Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಐಸಿಎಸ್‌ಇ 10 ನೇ ತರಗತಿ ಪರೀಕ್ಷೆಯಲ್ಲಿ ಅಧೃತ್ ಶರ್ಮ ಕೊಡಗಿಗೆ ಪ್ರಥಮ*
  • *ಇಂಟರ್ ಗೆಲ್ ಫೈಟಿಂಗ್ ಚಾಂಪಿಯನ್ ಶಿಪ್ : ಪದಕ ಗೆದ್ದ ವಿದ್ಯಾರ್ಥಿಗಳು*
  • *ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*
  • *ಮೇ 12 ರಂದು ಉದ್ಯೋಗ ಮೇಳ*
  • *ಹುದ್ದೆಗೆ ಅರ್ಜಿ ಆಹ್ವಾನ*
  • *ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ
  • *ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*
  • *ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*
  • *ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*
  • *ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು ವಿದ್ಯಾಲಯದಲ್ಲಿ ಕ್ರೀಡಾದಿನಾಚರಣೆ : ದುಶ್ಚಟಗಳಿಂದ ದೂರವಿರಲು ಕ್ರೀಡೆ ಸಹಕಾರಿ  : ಕುಮಾರ್ ಸುಬ್ಬಯ್ಯ ಅಭಿಪ್ರಾಯ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗು ವಿದ್ಯಾಲಯದಲ್ಲಿ ಕ್ರೀಡಾದಿನಾಚರಣೆ : ದುಶ್ಚಟಗಳಿಂದ ದೂರವಿರಲು ಕ್ರೀಡೆ ಸಹಕಾರಿ  : ಕುಮಾರ್ ಸುಬ್ಬಯ್ಯ ಅಭಿಪ್ರಾಯ*

ಜನವರಿ 4, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜ.4 NEWS DESK : ದುಶ್ಚಟಗಳಿಂದ ದೂರವಿರಲು ಸಹಕಾರಿಯಾಗಿರುವ ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾಥಿ೯ಗಳು ಕ್ರಿಯಾಶೀಲರಾಗಿ ಪಾಲ್ಗೊಳ್ಳುವ ಮೂಲಕ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನು ಸಂರಕ್ಷಿಸಲು ಸಾಧ್ಯ ಎಂದು ಉದ್ಯಮ ತಜ್ಞ ಕೊಕ್ಕಲೇರ ಕುಮಾರ್ ಸುಬ್ಬಯ್ಯ ಅಭಿಪ್ರಾಯಪಟ್ಟಿದ್ದಾರೆ. ನಗರದ ಕೊಡಗು ವಿದ್ಯಾಲಯದ ಕ್ರೀಡಾ ದಿನಾಚರಣೆಯನ್ನು ಕ್ರೀಡಾಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ಕ್ರೀಡೆ ರಹಿತವಾದ ಶಿಕ್ಷಣ ಪ್ರಯೋಜನಕಾರಿಯಾಗದು. ಕ್ರೀಡಾ ತರಬೇತಿಯೊಂದಿಗಿನ ವಿದ್ಯೆಯು ಶಿಕ್ಷಣವನ್ನು ಪರಿಪೂಣ೯ಗೊಳಿಸುತ್ತದೆ ಎಂದರಲ್ಲದೇ, ಹಿರಿಯರು ಹೇಗೆ ವತಿ೯ಸುತ್ತಾರೆ ಎಂಬುದನ್ನೇ ಕಿರಿಯರೂ ಅನುಕರಿಸುವುದರಿಂದಾಗಿ ಹಿರಿಯರ ನಡವಳಿಕೆ ಕಿರಿಯರ ಪಾಲಿಗೆ ಮಾಗ೯ದಶಿ೯ಯಾಗಿರಬೇಕು ಎಂದು ಸಲಹೆ ನೀಡಿದರು, ಕ್ರಿಕೆಟ್ , ಹಣ ಮತ್ತು ಖ್ಯಾತಿ ತಂದುಕೊಂಡುವ ಕ್ರೀಡೆಯಾಗಿದ್ದರೂ ಕ್ರಿಕೆಟ್ ನಲ್ಲಿ ಸೀಮಿತ ಅವಕಾಶಗಳಿದೆ, ಹೀಗಾಗಿ ಭಾರತದಲ್ಲಿ ಇರುವ ಇತರ ಕ್ರೀಡೆಗಳಲ್ಲಿಯೂ ಪಾಲ್ಗೊಳ್ಳಲು ಕ್ರೀಡಾವಿದ್ಯಾಥಿ೯ಗಳು ಆಸಕ್ತಿ ತೋರುವ ಮೂಲಕ ಉತ್ತಮ ಕ್ರೀಡಾತಾರೆಗಳಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದೂ ಅವರು ಅಭಿಪ್ರಾಯಪಟ್ಟರು. ಪೋಷಕರು, ಶಿಕ್ಷಕರು, ಹಿರಿಯರಿಗೆ ಸದಾ ಗೌರವ ನೀಡಿ ಎಂದು ವಿದ್ಯಾಥಿ೯ ವೖಂದಕ್ಕೆ ಕಿವಿಮಾತು ಹೇಳಿದ ಕುಮಾರ್ ಸುಬ್ಬಯ್ಯ, ಇವರೆಲ್ಲರ ಹಾರೈಕೆ ಇದ್ದಾಗ ಮಾತ್ರ ಜೀವನದಲ್ಲಿ ಶ್ರೇಯಸ್ಸು ಸಾಧ್ಯ ಎಂಬುದನ್ನು ಮರೆಯಬೇಡಿ ಎಂದರು. ಇತರರಿಗೆ ಗೌರವ ನೀಡಿ ಅವರಿಂದ ಗೌರವ ಪಡೆದುಕೊಳ್ಳುವುದನ್ನು ಕಲಿತುಕೊಳ್ಳಿ ಎಂದು ವಿದ್ಯಾಥಿ೯ಗಳಿಗೆ ಹಿತವಚನ ಹೇಳಿದ ಕುಮಾರ್ ಸುಬ್ಬಯ್ಯ, ಜೀವನದ ಯಾವುದೇ ಹಂತದಲ್ಲಿಯೂ ತಪ್ಪುಗಳು ಸಹಜವಾಗಿದ್ದು ಇಂಥ ಲೋಪಗಳಿಂದ ಕಲಿತುಕೊಂಡು ಸರಿದಾರಿಯಲ್ಲಿ ಸಾಗಿ ಸಾಧನೆ ಮಾಡಿ ಎಂದೂ ಕರೆ ನೀಡಿದರು. ಭಾರತ ಆಥಿ೯ಕ ಸಂಕಷ್ಟದಲ್ಲಿದ್ದ ಸಂದಭ೯ ಡಾ, ಮನಮೋಹನ್ ಸಿಂಗ್ ಅವರ ದೂರದೖಷ್ಟಿಯಿಂದಾಗಿ ಭಾರತದ ಆಥಿ೯ಕವಾಗಿ ಚೇತರಿಕೆಯಾಗಲು ಸಹಕಾರಿಯಾಯಿತು ಎಂದು ಮನಮೋಹನ್ ಸಿಂಗ್ ಸ್ಮರಿಸಿದ ಉದ್ಯಮ ತಜ್ಞ ಕುಮಾರ್ ಸುಬ್ಬಯ್ಯ, ಜಗತ್ತಿನಲ್ಲಿಯೇ ಕಾರು ಮತ್ತು ಸ್ಟೂಟರ್ ತಯಾರಿಕೆಯಲ್ಲಿ ಭಾರತ ಅಗ್ರಗಣ್ಯ ದೇಶವಾಗಿ ಸಾಧನೆ ಮಾಡುವಲ್ಲಿ ಮನಮೋಹನ್ ಸಿಂಗ್ ಅವರ ಆಥಿ೯ಕ ಉದಾರೀಕರಣ ನೀತಿಯೇ ಕಾರಣವಾಗಿತ್ತು ಎಂದು ಹೇಳಿದರು. ವಿಶ್ವದಲ್ಲಿಯೇ ಭಾರತವು ಆಥಿ೯ಕ ಸಾಧನೆಯಲ್ಲಿ 5 ನೇ ಸ್ಥಾನ ಪಡೆಯುವಲ್ಲಿ ಡಾ. ಮನಮೋಹನ್ ಸಿಂಗ್ ಅನೇಕ ವಷ೯ಗಳ ಹಿಂದೆ ಜಾರಿಗೆ ತಂದ ಆಥಿ೯ಕ ನೀತಿಯೇ ಕಾರಣ ಎಂದೂ ಕುಮಾರ್ ಸುಬ್ಬಯ್ಯ ವಿಶ್ಲೇಷಿಸಿದರು. ಕೊಡಗು ವಿದ್ಯಾಲಯದ ಶೈಕ್ಷಣಿಕ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕುಮಾರ್ ಸುಬ್ಬಯ್ಯ, ಜಿಲ್ಲೆಯಲ್ಲಿಯೇ ವಿಶೇಷ ಮಕ್ಕಳ ಶಾಲೆಯನ್ನೂ ಒಳಗೊಂಡಿರುವ ಏಕೈಕ ಶಾಲೆಯಾಗಿ ಕೊಡಗು ವಿದ್ಯಾಲಯ ಮಾನವೀಯ ನೆಲೆಯಲ್ಲಿಯೂ ಸಾಧನೆಯ ಕೀತಿ೯ಗೆ ಕಾರಣವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ಉಪಾಧ್ಯಕ್ಷೆ ಊವ೯ಶಿ ಮುದ್ದಯ್ಯ ಮಾತನಾಡಿ , ಫೀಲ್ಡ್ ಮಾಷ೯ಲ್ ಕೆ.ಎಂ. ಕಾಯ೯ಪ್ಪ ಅವರ ಕನಸಿನ ಕೂಸಾಗಿ ಪ್ರಾರಂಭವಾದ ಕೊಡಗು ವಿದ್ಯಾಲಯ 40 ವಷ೯ಗಳಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದೆ, ಕೋವಿಡ್ ಲಾಕ್ ಡೌನ್ ದಿನಗಳು, ಪ್ರಾಕೖತ್ತಿಕ ವಿಕೋಪದಂಥ ಸವಾಲುಗಳನ್ನೂ ಸಂಸ್ಥೆಯು ಸಮಥ೯ವಾಗಿ ಎದುರಿಸಿ ಉತ್ತಮ ಶಿಕ್ಷಣ ನೀಡಿದೆ ಎಂದರಲ್ಲದೇ, ವಿದ್ಯಾಥಿ೯ಗಳು ಕಲಿತ ವಿದ್ಯೆಯ ಜತೆಗೇ ಕ್ರೀಡಾ, ಸಾಂಸ್ಕೖತಿಕ ಪ್ರತಿಭೆಗಳನ್ನು ಅನಾವರಣಗೊಳಿಸುವಲ್ಲಿ ಕ್ರೀಡಾದಿನಾಚರಣೆ ಮಹತ್ವ ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು. ಕಾಯ೯ಕ್ರಮದಲ್ಲಿ ಕೊಡಗು ವಿದ್ಯಾಲಯದ ಹಾಕಿ ಮತ್ತು ಕ್ರೀಡಾರಂಗದಲ್ಲಿ ರಾಷ್ಟ್ರೀಯ ಸಾಧನೆಗೆ ಕಾರಣವಾಗಿರುವ ಶಾಲೆಯ ಕ್ರೀಡಾ ತರೇತುದಾರರಾದ ದೀನಾ, ಪಾವ೯ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶೈಕ್ಷಣಿಕ ಹಾಗೂ ಕ್ರೀಡಾ ಸಾಧಕ ವಿದ್ಯಾಥಿ೯ಗಳಿಗೆ ಬಹುಮಾನ ವಿತರಿಸಲಾಯಿತು. ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ರವಿ ಪಿ, ನಿದೇ೯ಶಕರಾದ ಸಿ.ಎಸ್. ಗುರುದತ್, ಪವಿತ್ರ ಅಪ್ಪಯ್ಯ, ನಿಯತ ದೇವಯ್ಯ ಸೋಮಯ್ಯ, ರಘುಮಾದಪ್ಪ, ಪಿ. ಈ. ಕಾಳಯ್ಯ, , ವಿಶೇಷ ಚೇತನ ಮಕ್ಕಳ ಶಾಲಾ ಮುಖ್ಯ ಶಿಕ್ಷಕಿ ಗೀತಾ ಶ್ರೀಧರ್, ಶಾಂತಿ ಶಂಕರ್ ಸೇರಿದಂತೆ ಪ್ರಮುಖರು ವೇದಿಕೆಯಲ್ಲಿದ್ದರು. ಶಿಕ್ಷಕಿ ಅಲೆಮಾಡ ಚಿತ್ರಾ ನಂಜಪ್ಪ, ಸಂಗೀನ್ ಕುಶಾಲಪ್ಪ ನಿರೂಪಿಸಿದ ಕಾಯ೯ಕ್ರಮದಲ್ಲಿ ಶಾಲೆಯ ನೂರಾರು ವಿದ್ಯಾಥಿ೯ಗಳಿಂದ ಆಕಷ೯ಕ ಸಾಂಸ್ಕೖತಿಕ ಕಾಯ೯ಕ್ರಮಗಳು, ಕ್ರೀಡಾಟುವಟಿಕೆಗಳು ಗಮನ ಸೆಳೆದವು, ಕೊಡಗು ವಿದ್ಯಾಲಯದ ವಿಶೇಷ ಚೇತನ ಮಕ್ಕಳು ಪ್ರಸ್ತುತ ಪಡಿಸಿದ ಹಂ ಹೋಂಗೇ ಕಾಮಿಯಾಬ್ ..ಏಕ್ ದಿನ್ ಎಂಬ ನೖತ್ಯ ಪ್ರೇಕ್ಷಕರ ಅಪಾರ ಮೆಚ್ಚಗೆಗೆ ಕಾರಣವಾಯಿತು. ಗಣರಾಜ್ಯೋತವ ಪೆರೇಡ್ ನಲ್ಲಿ ಪಾಲ್ಗೊಂಡಿದ್ದ ಶಾಲೆಯ ಎನ್ .ಸಿ. ಸಿ. ಕೆಡೆಟ್ ರಘುವಂಶಿ ಶಿವಕುಮಾರ್ ನೇತೖತ್ವದಲ್ಲಿ ಜರುಗಿದ ವಿದ್ಯಾಥಿ೯ಗಳ ಪಥಸಂಚಲನ ಆಕಷ೯ಕವಾಗಿತ್ತು. ಅನೂಹ್ಯ ರವಿಶಂಕರ್, ಆದ್ಯ, ದಿಯಾ ಪ್ರಾಥಿ೯ಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಐಸಿಎಸ್‌ಇ 10 ನೇ ತರಗತಿ ಪರೀಕ್ಷೆಯಲ್ಲಿ ಅಧೃತ್ ಶರ್ಮ ಕೊಡಗಿಗೆ ಪ್ರಥಮ*

ಮೇ 10, 2026

*ಇಂಟರ್ ಗೆಲ್ ಫೈಟಿಂಗ್ ಚಾಂಪಿಯನ್ ಶಿಪ್ : ಪದಕ ಗೆದ್ದ ವಿದ್ಯಾರ್ಥಿಗಳು*

ಮೇ 10, 2026

*ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*

ಮೇ 9, 2026

*ಇಂಟರ್ ಗೆಲ್ ಫೈಟಿಂಗ್ ಚಾಂಪಿಯನ್ ಶಿಪ್ : ಪದಕ ಗೆದ್ದ ವಿದ್ಯಾರ್ಥಿಗಳು*

ಮೇ 10, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಮಡಿಕೇರಿ NEWS DESK ಮೇ 10 : ಇಂಡಿಯನ್ ಇಂಟರ್ ಗೆಲ್ ಫೈಟಿಂಗ್ ಅಸೋಸಿಯೇಷನ್ ವತಿಯಿಂದ ಉತ್ತರ ಪ್ರದೇಶದ ಸಹರಂಗಪುರದಲ್ಲಿ…

*ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 12 ರಂದು ಉದ್ಯೋಗ ಮೇಳ*

ಮೇ 9, 2026

*ಹುದ್ದೆಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ

ಮೇ 9, 2026

*ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*

ಮೇ 9, 2026

*ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*

ಮೇ 9, 2026

*ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*

ಮೇ 9, 2026

*ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*

ಮೇ 9, 2026

*ರಾಷ್ಟ್ರಮಟ್ಟದ ಸೆಸ್ಟೋಬಾಲ್ ಕ್ರೀಡೆ : ಮೊದಲ ಬಾರಿಗೆ ಚಿನ್ನ ಗೆದ್ದ ಕರ್ನಾಟಕ ತಂಡ : ಕೀರ್ತಿ ತಂದ ಕೊಡಗಿನ ಕ್ರೀಡಾಪಟುಗಳು*

ಮೇ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.