Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ನಿಮ್ಮ ಏರಿಯಾದಲ್ಲಿ ನೀರಿಲ್ಲವೇ?: ಕೂಡಲೇ ಈ ಕೆಲಸ ಮಾಡಿ! ಮನೆ ಬಾಗಿಲಿಗೇ ಬರಲಿದೆ ಕಾವೇರಿ ನೀರು; ಹೇಗೆ ಗೊತ್ತಾ?*
  • *ಸೆಟ್ಟೇರಿತು ‘ನನ್ನ ಸೈಕಲ್ ಸವಾರಿ’*
  • *ರಾಜ್ಯ ಬಜೆಟ್ ಕೊಡಗಿನ ಅಭಿವೃದ್ಧಿಗೆ ಪೂರಕವಾಗಿರಲಿ : ಬಿಜೆಪಿ ಒತ್ತಾಯ*
  • *ಬೈಲುಕುಪ್ಪೆಯಲ್ಲಿ ವಿಶ್ವದ ಅತಿ ದೊಡ್ಡ ಚಿತ್ರ ಪರದೆ ಅನಾವರಣ*
  • *ಸಾಧಿಸಲು ಹಳ್ಳಿ ನಗರ ಮುಖ್ಯವಲ್ಲ, ಬದಲಿಗೆ ಸಾಧಿಸಲು ವಾತವರಣ ಸೃಷ್ಟಿ ಮಾಡುವುದು ಮುಖ್ಯವಾಗಬೇಕು: ಪೂಜಾ ಸಜೇಶ್: ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಭಿರಕ್ಕೆ ಚಾಲನೆ: ಸೇವಾರ್ಥ ಮನೋಭಾವದಿಂದ ರಾಷ್ಟೃ ನಿರ್ಮಾಣ ಮಾಡುವತ್ತ ಗಮನ ಹರಿಸುವಂತಾಗಬೇಕು:ಗಣ್ಯರ ಅಭಿಮತ*
  • *ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಗಮನಹರಿಸಿ: ಡಾ.ಮಂತರ್ ಗೌಡ*
  • *ಶಕ್ತಿ ಗೋಪಾಲಕೃಷ್ಣ ರಸ್ತೆ ನಾಮಫಲಕ ಉದ್ಘಾಟನೆ*
  • *ವೃತ್ತಿಪರ ಕೋರ್ಸ್‌ಗಳ ಶುಲ್ಕ ಪಾವತಿಗೆ ಕೆಇಎ ಕಾಲಾವಕಾಶ ವಿಸ್ತರಣೆ: 9 ಸಾವಿರ ಅಭ್ಯರ್ಥಿಗಳಿಗೆ ಕೊನೆಯ ಚಾನ್ಸ್*
  • *’ಟಾಕ್ಸಿಕ್’ ರಿಲೀಸ್ ಡೇಟ್ ಚೇಂಜ್: ‘ಟಾಕ್ಸಿಕ್’ ಎದುರು ನಿಲ್ಲುತ್ತಾ ವರುಣ್ ಧವನ್ ಸಿನಿಮಾ? ಚಿತ್ರತಂಡದ ಮುಂದಿನ ನಡೆ ಏನು?*
  • *ತಿರುಪತಿ ದರ್ಶನಕ್ಕೆ ತೆರಳುತ್ತಿದ್ದ ಬೆಂಗಳೂರಿನ ಒಂದೇ ಕುಟುಂಬದ ಐವರು ಸಾವು: ಚಿತ್ತೂರು ಬಳಿ ಲಾರಿಗೆ ಕಾರು ಡಿಕ್ಕಿ!*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕಟ್ಟೆಮಾಡು ದೇವಾಲಯ ಪ್ರಕರಣ : ಶಾಂತಿಸಭೆ ನಡೆಸಿದ ಕೊಡಗು ಜಿಲ್ಲಾಡಳಿತ : ಬೈಲಾ ಗೊಂದಲ ನಿವಾರಣೆಗೆ ಒಂದು ವಾರ ಕಾಲಾವಕಾಶ*
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್ ವಿಡಿಯೋ ಗ್ಯಾಲರಿ

*ಕಟ್ಟೆಮಾಡು ದೇವಾಲಯ ಪ್ರಕರಣ : ಶಾಂತಿಸಭೆ ನಡೆಸಿದ ಕೊಡಗು ಜಿಲ್ಲಾಡಳಿತ : ಬೈಲಾ ಗೊಂದಲ ನಿವಾರಣೆಗೆ ಒಂದು ವಾರ ಕಾಲಾವಕಾಶ*

ಡಿಸೆಂಬರ್ 30, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಡಿ.30 : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾ ಮೃತ್ಯುಂಜಯ ದೇವಾಲಯದ ಪ್ರವೇಶಕ್ಕೆ ಸಂಬಂಧಿಸಿದಂತೆ ಎರಡು ಜನಾಂಗಗಳ ನಡುವೆ ನಡೆದ ಸಂಘರ್ಷವನ್ನು ಶಮನ ಮಾಡಲು ಕೊಡಗು ಜಿಲ್ಲಾಡಳಿತ ಇಂದು ಉಭಯ ಕಡೆಗಳ ಶಾಂತಿ ಸಭೆ ನಡೆಸಿತು. ಸುಮಾರು ಮೂರು ಗಂಟೆಗಳ ಸಭೆಯಲ್ಲಿ ಕೊಡವ ಸಮಾಜಗಳ ಒಕ್ಕೂಟ, ಗೌಡ ಸಮಾಜಗಳ ಒಕ್ಕೂಟ ಹಾಗೂ ಶ್ರೀ ಮಹಾ ಮೃತ್ಯಂಜಯ ದೇವಾಲಯ ಆಡಳಿತ ಮಂಡಳಿಯ ಅಭಿಪ್ರಾಯಗಳನ್ನು ಜಿಲ್ಲಾಡಳಿತ ಆಲಿಸಿತು. ಸಭೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ದೇವಸ್ಥಾನದ ಬೈಲಾದಲ್ಲಿರುವ ಗೊಂದಲ ನಿವಾರಣೆಗಾಗಿ ದೇವಾಲಯದ ಆಡಳಿತ ಮಂಡಳಿಯ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಮುಂದಿನ ಸೋಮವಾರದವರೆಗೆ ಕಾಲಾವಕಾಶ ಬೇಕೆಂದು ದೇವಾಲಯದ ಆಡಳಿತ ಮಂಡಳಿಯ ಪ್ರಮುಖರು ಕೋರಿಕೊಂಡಿದ್ದಾರೆ. ಈ ಹಿನ್ನೆಲೆ ಅಂತಿಮ ನಿರ್ಧಾರಕ್ಕೆ ಬರಲು ಏಳು ದಿನಗಳ ಕಾಲಾವಕಾಶ ನಿಡಲಾಗಿದೆ ಎಂದರು.
ಆಡಳಿತ ಮಂಡಳಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಏಳು ದಿನಗಳ ಕಾಲಾವಕಾಶ ಕೋರಿಕೊಂಡ ಹಿನ್ನೆಲೆಯಲ್ಲಿ ಎಲ್ಲರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಕೊಡಗು ಸರ್ವ ಜನಾಂಗಗಳ ಶಾಂತಿಯ ತೋಟವಾಗಿದ್ದು, ಸಭೆಯಲ್ಲಿ ಇಂದಿನ ತೀರ್ಮಾನವನ್ನು ಎಲ್ಲರು ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಜಿಲ್ಲಾಡಳಿತ ಕೂಡ ಮುಂದಿನ ದಿನಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡಲು ಬದ್ಧವಾಗಿದೆ. ಈಗಾಗಲೆ ಮುಂಜಾಗ್ರತಾ ಕ್ರಮವಾಗಿ 163 ಸೆಕ್ಷನ್‌ನಡಿ ಜ.2ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ. ಅಗತ್ಯ ಬಿದ್ದಲ್ಲಿ ಇದನ್ನು ಮುಂದುವರಿಸುವ ಕುರಿತು ಚಿಂತಿಸಲಾಗುವುದು. ಮುಂದಿನ ಸೋಮವಾರದವರೆಗೆ ದೇವಾಲಯದಲ್ಲಿ ಎಂದಿನಂತೆ ಪೂಜೆಗಳು ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಕೊಡಗಿನ ಜನತೆ ಶಾಂತಿ ಪ್ರಿಯರಾಗಿರುವುದರಿಂದ ಮುಂದಿನ ಸೋಮವಾರ ನಡೆಯುವ ಸಭೆಯಲ್ಲಿ ಒಮ್ಮತದ ಉತ್ತಮ ನಿರ್ಧಾರಕ್ಕೆ ಬರಲಿದ್ದಾರೆ ಎನ್ನುವ ವಿಶ್ವಾಸವಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
::: ಕಾನೂನು ಉಲ್ಲಂಘಿಸಲು ಅವಕಾಶವಿಲ್ಲ :::
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ, ದೇವಾಲಯ ಆಡಳಿತ ಮಂಡಳಿಯ ಕೋರಿಕೆಯಂತೆ ಜಿಲ್ಲಾಡಳಿತ ಒಂದು ವಾರದ ಕಾಲಾವಕಾಶ ನೀಡಿದೆ. ನಂತರ ನಡೆಯುವ ಸಭೆಯಲ್ಲಿ ಒಮ್ಮತದ ನಿರ್ಧಾರವಾದರೆ ಸ್ವಾಗತಾರ್ಹ. ತಪ್ಪಿದಲ್ಲಿ ಪ್ರತಿಭಟನೆ ನಡೆಸುವುದು ಅಥವಾ ದೇವಾಲಯಕ್ಕೆ ನುಗ್ಗಲು ಮುಂದಾಗುವುದಕ್ಕೆ ಪೊಲೀಸ್ ಇಲಾಖೆ ಅವಕಾಶ ನಿಡುವುದಿಲ್ಲ. ಉದ್ದೇಶ ಪೂರ್ವಕವಾಗಿ ಶಾಂತಿಭಂಗ ಮಾಡಲು ಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದರು. ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರ ಒಪ್ಪಿಗೆಯಾಗದಿದ್ದಲ್ಲಿ ನ್ಯಾಯಾಲಯಕ್ಕೆ ಹೋಗಲು ಅವಕಾಶವಿದೆ, ಅಲ್ಲಿ ನ್ಯಾಯವನ್ನು ಪಡೆಯಬಹುದಾಗಿದೆ. ಅದನ್ನು ಬಿಟ್ಟು ಶಾಂತಿಭಂಗ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸೂಕ್ತ ನಿರ್ಧಾರ ಕೈಗೊಳ್ಳಲು ಒಂದು ವಾರದ ಕಾಲಾವಕಾಶವನ್ನು ಜಿಲ್ಲಾಡಳಿತ ನೀಡಿರುವುದರಿಂದ ಮತ್ತು ಸಭೆಯಲ್ಲಿ ಇದ್ದವರು ಇದಕ್ಕೆ ಸಮ್ಮತಿ ಸೂಚಿಸಿರುವುದರಿಂದ ಪ್ರತಿಭಟನೆಗಳನ್ನು ವಾಪಾಸು ಪಡೆಯಲಿದ್ದಾರೆ ಎನ್ನುವ ವಿಶ್ವಾಸವಿದೆಯೆಂದು ಎಸ್‌ಪಿ ತಿಳಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ನಿಮ್ಮ ಏರಿಯಾದಲ್ಲಿ ನೀರಿಲ್ಲವೇ?: ಕೂಡಲೇ ಈ ಕೆಲಸ ಮಾಡಿ! ಮನೆ ಬಾಗಿಲಿಗೇ ಬರಲಿದೆ ಕಾವೇರಿ ನೀರು; ಹೇಗೆ ಗೊತ್ತಾ?*

ಮಾರ್ಚ್ 5, 2026

*ಸೆಟ್ಟೇರಿತು ‘ನನ್ನ ಸೈಕಲ್ ಸವಾರಿ’*

ಮಾರ್ಚ್ 5, 2026

*ರಾಜ್ಯ ಬಜೆಟ್ ಕೊಡಗಿನ ಅಭಿವೃದ್ಧಿಗೆ ಪೂರಕವಾಗಿರಲಿ : ಬಿಜೆಪಿ ಒತ್ತಾಯ*

ಮಾರ್ಚ್ 5, 2026

*ಸೆಟ್ಟೇರಿತು ‘ನನ್ನ ಸೈಕಲ್ ಸವಾರಿ’*

ಮಾರ್ಚ್ 5, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, ಮಾ.೫: ಪ್ರಶಾಂತ್ ಟಿ.ಆರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ‘ನನ್ನ ಸೈಕಲ್ ಸವಾರಿ’ ಕಿರುಚಿತ್ರದ ಚಿತ್ರೀಕರಣ ಆರಂಭವಾಗಿದೆ.…

*ರಾಜ್ಯ ಬಜೆಟ್ ಕೊಡಗಿನ ಅಭಿವೃದ್ಧಿಗೆ ಪೂರಕವಾಗಿರಲಿ : ಬಿಜೆಪಿ ಒತ್ತಾಯ*

ಮಾರ್ಚ್ 5, 2026

*ಬೈಲುಕುಪ್ಪೆಯಲ್ಲಿ ವಿಶ್ವದ ಅತಿ ದೊಡ್ಡ ಚಿತ್ರ ಪರದೆ ಅನಾವರಣ*

ಮಾರ್ಚ್ 4, 2026

*ಸಾಧಿಸಲು ಹಳ್ಳಿ ನಗರ ಮುಖ್ಯವಲ್ಲ, ಬದಲಿಗೆ ಸಾಧಿಸಲು ವಾತವರಣ ಸೃಷ್ಟಿ ಮಾಡುವುದು ಮುಖ್ಯವಾಗಬೇಕು: ಪೂಜಾ ಸಜೇಶ್: ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಭಿರಕ್ಕೆ ಚಾಲನೆ: ಸೇವಾರ್ಥ ಮನೋಭಾವದಿಂದ ರಾಷ್ಟೃ ನಿರ್ಮಾಣ ಮಾಡುವತ್ತ ಗಮನ ಹರಿಸುವಂತಾಗಬೇಕು:ಗಣ್ಯರ ಅಭಿಮತ*

ಮಾರ್ಚ್ 4, 2026

*ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಗಮನಹರಿಸಿ: ಡಾ.ಮಂತರ್ ಗೌಡ*

ಮಾರ್ಚ್ 4, 2026

*ಶಕ್ತಿ ಗೋಪಾಲಕೃಷ್ಣ ರಸ್ತೆ ನಾಮಫಲಕ ಉದ್ಘಾಟನೆ*

ಮಾರ್ಚ್ 4, 2026

*ವೃತ್ತಿಪರ ಕೋರ್ಸ್‌ಗಳ ಶುಲ್ಕ ಪಾವತಿಗೆ ಕೆಇಎ ಕಾಲಾವಕಾಶ ವಿಸ್ತರಣೆ: 9 ಸಾವಿರ ಅಭ್ಯರ್ಥಿಗಳಿಗೆ ಕೊನೆಯ ಚಾನ್ಸ್*

ಮಾರ್ಚ್ 4, 2026

*’ಟಾಕ್ಸಿಕ್’ ರಿಲೀಸ್ ಡೇಟ್ ಚೇಂಜ್: ‘ಟಾಕ್ಸಿಕ್’ ಎದುರು ನಿಲ್ಲುತ್ತಾ ವರುಣ್ ಧವನ್ ಸಿನಿಮಾ? ಚಿತ್ರತಂಡದ ಮುಂದಿನ ನಡೆ ಏನು?*

ಮಾರ್ಚ್ 4, 2026

*ತಿರುಪತಿ ದರ್ಶನಕ್ಕೆ ತೆರಳುತ್ತಿದ್ದ ಬೆಂಗಳೂರಿನ ಒಂದೇ ಕುಟುಂಬದ ಐವರು ಸಾವು: ಚಿತ್ತೂರು ಬಳಿ ಲಾರಿಗೆ ಕಾರು ಡಿಕ್ಕಿ!*

ಮಾರ್ಚ್ 4, 2026

*ಯುರೋಕಿಡ್ಸ್ ಮಡಿಕೇರಿ ಪಬ್ಲಿಕ್ ಶಾಲೆಯಲ್ಲಿ ‘ಟ್ಯಾಲೆಂಟ್ ಡಿಸ್ಪ್ಲೇ ಮತ್ತು ಗ್ರಾಜುಯೇಷನ್ ಡೇ’ *

ಮಾರ್ಚ್ 4, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.