Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡವ ಅಕಾಡೆಮಿ ಮತ್ತು ನಾಪೋಕ್ಲು ಕೊಡವ ಸಮಾಜದಿಂದ ಮಕ್ಕಡ ನಮ್ಮೆ*
  • *ನಿವೃತ್ತ ಸೇನಾಧಿಕಾರಿಗಳು, ವಾಯುಪಡೆ ಅಧಿಕಾರಿಗಳು ಹಾಗೂ ಮಾಜಿ ಒಲಂಪಿಯನ್ ಗಳಿಂದ ಮುಖ್ಯಮಂತ್ರಿಗಳ ಭೇಟಿ : ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ನೀಡುವಂತೆ ಮನವಿ*
  • *ಶ್ರೀ ಓಂಕಾರೇಶ್ವರ ದೇವಾಲಯದ ಬಳಿ ಕೊಠಡಿ ಉದ್ಘಾಟನೆ*
  • *ಸ್ವಯಂ ಚಾಲಿತ ಚಾಲನಾ ಪಥ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ*
  • *ಕೊಡಗಿನಿಂದ ಲೋಕಾಯುಕ್ತಕ್ಕೆ 207 ಪ್ರಕರಣಗಳು ಬಾಕಿ : ಇತ್ಯರ್ಥಕ್ಕೆ ಕ್ರಮ : ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ*
  • *ಮಡಿಕೇರಿ : ಕಸ ವಿಲೇವಾರಿ ಘಟಕಕ್ಕೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಭೇಟಿ : ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಕೆ.ಎನ್.ಫಣೀಂದ್ರ ಸೂಚನೆ*
  • *ನಿವೃತ್ತ ಯೋಧ ಹೆಚ್.ಎ.ಸತೀಶ್ ರಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ*
  • *ಕುಶಾಲನಗರ : ಕಾವೇರಿ ನದಿ ನೀರಿನ ಮಟ್ಟ ಏರಿಕೆ*
  • *ಪ್ರಧಾನಿಗೆ ಅವಾಚ್ಯ ಶಬ್ದ ಪ್ರಯೋಗ : ಪೊನ್ನಂಪೇಟೆಯಲ್ಲಿ ದೂರು*
  • *ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ 51ನೇ ಅಧ್ಯಕ್ಷೆಯಾಗಿ ರಶ್ಮಿ ಪ್ರವೀಣ್ ಅಧಿಕಾರ ಸ್ವೀಕಾರ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಯುವನಿಧಿ ಯೋಜನೆ : ಕೊಡಗಿನಲ್ಲಿ 1262 ಮಂದಿ ಹೆಸರು ನೋಂದಣಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಯುವನಿಧಿ ಯೋಜನೆ : ಕೊಡಗಿನಲ್ಲಿ 1262 ಮಂದಿ ಹೆಸರು ನೋಂದಣಿ*

ಡಿಸೆಂಬರ್ 26, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಡಿ.26 NEWS DESK : ಸರ್ಕಾರದ ಪ್ರಮುಖ ಗ್ಯಾರಂಟಿಯಲ್ಲಿ ಒಂದಾದ ‘ಯುವನಿಧಿ’ ಯೋಜನೆಯು ಜಾರಿಗೊಂಡು ಡಿಸೆಂಬರ್ 26 ಕ್ಕೆ ಒಂದು ವರ್ಷ ಪೂರ್ಣಗೊಂಡಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಜಾರಿಗೊಳಿಸಲಾಗಿರುವ ಯುವನಿಧಿ ಯೋಜನೆಯು ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಪ್ರತಿ ತಿಂಗಳು ನಿರುದ್ಯೋಗಿ ಪದವೀದರರಿಗೆ 3 ಸಾವಿರ ರೂ. ಮತ್ತು ಡಿಪ್ಲೋಮಾ ತೇರ್ಗಡೆಯಾದವರಿಗೆ 1500 ರೂ. ಎರಡು ವರ್ಷಗಳವರೆಗೆ ಭರಿಸಲಾಗುತ್ತದೆ. 2023 ರಲ್ಲಿ ಪದವಿ, ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು, ಪದವಿ ಡಿಪ್ಲೋಮಾ ನಂತರ ಕನಿಷ್ಠ 6 ತಿಂಗಳ ವರೆಗೆ ಸರ್ಕಾರಿ/ ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರೆಸದೆ ಇರುವವರು, ರಾಜ್ಯದಲ್ಲಿ ವಾಸವಿರುವ ಕನಿಷ್ಠ 6 ವರ್ಷದವರೆಗೆ ಪದವಿ/ ಡಿಪ್ಲೋಮಾ ಉತ್ತೀರ್ಣರಾದವರಿಗೆ ಯುವನಿಧಿ ಸೌಲಭ್ಯ ದೊರೆಯುತ್ತಿದೆ. ಕೊಡಗು ಜಿಲ್ಲೆಯಲ್ಲಿ ಡಿಸೆಂಬರ್, 23 ಕ್ಕೆ ಕೊನೆಗೊಂಡಂತೆ 1262 ಮಂದಿ ಹೆಸರು ನೋಂದಾಯಿಸಿದ್ದಾರೆ. ತಾಲ್ಲೂಕುವಾರು ಗಮನಿಸಿದಾಗ ಮಡಿಕೇರಿ 325, ಕುಶಾಲನಗರ 201, ಪೊನ್ನಂಪೇಟೆ 145, ಸೋಮವಾರಪೇಟೆ 363 ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ 222 ಮಂದಿ ಯುವನಿಧಿ ಯೋಜನೆಯಡಿ ಹೆಸರು ನೋಂದಾಯಿಸಿದ್ದಾರೆ. 1262 ಮಂದಿಯಲ್ಲಿ 1133 ಮಂದಿಗೆ ಡಿಬಿಟಿ ಮೂಲಕ ಪ್ರತಿ ತಿಂಗಳು ಹಣ ಪಾವತಿ ಆಗುತ್ತಿದೆ. ಯುವನಿಧಿಯ 1133 ಮಂದಿಯಲ್ಲಿ ಸಾಮಾನ್ಯ ವರ್ಗದಲ್ಲಿ 947 ಮಂದಿ ಸೌಲಭ್ಯ ಪಡೆಯುತ್ತಿದ್ದು, 418 ಮಂದಿ ಪುರುಷ ಮತ್ತು 529 ಮಂದಿ ಮಹಿಳೆಯರು. 128 ಪರಿಶಿಷ್ಟ ಅಭ್ಯರ್ಥಿಗಳಲ್ಲಿ ಇವರಲ್ಲಿ 44 ಪುರುಷರು, 84 ಮಹಿಳೆಯರು, ಪರಿಶಿಷ್ಟ ಪಂಗಡದಲ್ಲಿ 41 ಮಂದಿ ಇದ್ದು, 15 ಪುರುಷ, 26 ಮಹಿಳೆಯರು ಇದ್ದಾರೆ. ಒಟ್ಟಾರೆ ಪದವಿ ವಿಭಾಗದಲ್ಲಿ 1116 ಮಂದಿ ಯುವನಿಧಿ ಸೌಲಭ್ಯ ಪಡೆಯುತ್ತಿದ್ದಾರೆ. ಹಾಗೆಯೇ ಡಿಪ್ಲೋಮಾ ವಿಭಾಗದಲ್ಲಿ ಸಾಮಾನ್ಯ ವರ್ಗದಲ್ಲಿ 15 ಮಂದಿ ಇದ್ದು, 13 ಪುರುಷ, 02 ಮಹಿಳೆ, ಹಾಗೆಯೇ ಪರಿಶಿಷ್ಟ ಜಾತಿಯಲ್ಲಿ ಒಬ್ಬ ಮಹಿಳೆ, ಪರಿಶಿಷ್ಟ ಪಂಗಡದಲ್ಲಿ ಒಬ್ಬ ಪುರುಷ ಒಟ್ಟು ಡಿಪ್ಲೋಮಾ ವಿಭಾಗದಲ್ಲಿ 17 ಮಂದಿ ಯುವನಿಧಿ ಸೌಲಭ್ಯ ಪಡೆಯುತ್ತಿದ್ದಾರೆ. ಒಟ್ಟಾರೆ 1133 ಮಂದಿ ಯುವನಿಧಿ ಸೌಲಭ್ಯ ಪಡೆಯುತ್ತಿದ್ದಾರೆ. ಯಾವುದೇ ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿ ಸರ್ಕಾರಿ, ಖಾಸಗಿ, ಸ್ವಯಂ ಉದ್ಯೋಗ ಹೊಂದಿಲ್ಲದವರು ಮತ್ತು ಉನ್ನತ ವಿದ್ಯಾಭ್ಯಾಸ ಮುಂದುವರೆಸದೆ ಇರುವ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಳ್ಳಲು ‘ಸೇವಾ ಸಿಂಧು’ ಪೋರ್ಟಲ್ http://sevasindhugs.karnataka.gov.in ಅನ್ನು ಭೇಟಿ ನೀಡಿ ಹಾಗೂ ಉಚಿತವಾಗಿ ಕರ್ನಾಟಕ ಒನ್, ಗ್ರಾಮ ಒನ್ ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಮುಖಾಂತರ ಅರ್ಜಿ ಸಲ್ಲಿಸಬಹುದು. ‘ಸೇವಾ ಸಿಂಧು’ ಪೋರ್ಟಲ್ ಮುಖಪುಟದಲ್ಲಿರುವ ನ್ಯಾಡ್ ಲಿಂಕ್ ಉಪಯೋಗಿಸಿಕೊಂಡು ತಮ್ಮ ದಾಖಲೆಗಳು ಇಂದೀಕರಣವಾಗಿರುವುದನ್ನು ಖಚಿತಪಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 18005999918 ಗೆ ಕರೆ ಮಾಡಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ.ಬಿ.ಮಂಜುನಾಥ್ ತಿಳಿಸಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೊಡವ ಅಕಾಡೆಮಿ ಮತ್ತು ನಾಪೋಕ್ಲು ಕೊಡವ ಸಮಾಜದಿಂದ ಮಕ್ಕಡ ನಮ್ಮೆ*

ಜುಲೈ 3, 2026

*ನಿವೃತ್ತ ಸೇನಾಧಿಕಾರಿಗಳು, ವಾಯುಪಡೆ ಅಧಿಕಾರಿಗಳು ಹಾಗೂ ಮಾಜಿ ಒಲಂಪಿಯನ್ ಗಳಿಂದ ಮುಖ್ಯಮಂತ್ರಿಗಳ ಭೇಟಿ : ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ನೀಡುವಂತೆ ಮನವಿ*

ಜುಲೈ 3, 2026

*ಶ್ರೀ ಓಂಕಾರೇಶ್ವರ ದೇವಾಲಯದ ಬಳಿ ಕೊಠಡಿ ಉದ್ಘಾಟನೆ*

ಜುಲೈ 3, 2026

*ನಿವೃತ್ತ ಸೇನಾಧಿಕಾರಿಗಳು, ವಾಯುಪಡೆ ಅಧಿಕಾರಿಗಳು ಹಾಗೂ ಮಾಜಿ ಒಲಂಪಿಯನ್ ಗಳಿಂದ ಮುಖ್ಯಮಂತ್ರಿಗಳ ಭೇಟಿ : ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ನೀಡುವಂತೆ ಮನವಿ*

ಜುಲೈ 3, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಜು.3 NEWS DESK : ಕೊಡಗಿನ ನಿವೃತ್ತ ಸೇನಾಧಿಕಾರಿಗಳು, ವಾಯು ಸೇನೆ ಅಧಿಕಾರಿಗಳು ಹಾಗೂ ಮಾಜಿ ಒಲಂಪಿಯನ್ ಗಳ…

*ಶ್ರೀ ಓಂಕಾರೇಶ್ವರ ದೇವಾಲಯದ ಬಳಿ ಕೊಠಡಿ ಉದ್ಘಾಟನೆ*

ಜುಲೈ 3, 2026

*ಸ್ವಯಂ ಚಾಲಿತ ಚಾಲನಾ ಪಥ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ*

ಜುಲೈ 3, 2026

*ಕೊಡಗಿನಿಂದ ಲೋಕಾಯುಕ್ತಕ್ಕೆ 207 ಪ್ರಕರಣಗಳು ಬಾಕಿ : ಇತ್ಯರ್ಥಕ್ಕೆ ಕ್ರಮ : ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ*

ಜುಲೈ 3, 2026

*ಮಡಿಕೇರಿ : ಕಸ ವಿಲೇವಾರಿ ಘಟಕಕ್ಕೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಭೇಟಿ : ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಕೆ.ಎನ್.ಫಣೀಂದ್ರ ಸೂಚನೆ*

ಜುಲೈ 3, 2026

*ನಿವೃತ್ತ ಯೋಧ ಹೆಚ್.ಎ.ಸತೀಶ್ ರಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ*

ಜುಲೈ 3, 2026

*ಕುಶಾಲನಗರ : ಕಾವೇರಿ ನದಿ ನೀರಿನ ಮಟ್ಟ ಏರಿಕೆ*

ಜುಲೈ 3, 2026

*ಪ್ರಧಾನಿಗೆ ಅವಾಚ್ಯ ಶಬ್ದ ಪ್ರಯೋಗ : ಪೊನ್ನಂಪೇಟೆಯಲ್ಲಿ ದೂರು*

ಜುಲೈ 3, 2026

*ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ 51ನೇ ಅಧ್ಯಕ್ಷೆಯಾಗಿ ರಶ್ಮಿ ಪ್ರವೀಣ್ ಅಧಿಕಾರ ಸ್ವೀಕಾರ*

ಜುಲೈ 3, 2026

*ಎಸ್‌ಬಿಐ ಪಿಒ 1,500 ಹುದ್ದೆಗಳ ನೇಮಕಾತಿ: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!*

ಜುಲೈ 3, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.