Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡಗು ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ*
  • *ಪಾಲಾಕ್ಷ ಅವರಿಗೆ ಬೀಳ್ಕೊಡುಗೆ*
  • *ಅಂಚೆ ಕಚೇರಿಯಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ವಿಶೇಷ ಶಿಬಿರ*
  • *ಗೌರಿ-ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆ : ಸೆ.13 ರೊಳಗೆ ಅನುಮತಿ ಪಡೆಯಿರಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*
  • *ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ರಾಷ್ಟ್ರೀಯ ನೇತ್ರದಾನ ಪಾಕ್ಷಿಕಾಚರಣೆ*
  • *ಮದರ್ ಥೆರೇಸಾ ಸೇವಾ ಕೇಂದ್ರದ ಸಾಮಾಜಿಕ ಕಳಕಳಿ ಶ್ಲಾಘನೀಯವಾಗಿದೆ: ರೆ. ಫಾ. ಜೇಮ್ಸ್ ಡೊಮಿನಿಕ್. ; ವಿರಾಜಪೇಟೆ ಮದರ್ ಥೆರೇಸಾ ಸೇವಾ ಕೇಂದ್ರದ ವತಿಯಿಂದ ಹಿರಿಯರ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ*
  • *ಸೆ.12 ರಂದು ವಂದೇ ಮಾತರಂ ಸ್ಪರ್ಧೆ*
  • *ಮಲೇಷ್ಯಾ ಏಷ್ಯಾ ಕಪ್ ಟೇಕ್ವಾಂಡೋದಲ್ಲಿ ಕೊಡಗಿನ ಇಬ್ಬರು ಕ್ರೀಡಾಪಟುಗಳಿಗೆ ಪದಕ*
  • *ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ*
  • *ಫೋನಿಕ್ಸ್ ಮಾಡೆಲ್ ಹಂಟ್ ನಲ್ಲಿ ಪ್ರಥಮ ಸ್ಥಾನ ಪಡೆದ ಪಾಲೆಯಂಡ ಕುಶಾಲ್ ನಾಣಯ್ಯ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಟಿವಿ9 ಡಿಜಿಟಲ್ ಡೆಪ್ಯೂಟಿ ಎಡಿಟರ್​​ ಕೊಡಗಿನ ಜಗದೀಶ್ ಬೆಳ್ಯಪ್ಪಗೆ ಬೆಂಗಳೂರು ಪ್ರೆಸ್​ಕ್ಲಬ್​ ಪ್ರಶಸ್ತಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಟಿವಿ9 ಡಿಜಿಟಲ್ ಡೆಪ್ಯೂಟಿ ಎಡಿಟರ್​​ ಕೊಡಗಿನ ಜಗದೀಶ್ ಬೆಳ್ಯಪ್ಪಗೆ ಬೆಂಗಳೂರು ಪ್ರೆಸ್​ಕ್ಲಬ್​ ಪ್ರಶಸ್ತಿ*

ಜನವರಿ 2, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜ.2 NEWS DESK : ಕೊಡಗು ಜಿಲ್ಲೆಯ ಜಗದೀಶ್ ಬೆಳ್ಯಪ್ಪ ಅವರು 2024ನೇ ಸಾಲಿನ ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ 28 ವರ್ಷಗಳಿಂದ ನಿರಂತರವಾಗಿ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಜಗದೀಶ್ ಬೆಳ್ಯಪ್ಪ ಅವರು ಮೂಲತಃ ಕೊಡಗು ಜಿಲ್ಲೆಯವರು. 1997ರಲ್ಲಿ ತಮ್ಮ 22ನೇ ವಯಸ್ಸಿಗೆ ಕೊಡಗು ಜಿಲ್ಲೆಯ ಶಕ್ತಿ ಪತ್ರಿಕೆ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ಛಾಯಚಿತ್ರಕಾರರಾಗಿ ಪ್ರವೇಶಿಸಿದರು. ನಂತರ ಶಕ್ತಿ ಪತ್ರಿಕೆಯ ಉಪಸಂಪಾದಕರಾದರು. ಮುಂದಿನ ದಿನಗಳಲ್ಲಿ ಸಂಯುಕ್ತ ಕರ್ನಾಟಕ, ಕಾವೇರಿ ಚಾನಲ್, ಎನ್​ಡಿ ಟಿವಿಯ ವರದಿಗಾರರಾಗಿ ಕೆಲಸ ಮಾಡಿದರು. ನಂತರ ಬೆಂಗಳೂರಿಗೆ ಬಂದು ಉಷಾಕಿರಣ ಪತ್ರಿಕೆಯಲ್ಲಿ ಸ್ಟೇಟ್ ಎಡಿಷನ್ ಟೀಂ ನಲ್ಲಿದ್ದರು. ಟಿವಿ9 ಮೂಲಕ ಮತ್ತೆ ಕೊಡಗು ಜಿಲ್ಲೆಗೆ ವರದಿಗಾರರಾಗಿ ಜನಪ್ರಿಯಗೊಂಡರು. ಸ್ವಲ್ಪ ಸಮಯದ ನಂತರ ವಿಜಯ ಕರ್ನಾಟಕ ವರದಿಗಾರರಾಗಿ ರಾಜ್ಯ ಮಟ್ಟದ ಎರಡು ಸಾಹಿತ್ಯ ಸಮ್ಮೇಳನದ ವರದಿ ಮಾಡಿ ಮೆಚ್ಚುಗೆ ಪಡೆದರು. ನಂತರ ಮತ್ತೆ ಬೆಂಗಳೂರಿಗೆ ತೆರಳಿದ ಅವರು ಸುವರ್ಣ ಟಿವಿಯ ಇನ್ ಪುಟ್ ಎಡಿಟರ್ ಆಗಿ ಕೆಲಸ ಮಾಡಿದರು.
2 ವರ್ಷದ ನಂತರ ಟಿವಿ9 ನ ಇನ್ ಪುಟ್ ಎಡಿಟರ್ ಆಗುವುದರ ಮೂಲಕ ಜಿಲ್ಲಾ ವರದಿಗಾರರಾಗಿದ್ದವರು ಅದೇ ಸಂಸ್ಥೆಯ ಉನ್ನತ ಸ್ಥಾನಕ್ಕೇರಿದ ಮೊದಲಿಗರಾದರು. ಸದ್ಯ ಟಿವಿ9 ಡಿಜಿಟಲ್​​ನಲ್ಲಿ ಡೆಪ್ಯೂಟಿ ಎಡಿಟರ್ ಆಗಿದ್ದಾರೆ. 28 ವರ್ಷದ ಪತ್ರಿಕೋದ್ಯಮ ಕ್ಷೇತ್ರದ ಹಾದಿಯಲ್ಲಿ ಜಗದೀಶ್ ಬೆಳ್ಯಪ್ಪ ಅವರಿಗೆ ಶಕ್ತಿ ಪತ್ರಿಕೆಯ ಜಿ.ರಾಜೇಂದ್ರ, ಶಶಿಧರ್ ಭಟ್, ಜಯಶೀಲರಾವ್, ವಿ.ಎನ್ ಸುಬ್ಬರಾವ್, ಈಶ್ವರ ದೈತೋಟ, ಸುಗುತಾ ಶ್ರೀನಿವಾಸರಾಜು, ತಿಮ್ಮಪ್ಪ ಭಟ್, ಅನಂತ ಚೀನಿವಾರ್, ರವಿ ಹೆಗಡೆ, ಮಹೇಂದ್ರ ಮಿಶ್ರಾ ಮುಂತಾದ ಮಹನೀಯರು ಸಂಪಾದಕರಾಗಿ ಮಾರ್ಗದರ್ಶನ ಮಾಡಿದ್ದಾರೆ. ಜಗದೀಶ್ ಬೆಳ್ಯಪ್ಪ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಉತ್ತಮ ವರದಿ ನೀಡುವ 3 ಪ್ರಶಸ್ತಿ, ಕೊಡಗು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಉತ್ತಮ ಛಾಯಾಗ್ರಾಹಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪತ್ರಿಕೋದ್ಯಮದ ಸಂಘಟನೆಗಳಲ್ಲಿ ನಿರಂತವಾಗಿ ತೊಡಗಿಸಿಕೊಂಡಿರುವ ಇವರು ಕೊಡಗು ಮತ್ತು ಬೆಂಗಳೂರಿನ ಪ್ರೆಸ್ ಕ್ಲಬ್, ಪತ್ರಕರ್ತರ ಸಂಘ, ಪತ್ರಕರ್ತರ ಸೊಸೈಟಿ, ಪತ್ರಿಕಾ ಭವನದಲ್ಲಿ ಅಧ್ಯಕ್ಷರಾಗಿ, ಪದಾಧಿಕಾರಿಯಾಗಿ, ಸದಸ್ಯರಾಗಿಯೂ ಶ್ರಮಿಸಿದ್ದಾರೆ. ಹೀಗೆ ಕಳೆದ 28ವರ್ಷಗಳಲ್ಲಿ ಪತ್ರಿಕೆ, ಟಿವಿ ಮಾಧ್ಯಮ, ಆಲ್ ಇಂಡಿಯಾ ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕಾ ಕ್ಷೇತ್ರದ ಎಲ್ಲಾ ವಿಭಾಗದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೊಡಗು ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ*

ಸೆಪ್ಟೆಂಬರ್ 7, 2026

*ಪಾಲಾಕ್ಷ ಅವರಿಗೆ ಬೀಳ್ಕೊಡುಗೆ*

ಸೆಪ್ಟೆಂಬರ್ 7, 2026

*ಅಂಚೆ ಕಚೇರಿಯಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ವಿಶೇಷ ಶಿಬಿರ*

ಸೆಪ್ಟೆಂಬರ್ 7, 2026

*ಪಾಲಾಕ್ಷ ಅವರಿಗೆ ಬೀಳ್ಕೊಡುಗೆ*

ಸೆಪ್ಟೆಂಬರ್ 7, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸೋಮವಾರಪೇಟೆ, ಸೆ.7 NEWS DESK : ಮಾದಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವಾ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕ ಪಾಲಾಕ್ಷ ಅವರಿಗೆ…

*ಅಂಚೆ ಕಚೇರಿಯಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ವಿಶೇಷ ಶಿಬಿರ*

ಸೆಪ್ಟೆಂಬರ್ 7, 2026

*ಗೌರಿ-ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆ : ಸೆ.13 ರೊಳಗೆ ಅನುಮತಿ ಪಡೆಯಿರಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಸೆಪ್ಟೆಂಬರ್ 7, 2026

*ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ರಾಷ್ಟ್ರೀಯ ನೇತ್ರದಾನ ಪಾಕ್ಷಿಕಾಚರಣೆ*

ಸೆಪ್ಟೆಂಬರ್ 7, 2026

*ಮದರ್ ಥೆರೇಸಾ ಸೇವಾ ಕೇಂದ್ರದ ಸಾಮಾಜಿಕ ಕಳಕಳಿ ಶ್ಲಾಘನೀಯವಾಗಿದೆ: ರೆ. ಫಾ. ಜೇಮ್ಸ್ ಡೊಮಿನಿಕ್. ; ವಿರಾಜಪೇಟೆ ಮದರ್ ಥೆರೇಸಾ ಸೇವಾ ಕೇಂದ್ರದ ವತಿಯಿಂದ ಹಿರಿಯರ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ*

ಸೆಪ್ಟೆಂಬರ್ 7, 2026

*ಸೆ.12 ರಂದು ವಂದೇ ಮಾತರಂ ಸ್ಪರ್ಧೆ*

ಸೆಪ್ಟೆಂಬರ್ 7, 2026

*ಮಲೇಷ್ಯಾ ಏಷ್ಯಾ ಕಪ್ ಟೇಕ್ವಾಂಡೋದಲ್ಲಿ ಕೊಡಗಿನ ಇಬ್ಬರು ಕ್ರೀಡಾಪಟುಗಳಿಗೆ ಪದಕ*

ಸೆಪ್ಟೆಂಬರ್ 7, 2026

*ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ*

ಸೆಪ್ಟೆಂಬರ್ 7, 2026

*ಫೋನಿಕ್ಸ್ ಮಾಡೆಲ್ ಹಂಟ್ ನಲ್ಲಿ ಪ್ರಥಮ ಸ್ಥಾನ ಪಡೆದ ಪಾಲೆಯಂಡ ಕುಶಾಲ್ ನಾಣಯ್ಯ*

ಸೆಪ್ಟೆಂಬರ್ 7, 2026

*ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ ವಿರಾಜಪೇಟೆಯ ಭರತನಾಟ್ಯ ಪ್ರತಿಭೆ ಲಾವಣ್ಯ ಬೋರ್ಕರ್*

ಸೆಪ್ಟೆಂಬರ್ 7, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.