Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸುಂಟಿಕೊಪ್ಪ : ಶ್ರದ್ಧಾಭಕ್ತಿಯಿಂದ ಜರುಗಿದ ಸಂತ ಅಂತೋಣಿ ಅವರ ವಾರ್ಷಿಕೋತ್ಸವ*
  • *ಕೊಡಗು ಬ್ಲಡ್ ಡೋನರ್ಸ್ ನಿಂದ ಪಿ.ಕೆ.ರಾಜುಗೆ ಬೀಳ್ಕೊಡುಗೆ*
  • *ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಿಂದ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ*
  • *ಪೊನ್ನಂಪೇಟೆ : ಮೇ 12 ರಂದು ವಿವಿಧೆಡೆಯಿಂದ ವಿದ್ಯುತ್ ವ್ಯತ್ಯಯ*
  • *ಮೇ 13 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ*
  • *ಸಿಸಿ ರಸ್ತೆ ಕಾಮಗಾರಿ : ಸೋಮವಾರಪೇಟೆಯಲ್ಲಿ ವಾಹನ ಸಂಚಾರ ಬದಲಿ ಮಾರ್ಗ ವ್ಯವಸ್ಥೆ*
  • *ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ*
  • *ಪತ್ರಕರ್ತರ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ : ಮೀಡಿಯಾ ಮಾಸ್ಟರ್ಸ್ ತಂಡ ಪ್ರಥಮ*
  • *ಕೊಡಗು : ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಡಾ.ಸಹನಾ ಎಸ್.ಹಾದಿಮನಿ ಅಧಿಕಾರ ಸ್ವೀಕಾರ*
  • *ಅಹೋರಾತ್ರಿ ಪ್ರತಿಭಟನೆ ಅರ್ಥಹೀನ : ಮಾದಾಪುರ ಗ್ರಾ.ಪಂ ವ್ಯಾಪ್ತಿಯ ಬಡವರಿಗೆ ನಿವೇಶನ ನೀಡಲು ಆಗ್ರಹ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ದುರ್ಬಲ ವರ್ಗದ ಧ್ವನಿ ವೈ.ಕೆ.ಗಣೇಶ್ ಗೆ ಗೋಣಿಕೊಪ್ಪದಲ್ಲಿ ನುಡಿನಮನ : ಆದಿವಾಸಿ ಮಕ್ಕಳಿಗೆ ಶಿಕ್ಷಣದಿಂದ ಬಲ ತುಂಬಿ : ಕೇರಳ ಸಚಿವ ಓ.ಆರ್.ಕೇಳು ಕರೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ದುರ್ಬಲ ವರ್ಗದ ಧ್ವನಿ ವೈ.ಕೆ.ಗಣೇಶ್ ಗೆ ಗೋಣಿಕೊಪ್ಪದಲ್ಲಿ ನುಡಿನಮನ : ಆದಿವಾಸಿ ಮಕ್ಕಳಿಗೆ ಶಿಕ್ಷಣದಿಂದ ಬಲ ತುಂಬಿ : ಕೇರಳ ಸಚಿವ ಓ.ಆರ್.ಕೇಳು ಕರೆ*

ಜನವರಿ 29, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜ.29 NEWS DESK : ನೋವಿನ ಬದುಕು ಸಾಗಿಸುತ್ತಿರುವ ಆದಿವಾಸಿ ಕುಟುಂಬಗಳ ಮಕ್ಕಳಿಗೆ ಸರಕಾರ ಅಗತ್ಯ ಶಿಕ್ಷಣ ನೀಡುವ ಮೂಲಕ ಬಲ ತುಂಬಬೇಕು ಎಂದು ಕೇರಳ ಸರಕಾರದ ಸಮಾಜ ಕಲ್ಯಾಣ ಮತ್ತು ಗಿರಿಜನ ಖಾತೆ ಸಚಿವ ಓ.ಆರ್.ಕೇಳು ಕರೆ ನೀಡಿದ್ದಾರೆ. ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಕೊಡಗಿನ ವೈ.ಕೆ.ಗಣೇಶ್ ಅವರಿಗೆ ವಿವಿಧ ಸಂಘಟನೆಗಳು ಗೋಣಿಕೊಪ್ಪಲಿನಲ್ಲಿ ನುಡಿನಮನದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದವು. ಹೋರಾಟಗಾರ್ತಿ ಜೆ.ಆರ್.ಪ್ರೇಮ ಅವರ ಅಧ್ಯಕ್ಷತೆಯಲ್ಲಿ ಎಪಿಎಂಸಿ ಸಭಾಂಗಣದಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು ತುಳಿತಕ್ಕೊಳಗಾದವರ ಪರ ಧ್ವನಿ ಎತ್ತುತ್ತಿದ್ದ ವೈ.ಕೆ.ಗಣೇಶ್ ಅವರು ಅನಾರೋಗ್ಯದಿಂದ ಸಣ್ಣ ವಯಸ್ಸಿನಲ್ಲೇ ನಮ್ಮನ್ನು ಅಗಲಿರುವುದು ನೋವಿನ ಸಂಗತಿಯಾಗಿದೆ. ಆದಿವಾಸಿಗಳ ಏಳಿಗೆಗಾಗಿ ಅಪಾರ ಕೊಡುಗೆ ನೀಡಿದ್ದಾರೆ, ದಲಿತರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ಮಾಡಿದ್ದಾರೆ ಎಂದರು. ಜಿಲ್ಲೆಯಲ್ಲಿ ಆದಿವಾಸಿಗಳು ಕೂಲಿ ಕೆಲಸ ಮಾಡಿಕೊಂಡು ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಮೂಲಭೂತ ಸೌಲಭ್ಯಗಳ ಕೊರತೆಯಿಂದ ನೋವು ಅನುಭವಿಸುತ್ತಿದ್ದಾರೆ. ಸರಕಾರ ಆದಿವಾಸಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಎಲ್ಲಾ ಸೌಲಭ್ಯಗಳನ್ನು ನೀಡುವ ಮೂಲಕ ಸಮಸ್ಯೆಗಳಿಂದ ಮುಕ್ತಗೊಳಿಸಬೇಕು. ಆದಿವಾಸಿಗಳು ತಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು ಎಂದು ತಿಳಿಸಿದರು. ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕ ಡಾ.ಎಸ್.ವೈ.ಗುರುಶಾಂತ್ ಮಾತನಾಡಿ ಕೊಡಗಿನ ಆದಿವಾಸಿಗಳು ಹಿಂದೆ ಭೂಮಿಯ ಒಡೆಯರಾಗಿ ಜೀವನ ಸಾಗಿಸುತ್ತಿದ್ದರು. ತಮ್ಮ ಸಂಸ್ಕøತಿ, ಆಚಾರ, ವಿಚಾರವನ್ನು ಅನುಸರಿಸುತ್ತಿದ್ದರು. ಆದರೆ ಇಂದು ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ, ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಬಹಳ ಹಿಂದಿನಿಂದಲೂ ಆದಿವಾಸಿಗಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಿದೆ, ತಮಗಾದ ನೋವನ್ನು ವೈ.ಕೆ.ಗಣೇಶ್ ಅವರು ಹಂಚಿಕೊಳ್ಳುತ್ತಿದ್ದರು ಎಂದು ಬೇಸರ ವ್ಯಕ್ತಪಡಿಸಿದರು. ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ್ ಮಾತನಾಡಿ ಆಹಾರ, ಶಿಕ್ಷಣ ಮತ್ತು ಭೂಮಿಗಾಗಿ ಹೋರಾಟ ನಡೆಸಿದ ಗಣೇಶ್ ಅವರ ಅಗಲಿಕೆ ಅತೀವ ನೋವನ್ನುಂಟು ಮಾಡಿದೆ. ಬಡತನದಿಂದ ಬಂದ ಅವರು ಬಡ ಜನರಿಗೋಸ್ಕರ ಬದುಕಿದರು. ಆದಿವಾಸಿಗಳ ಪರ ಕಾನೂನು ಹೋರಾಟ ನಡೆಸಲು ತನ್ನ ಮಗಳನ್ನು ವಕೀಲೆಯನ್ನಾಗಿ ಮಾಡಬೇಕೆನ್ನುವ ಕನಸನ್ನು ಗಣೇಶ್ ಕಂಡಿದ್ದರು. ಅವರ ಕನಸನ್ನು ನಾವೆಲ್ಲರು ಸೇರಿ ನನಸು ಮಾಡೋಣ, ಅವರ ಕುಟುಂಬದೊಂದಿಗೆ ಸಿಪಿಐಎಂ ಪಕ್ಷ ಇರಲಿದೆ ಎಂದು ಭರವಸೆ ನೀಡಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ರಮೇಶ್ ಹೆಚ್.ಬಿ ಕುಡಿಯುವ ನೀರು, ರಸ್ತೆ, ಸೇತುವೆ, ಚರಂಡಿ, ಶೌಚಾಲಯ, ರೇಷನ್ ಕಾರ್ಡ್, ಆಧಾರ್ ಕಾರ್ಡ್‍ಗಳಂತಹ ನಾಗರಿಕ ಸೌಲಭ್ಯಗಳನ್ನು ಗಿರಿಜನ ಹಾಡಿಗಳ ಜನರಿಗೆ ಸಿಗುವಂತೆ ಮಾಡುವಲ್ಲಿ ಹೋರಾಟಗಾರ ವೈ.ಕೆ.ಗಣೇಶ್ ಅವರು ಯಶಸ್ವಿಯಾಗಿದ್ದರು. ಕಸ್ತೂರಿರಂಗನ್ ವರದಿ ಅನುಷ್ಠಾನ ಮತ್ತು ಪರಿಸರ ಸೂಕ್ಷ್ಮ ವಲಯಗಳ ನಿರ್ಮಾಣದ ವಿರುದ್ಧ ಧ್ವನಿ ಎತ್ತಿದ್ದರು. ಇತ್ತೀಚೆಗೆ ಭೂಮಿ ಗುತ್ತಿಗೆ ನೀಡುವ ಸರಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹೋರಾಟ ನಡೆಸಿದ್ದರು. ಗಣೇಶ್ ಅವರ ಹೋರಾಟ ದುರ್ಬಲರ ಮತ್ತು ತುಳುತಕ್ಕೊಳಗಾದವರ ಪರವಾಗಿತ್ತು ಎಂದು ಬಣ್ಣಿಸಿದರು. ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಡಾ.ದುರ್ಗಾ ಪ್ರಸಾದ್ ಮಾತನಾಡಿ ಆದಿವಾಸಿ ಸಂಘಟನೆಯ ಅಖಿಲ ಭಾರತ ಸಮ್ಮೇಳನ ರಾಂಚಿಯಲ್ಲಿ ನಡೆದಾಗ ಗಣೇಶ್ ಅವರು ವೇದಿಕೆಯಲ್ಲಿ ದೇಶದ ದೊಡ್ಡ ದೊಡ್ಡ ಮುಖಂಡರ ಎದುರು ಆದಿವಾಸಿಗಳ ಪರ ಮಾತನಾಡಿದ್ದರು. ಸದಾ ಆದಿವಾಸಿಗಳ ಏಳಿಗೆಗಾಗಿ ಶ್ರಮಿಸುತ್ತಿದ್ದ ಅವರ ಅಗಲಿಕೆ ದುರ್ಬಲರ ಹೋರಾಟಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ ಎಂದರು. ಅಖಿಲ ಭಾರತ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಲತೀಫ್, ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು, ಕೊಡಗು ಜಿಲ್ಲಾ ತೋಟ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಟ್ಟಪ್ಪ ಅವರುಗಳು ಮಾತನಾಡಿ, ಆದಿವಾಸಿಗಳ ಏಳಿಗೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ವೈ.ಕೆ.ಗಣೇಶ್ ಅವರ ಹೋರಾಟದ ಭಾಗವನ್ನು ನಾವುಗಳು ಮುಂದುವರೆಸುವ ಮೂಲಕ ನೊಂದವರಿಗೆ ನ್ಯಾಯ ಒದಗಿಸಬೇಕಾಗಿದೆ ಎಂದು ತಿಳಿಸಿದರು. ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಮುಖಂಡರಾದ ಪಿ.ಕೆ.ರಮೇಶ್, ಅಶೋಕ, ನ್ಯಾನ್ಸಿ, ತಿಮ್ಮ, ರೋಹಿಣಿ, ನೇತ್ರಾವತಿ, ರಾಮು ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಆದಿವಾಸಿ ಕುಟುಂಬಗಳು ಪಾಲ್ಗೊಂಡು ಗಣೇಶ್ ಅವರ ಅಗಲಿಕೆಗೆ ಕಂಬನಿ ಮಿಡಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸುಂಟಿಕೊಪ್ಪ : ಶ್ರದ್ಧಾಭಕ್ತಿಯಿಂದ ಜರುಗಿದ ಸಂತ ಅಂತೋಣಿ ಅವರ ವಾರ್ಷಿಕೋತ್ಸವ*

ಮೇ 11, 2026

*ಕೊಡಗು ಬ್ಲಡ್ ಡೋನರ್ಸ್ ನಿಂದ ಪಿ.ಕೆ.ರಾಜುಗೆ ಬೀಳ್ಕೊಡುಗೆ*

ಮೇ 11, 2026

*ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಿಂದ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ*

ಮೇ 11, 2026

*ಕೊಡಗು ಬ್ಲಡ್ ಡೋನರ್ಸ್ ನಿಂದ ಪಿ.ಕೆ.ರಾಜುಗೆ ಬೀಳ್ಕೊಡುಗೆ*

ಮೇ 11, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 11 NEWS DESK :  ಮಡಿಕೇರಿ ನಗರ ಠಾಣೆ ವೃತ್ತ ನಿರೀಕ್ಷರಾಗಿದ್ದ ಟಿ.ಕೆ.ರಾಜು ಅವರಿಗೆ ಆತ್ಮೀಯ ಬೀಳ್ಕೊಡುಗೆ…

*ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಿಂದ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ*

ಮೇ 11, 2026

*ಪೊನ್ನಂಪೇಟೆ : ಮೇ 12 ರಂದು ವಿವಿಧೆಡೆಯಿಂದ ವಿದ್ಯುತ್ ವ್ಯತ್ಯಯ*

ಮೇ 11, 2026

*ಮೇ 13 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ*

ಮೇ 11, 2026

*ಸಿಸಿ ರಸ್ತೆ ಕಾಮಗಾರಿ : ಸೋಮವಾರಪೇಟೆಯಲ್ಲಿ ವಾಹನ ಸಂಚಾರ ಬದಲಿ ಮಾರ್ಗ ವ್ಯವಸ್ಥೆ*

ಮೇ 11, 2026

*ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ*

ಮೇ 11, 2026

*ಪತ್ರಕರ್ತರ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ : ಮೀಡಿಯಾ ಮಾಸ್ಟರ್ಸ್ ತಂಡ ಪ್ರಥಮ*

ಮೇ 11, 2026

*ಕೊಡಗು : ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಡಾ.ಸಹನಾ ಎಸ್.ಹಾದಿಮನಿ ಅಧಿಕಾರ ಸ್ವೀಕಾರ*

ಮೇ 11, 2026

*ಅಹೋರಾತ್ರಿ ಪ್ರತಿಭಟನೆ ಅರ್ಥಹೀನ : ಮಾದಾಪುರ ಗ್ರಾ.ಪಂ ವ್ಯಾಪ್ತಿಯ ಬಡವರಿಗೆ ನಿವೇಶನ ನೀಡಲು ಆಗ್ರಹ*

ಮೇ 11, 2026

*ಕೊಡಗು ಪ್ರಶಿಕ್ಷಣ ವರ್ಗ ಕಾರ್ಯಕ್ರಮ : ನಿರ್ದಿಷ್ಟ ಗುರಿ ಹೊಂದಿರುವ‌ ನಮ್ಮ ಪಕ್ಷ ಇತರೆ ಪಕ್ಷಗಳಿಗಿಂತ ಭಿನ್ನವಾಗಿದೆ : ಸಂಸದ ಯದುವೀರ್*

ಮೇ 11, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.