Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಮಳೆ ಭೀತಿ! ಶ್ರೀಲಂಕಾ ಹವಾಮಾನ ಇಲಾಖೆ ನೀಡಿದ ಆ ಒಂದು ಎಚ್ಚರಿಕೆ ಅಭಿಮಾನಿಗಳಿಗೆ ಬಿಗ್ ಶಾಕ್!*
  • *ವಾಯುಪಡೆ ಸೇರಲು 10th ಪಾಸ್ ಸಾಕು! ತಿಂಗಳಿಗೆ ಭರ್ಜರಿ ಸಂಬಳ; ನಿಮ್ಮ ಜಿಲ್ಲೆಯಲ್ಲೂ ನೇಮಕಾತಿ ಇದೆಯೇ? ಚೆಕ್ ಮಾಡಿ!*
  • *ಬೆಂಗಳೂರು ಐಪಿಎಲ್ ಪಂದ್ಯಗಳಿಗೆ ಷರತ್ತುಬದ್ಧ ಒಪ್ಪಿಗೆ! ಸಂಭ್ರಮಾಚರಣೆ ಮಾಡಿದ್ರೆ ಬೀಳುತ್ತೆ ದಂಡ? ಗೃಹ ಸಚಿವರು ಹೇಳಿದ್ದೇನು?*
  • *ಗಂಡಸರಿಗೂ ಬಸ್ ಪ್ರಯಾಣ ಉಚಿತ! ಮಹಿಳೆಯರಿಗೆ 25,000 ರೂ. ನಗದು; ಕರ್ನಾಟಕದ ಪಕ್ಕದ ರಾಜ್ಯದಲ್ಲಿ ಭರ್ಜರಿ ಗಿಫ್ಟ್ ಘೋಷಣೆ!*
  • *ಫ್ರೀ.. ಫ್ರೀ.. ಫ್ರೀ! ಪಿಯುಸಿ ಪರೀಕ್ಷೆ ಬರೆಯುವವರಿಗೆ ಸಾರಿಗೆ ಇಲಾಖೆಯಿಂದ ಸಿಹಿಸುದ್ದಿ: ಕಂಡಕ್ಟರ್‌ಗೆ ಈ ಒಂದು ಕಾರ್ಡ್ ತೋರಿಸಿದ್ರೆ ಸಾಕು!*
  • *ಮದೆನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ 100 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಎ.ಎಸ್.ಪೊನ್ನಣ್ಣ ಚಾಲನೆ*
  • *ಮಾ.2ರಂದು “ಕುಂಬ್ಯಾರ್ ಕಲಾಡ್ಚ” ವಾರ್ಷಿಕೋತ್ಸವ*
  • *16ನೇ ಅಂತರಾಷ್ಟ್ರೀಯ ಮಟ್ಟದ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿ ಮಕ್ಕಳ ಸಾಧನೆ*
  • *ಫೆ. 15ರಂದು ಚೆಟ್ಟಳ್ಳಿಯಲ್ಲಿ ಮಹಾಶಿವರಾತ್ರಿ ಆಚರಣೆ*
  • *ಲಂಡನ್‌ನಿಂದ ನೇರವಾಗಿ ಜೈಲಿಗೆ? ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ನೀಡಿದ ಅಂತಿಮ ವಾರ್ನಿಂಗ್‌ನ ಸಾರಾಂಶ ಇಲ್ಲಿದೆ!*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಶ್ರೀಮಹಾ ಮೃತ್ಯುಂಜಯ ದೇವತಾ ಕಾರ್ಯಗಳಲ್ಲಿ ಒಂದಾಗಿ ಬೆರೆಯಬೇಕೆನ್ನುವ ಚಿಂತನೆ*
ಇತ್ತೀಚಿನ ಸುದ್ದಿಗಳು

*ಶ್ರೀಮಹಾ ಮೃತ್ಯುಂಜಯ ದೇವತಾ ಕಾರ್ಯಗಳಲ್ಲಿ ಒಂದಾಗಿ ಬೆರೆಯಬೇಕೆನ್ನುವ ಚಿಂತನೆ*

January 1, 20252 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ಮಡಿಕೇರಿ NEWS DESK ಜ.1 : ಎಲ್ಲಾ ಜಾತಿ ಜನಾಂಗಗಳು ಸರ್ವ ಸಮಾನತೆಯಿಂದ ದೇವತಾ ಕಾರ್ಯಗಳಲ್ಲಿ ಒಂದಾಗಿ ಬೆರೆಯಬೇಕೆನ್ನುವ ಚಿಂತನೆಗಳಡಿ ಕಟ್ಟೆಮಾಡಿನ ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದಲ್ಲಿ ಯಾವುದೇ ಜನಾಂಗದ ಸಾಂಪ್ರದಾಯಿಕ ಆಚರಣೆಗಳು ಬೇಡವೆನ್ನುವ ನಿಯಮವನ್ನು ಮಾಡಿಕೊಳ್ಳಲಾಗಿದೆ. ಇದನ್ನು ಜಿಲ್ಲಾಡಳಿತ ಗೌರವಿಸಲಿದೆ ಎನ್ನುವ ವಿಶ್ವಾಸವಿದೆ ಎಂದು ಗ್ರಾಮಸ್ಥರು ಹಾಗೂ ದೇವಸ್ಥಾನದ ಸ್ವಯಂ ಸೇವಕ ಕಟ್ಟೆಮನೆ ಸೋನಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟೆಮಾಡು ಗ್ರಾಮ ವ್ಯಾಪ್ತಿಯಲ್ಲಿ ಅಂದಾಜು ಶೇ.30 ರಷ್ಟು ಗೌಡರು, ಶೇ.15 ರಿಂದ 20 ರಷ್ಟು ಕೊಡವ ಸಮೂಹ ಬಾಂಧವರಿದ್ದಾರೆ. ಶೇ.50 ರಷ್ಟು ಮಂದಿ ವಿವಿಧ ಜನಾಂಗಗಳಿಗೆ ಸೇರಿದವರಾಗಿದ್ದಾರೆ. ಇವರೆಲ್ಲರು ದೇವಸ್ಥಾನದಲ್ಲಿ ಸರ್ವ ಸಮಾನವಾಗಿ ತೊಡಗಿಸಿಕೊಳ್ಳಬೇಕೆನ್ನುವ ಚಿಂತನೆಯಿoದ, ದೇವಸ್ಥಾನದಲ್ಲಿ ಯಾವುದೇ ಸಮೂಹದ ಸಾಂಪ್ರದಾಯಿಕ ಉಡುಪು, ಆಚರಣೆೆಗಳು ಬೇಡವೆನ್ನುವ ನಿಯಮವನ್ನು ಗ್ರಾಮಸ್ಥರೆಲ್ಲರ ಸಮ್ಮತಿಯೊಂದಿಗೆ ರಚಿಸಲಾಗಿದೆ. ಅದರಂತೆ ಕಳೆದ ಒಂದು ವರ್ಷದಿಂದ ಗ್ರಾಮದ ಎಲ್ಲಾ ಸಮೂಹದವರು ನಡೆದುಕೊಂಡು ಬಂದಿರುವುದಾಗಿ ಸ್ಪಷ್ಟಪಡಿಸಿದರು. ಕಟ್ಟೆಮಾಡು ಗ್ರಾಮದ ವಿವಿಧ ಜನಾಂಗಗಳ ಹಾಗೂ ಕುಟುಂಬಗಳ ಪ್ರತಿನಿಧಿಗಳಿಗೆ ಕಟ್ಟೆಮಾಡು ದೇವಸ್ಥಾನ ಆಡಳಿತ ಮಂಡಳಿಯಲ್ಲಿ ಅವಕಾಶವನ್ನು ನೀಡಲಾಗಿದೆ. ಕೊಡವ, ಗೌಡ ಜನಾಂಗವನ್ನು ಒಳಗೊಂಡAತೆ ಹತ್ತಕ್ಕೂ ಹೆಚ್ಚಿನ ವಿವಿಧ ಜನಾಂಗಗಳ ಪ್ರತಿನಿಧಿಗಳು ಆಡಳಿತ ಮಂಡಳಿಯಲ್ಲಿದ್ದಾರೆ. ಇವರೆಲ್ಲರು ದೇವತಾ ಕಾರ್ಯಗಳಲ್ಲಿ ಇಲ್ಲಿಯವರೆಗು ಬಿಳಿಯ ಪಂಚೆ ಶಾಲನ್ನು ಧರಿಸಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಕಟ್ಟಮನೆ ಸೋನಾ ತಿಳಿಸಿದರು.
::: ಸುಳ್ಳು ಆರೋಪ ::: ಶ್ರೀ ಮಹಾ ಮೃತ್ಯುಂಜಯ ದೇವಾಲಯದ ಉತ್ಸವದ ದೊಡ್ಡ ಹಬ್ಬದ ಸಂದರ್ಭ ದೌರ್ಜನ್ಯ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಸುದ್ದಿಗಳೆಲ್ಲವು ಸುಳ್ಳು. ಅಂತಹ ಯಾವುದೇ ಘಟನೆಗಳು ನಡೆದಿಲ್ಲವೆಂದು ಹೇಳಿದರು. ಉತ್ಸವದ ಸಂಜೆಯ ವೇಳೆ ದೇವರ ಜಳಕಕ್ಕೆ ತೆರಳುವ ಹಂತದಲ್ಲಿ ಮೂರು ನಾಲ್ಕು ಜೀಪ್‌ಗಳಲ್ಲಿ ಸಾಂಪ್ರದಾಯಿಕ ಉಡುಪು ಧರಿಸಿ ಬಂದವರಿಗೆ, ದೇವಸ್ಥಾನದ ನಿಯಮಗಳ ಬಗ್ಗೆ ತಿಳಿಸಲಾಗಿತ್ತು. ಈ ಹಂತದಲ್ಲಿ ಆರಂಭಗೊoಡ ಭಿನ್ನಾಭಿಪ್ರಾಯ ಸುಮಾರು ಐದು ಗಂಟೆಗಳ ಕಾಲ ವಿಸ್ತರಿಸಿತು. ಇದು ನಿಜಕ್ಕೂ ಬೇಸರವನ್ನು ಉಂಟು ಮಾಡಿದೆ ಎಂದರು. ಘಟನೆಯ ಬಳಿಕ ದೇವಸ್ಥಾನದಿಂದ ಪರಂಬು ಪೈಸಾರಿಯ ನಂದಿಪಾರೆ ಎಂಬಲ್ಲಿಗೆ ದೇವರು ಜಳಕಕ್ಕೆ ತೆರಳಿ, ನಡುರಾತ್ರಿಯ ವೇಳೆ ದೇವಸ್ಥಾನಕ್ಕೆ ಮರಳುವ ಸಂದರ್ಭ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳಿದ್ದು, ಅವರು ‘ಹರ ಹರ ಮಹದೇವ’ ಎನ್ನುವ ಘೋಷಣೆಗಳನ್ನು ಕೂಗುತ್ತಿದ್ದರು. ಈ ಸಂದರ್ಭ ದೌರ್ಜನ್ಯದಂತಹ ಯಾವುದೇ ಘಟನೆಗಳು ನಡೆದಿಲ್ಲ ಮತ್ತು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿಗಳು ಸತ್ಯಕ್ಕೆ ದೂರವಾದುದೆಂದು ಹೇಳಿದರು.
ದೇವರ ಮುಂದೆ ಎಲ್ಲರು ಸರ್ವ ಸಮಾನರು, ನಾನು ಮೇಲು, ಕೀಳು ಎನ್ನುವ ಭಾವನೆ ಎಂದಿಗೂ ಸಲ್ಲದು. ಇವೆಲ್ಲವುಗಳನ್ನು ಮೀರಿ ಪ್ರೀತಿ ವಿಶ್ವಾಸದ, ಸೌಹಾರ್ದತೆ ಎಲ್ಲರಲ್ಲೂ ಮೂಡಬೇಕಾಗಿದೆ. ಶಕ್ತಿ ಪ್ರದರ್ಶನದ ಕಾಲ ಹೋಗಿದೆಯೆಂದು ನುಡಿದ ಅವರು, ಸರ್ವ ಸಮಾನತೆಯ ಚಿಂತನೆಯ ದೇವಸ್ಥಾನದ ವಸ್ತ್ರ ಸಂಹಿತೆಯನ್ನು ಒಪ್ಪುವುದು ಅಗತ್ಯವಾಗಿದೆ ಎಂದು ಕಟ್ಟೆಮನೆ ಸೋನಾ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದ ಸಮಿತಿ ಸದಸ್ಯರಾದ ಹೆಚ್.ಎಸ್.ಪುರುಷೋತ್ತಮ, ಗ್ರಾಮಸ್ಥರಾದ ಹೆಚ್.ಸಿ. ರಾಮಚಂದ್ರ, ಹೆಚ್.ವಿ.ಗನು, ಹೆಚ್.ಎಂ.ಹರೀಶ್ ಹಾಗೂ ದೇವಸ್ಥಾನದ ಸ್ವಯಂ ಸೇವಕ ರೋಷನ್ ಕಟ್ಟೆಮನೆ ಉಪಸ್ಥಿತರಿದ್ದರು.

Share. Facebook Twitter Pinterest LinkedIn Tumblr Email WhatsApp
Previous Article*ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ 139ನೇ ಸಂಸ್ಥಾಪನಾ ದಿನ ಆಚರಣೆ*
Next Article *ರಜಬ್ ತಿಂಗಳ ಚಂದ್ರದರ್ಶನ*

Website design development company services in Mangalore

Forex Trading Teacher in India

Related Posts

*ವಾಯುಪಡೆ ಸೇರಲು 10th ಪಾಸ್ ಸಾಕು! ತಿಂಗಳಿಗೆ ಭರ್ಜರಿ ಸಂಬಳ; ನಿಮ್ಮ ಜಿಲ್ಲೆಯಲ್ಲೂ ನೇಮಕಾತಿ ಇದೆಯೇ? ಚೆಕ್ ಮಾಡಿ!*

February 14, 2026

*ಬೆಂಗಳೂರು ಐಪಿಎಲ್ ಪಂದ್ಯಗಳಿಗೆ ಷರತ್ತುಬದ್ಧ ಒಪ್ಪಿಗೆ! ಸಂಭ್ರಮಾಚರಣೆ ಮಾಡಿದ್ರೆ ಬೀಳುತ್ತೆ ದಂಡ? ಗೃಹ ಸಚಿವರು ಹೇಳಿದ್ದೇನು?*

February 14, 2026

*ಗಂಡಸರಿಗೂ ಬಸ್ ಪ್ರಯಾಣ ಉಚಿತ! ಮಹಿಳೆಯರಿಗೆ 25,000 ರೂ. ನಗದು; ಕರ್ನಾಟಕದ ಪಕ್ಕದ ರಾಜ್ಯದಲ್ಲಿ ಭರ್ಜರಿ ಗಿಫ್ಟ್ ಘೋಷಣೆ!*

February 13, 2026

*ಬೆಂಗಳೂರು ಐಪಿಎಲ್ ಪಂದ್ಯಗಳಿಗೆ ಷರತ್ತುಬದ್ಧ ಒಪ್ಪಿಗೆ! ಸಂಭ್ರಮಾಚರಣೆ ಮಾಡಿದ್ರೆ ಬೀಳುತ್ತೆ ದಂಡ? ಗೃಹ ಸಚಿವರು ಹೇಳಿದ್ದೇನು?*

February 14, 2026

ಬೆಂಗಳೂರು: ಸಿಲಿಕಾನ್ ಸಿಟಿಯ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026ರ ಐಪಿಎಲ್ (IPL) ಪಂದ್ಯಗಳನ್ನು…

*ಗಂಡಸರಿಗೂ ಬಸ್ ಪ್ರಯಾಣ ಉಚಿತ! ಮಹಿಳೆಯರಿಗೆ 25,000 ರೂ. ನಗದು; ಕರ್ನಾಟಕದ ಪಕ್ಕದ ರಾಜ್ಯದಲ್ಲಿ ಭರ್ಜರಿ ಗಿಫ್ಟ್ ಘೋಷಣೆ!*

February 13, 2026

*ಫ್ರೀ.. ಫ್ರೀ.. ಫ್ರೀ! ಪಿಯುಸಿ ಪರೀಕ್ಷೆ ಬರೆಯುವವರಿಗೆ ಸಾರಿಗೆ ಇಲಾಖೆಯಿಂದ ಸಿಹಿಸುದ್ದಿ: ಕಂಡಕ್ಟರ್‌ಗೆ ಈ ಒಂದು ಕಾರ್ಡ್ ತೋರಿಸಿದ್ರೆ ಸಾಕು!*

February 13, 2026

*ಮದೆನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ 100 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಎ.ಎಸ್.ಪೊನ್ನಣ್ಣ ಚಾಲನೆ*

February 13, 2026

*ಮಾ.2ರಂದು “ಕುಂಬ್ಯಾರ್ ಕಲಾಡ್ಚ” ವಾರ್ಷಿಕೋತ್ಸವ*

February 13, 2026

*16ನೇ ಅಂತರಾಷ್ಟ್ರೀಯ ಮಟ್ಟದ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿ ಮಕ್ಕಳ ಸಾಧನೆ*

February 13, 2026

*ಫೆ. 15ರಂದು ಚೆಟ್ಟಳ್ಳಿಯಲ್ಲಿ ಮಹಾಶಿವರಾತ್ರಿ ಆಚರಣೆ*

February 13, 2026

*ಲಂಡನ್‌ನಿಂದ ನೇರವಾಗಿ ಜೈಲಿಗೆ? ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ನೀಡಿದ ಅಂತಿಮ ವಾರ್ನಿಂಗ್‌ನ ಸಾರಾಂಶ ಇಲ್ಲಿದೆ!*

February 13, 2026

*ಸಂಭ್ರಮದಿಂದ ಜರುಗಿದ ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ನ ವಾರ್ಷಿಕ ಮಹೋತ್ಸವ. ಮೈಸೂರು ಧರ್ಮಾಧ್ಯಕ್ಷರಾದ ಬಿಷಪ್ ಫ್ರಾನ್ಸಿಸ್ ಸೆರಾವೋ ರವರ ನೇತೃತ್ವದಲ್ಲಿ ಜರುಗಿದ ದಿವ್ಯ ಬಲಿಪೂಜೆ*

February 13, 2026

*ಫೆ.15 ರಂದು ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ*

February 13, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.