯರಿಗೆ ಅರ್ಪಿಸಿದರು. ರೈತರ ಸಹಕಾರವೇ ಈ ಯಶಸ್ಸಿಗೆ ಕಾರಣ ಎಂದು ಮನು ಮುತ್ತಪ್ಪ ತಿಳಿಸಿದರು. ಸಣ್ಣ ಮತ್ತು ಅತಿಸಣ್ಣ ರೈತರ ಹಿತ ಕಾಯುವುದಕ್ಕಾಗಿ ಕೇಂದ್ರ ಸರಕಾರ ನಬಾರ್ಡ್ ಸಹಯೋಗದೊಂದಿಗೆ ರೈತ ಉತ್ಪಾದಕ ಕೇಂದ್ರಗಳಿಗೆ ಉತ್ತೇಜನ ನೀಡಿತು. 2021 ರಲ್ಲಿ 10 ಸಾವಿರ ನೂತನ ರೈತ ಉತ್ಪಾದಕ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಕೊಡಗು ಜಿಲ್ಲೆಯ ನಾಪೋಕ್ಲು ಮತ್ತು ವಿರಾಜಪೇಟೆಯಲ್ಲಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿರುವ ಕೇಂದ್ರಗಳಿಗೆ ಈಶಾ ಫೌಂಡೇಶನ್ ಸ್ವಯಂ ಸೇವಕರನ್ನು ಒದಗಿಸುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರ ಯಶಸ್ವಿಗೊಳಿಸಲು ಈಶಾ ಫೌಂಡೇಶನ್ ನ ಸಹಭಾಗಿತ್ವ ಹೆಚ್ಚು ಸಹಕಾರಿಯಾಗಿದೆ. ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಬ್ರಾಂಡ್ ನ ಕಾಫಿ ಹೆಚ್ಚು ಜನಪ್ರಿಯವಾಗಿದೆ ಎಂದು ವಿವರಿಸಿದರು. ಪೊನ್ನಾಡ್ ಎಫ್‍ಪಿಸಿಎಲ್ ತನ್ನ 3ನೇ ಹಂತದ ಸದಸ್ಯ ನೋಂದಾವಣಿ ಆರಂಭಿಸಿದೆ. ನಾಪೋಕ್ಲು ಹೋಬಳಿಯಲ್ಲಿ ಹೊಸ ಸದಸ್ಯರನ್ನು ಇದಕ್ಕೆ ಆಹ್ವಾನ ಮಾಡುತ್ತಾ, ಸಮಿತಿಯು ಅನುಮೋದಿಸಿದ ನಂತರ ಸದಸ್ಯತ್ವವನ್ನು ದೃಢೀಕರಿಸಲಾಗುತ್ತದೆ. 3ನೇ ಹಂತದಲ್ಲಿ 750 ರೈತ ಸದಸ್ಯರನ್ನು ಹೊಂದುವ ಗುರಿಯನ್ನು ಸಂಸ್ಥೆ ಹೊಂದಿದೆ. ಸದಸ್ಯತ್ವವನ್ನು ಪಡೆಯಲು ಕೊನೆಯ ದಿನಾಂಕ 2024 ಡಿ.31 ಆಗಿದೆ ಎಂದು ಮನು ಮುತ್ತಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಕುಲ್ಲೇಟಿರ ಅಜಿತ್ ನಾಣಯ್ಯ, ಕೋಡಿರ ಪ್ರಸನ್ನ, ಕಾಟುಮಣಿಯಂಡ ಉಮೇಶ್ ಹಾಗೂ ಪವಿತ್ರ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಬೊಳ್ಳುಮಾಡು – ಕಾಕೋಟುಪರಂಬು : ನೂತನ ಕಾಂಕ್ರೀಟ್ ರಸ್ತೆಗಳ ಉದ್ಘಾಟನೆ*

ಜುಲೈ 24, 2026

*ಎಸ್‍ಐಆರ್ : ಡಿಜಟಲೀಕರಣ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಜುಲೈ 24, 2026

*ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ತರಬೇತಿ ಕಾರ್ಯಾಗಾರ : ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಗಮನಹರಿಸಿ : ಪ್ರಸನ್ನ ಕುಮಾರ್*

ಜುಲೈ 24, 2026

*ಎಸ್‍ಐಆರ್ : ಡಿಜಟಲೀಕರಣ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಜುಲೈ 24, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಜು.24 NEWS DESK : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಗಣತಿ ನಮೂನೆಯ ಡಿಜಿಟಲೀಕರಣವು ಶೇ.80…

*ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ತರಬೇತಿ ಕಾರ್ಯಾಗಾರ : ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಗಮನಹರಿಸಿ : ಪ್ರಸನ್ನ ಕುಮಾರ್*

ಜುಲೈ 24, 2026

*ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ವಿಷ ನಿರೋಧಕ ಔಷಧಿ ದಾಸ್ತಾನು ಮಾಡಿ : ಜಿಲ್ಲಾಧಿಕಾರಿ*

ಜುಲೈ 24, 2026

*ಯುವ ಜನರ ಸಬಲೀಕರಣಕ್ಕೆ `ಮೈ ಭಾರತ್’ ವೇದಿಕೆ ಬಳಸಿಕೊಳ್ಳಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕರೆ*

ಜುಲೈ 24, 2026

*ಸೋಮವಾರಪೇಟೆ : ವಾಕರ್ಸ್ ವಿಂಗ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಹರ್ಷ ಆಯ್ಕೆ*

ಜುಲೈ 24, 2026

ಜು.26 ರಂದು ಮಡಿಕೇರಿಯಲ್ಲಿ ಕಾಗಿ೯ಲ್ ವಿಜಯ್ ದಿವಸ್ : 125 ಸಂಘಟನೆಗಳಿಂದ ಯೋಧರಿಗೆ ಗೌರವ ನಮನ

ಜುಲೈ 24, 2026

*ಬಾಲಕರ ಟೇಬಲ್ ಟೆನ್ನಿಸ್ ಪಂದ್ಯಾವಳಿ – ಕೊಡಗು ವಿದ್ಯಾಲಯ ತಂಡಕ್ಕೆ ಕಂಚಿನ ಪದಕ*

ಜುಲೈ 24, 2026

*ಬಿಡದಿ ಹೋರಾಟಕ್ಕೆ ತೆರಳುತ್ತಿದ್ದ ರೈತ ಸಂಘದ ಪ್ರಮುಖರನ್ನು ವಶಕ್ಕೆ ಪಡೆದ ಪೊಲೀಸರು : ಮುಖಂಡರ ಅಸಮಾಧಾನ*

ಜುಲೈ 24, 2026

*”ನೀಟ್” ಕೇಂದ್ರದ ಧೋರಣೆ ಖಂಡಿಸಿ ವಿರಾಜಪೇಟೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ : ಕೇಂದ್ರದಿಂದ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟ : ಶಾಸಕ ಎ.ಎಸ್.ಪೊನ್ನಣ್ಣ*

ಜುಲೈ 24, 2026

*ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ : ಪ್ರಮುಖರ ಬಂಧನ, ಬಿಡುಗಡೆ*

ಜುಲೈ 24, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.