
ನಾಪೋಕ್ಲು ಫೆ.22 NEWS DESK : ಎಮ್ಮೆಮಾಡು ಮಖಾಂ ಉರೂಸ್ ಪ್ರಯುಕ್ತ ಸೆ.24 ರಂದು ನಡೆಯಲಿರುವ ಸಾರ್ವಜನಿಕ ಸಮ್ಮೇಳನಕ್ಕೆ ಜಿಲ್ಲೆ ಮತ್ತು ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬರುವುದರಿಂದ ಅಲ್ಲದೇ ನಾಪೋಕ್ಲುವಿನಲ್ಲಿ ಸಂತೆ ನಡೆಯಲಿರುವುದರಿಂದ ನಾಪೋಕ್ಲು ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆ ಆಗುವ ಸಂಭವ ಇರುತ್ತದೆ. ಆದ್ದರಿಂದ ನಾಪೋಕ್ಲು ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದ್ದು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ನಾಪೋಕ್ಲು ಪೊಲೀಸ್ ಠಾಣಾಧಿಕಾರಿಗಳು ಕೋರಿದ್ದಾರೆ. ನಾಪೋಕ್ಲು ನಗರದಲ್ಲಿ ಸುಗಮ ಸಂಚಾರಕ್ಕಾಗಿ ಎಮ್ಮೆಮಾಡು ಮಖಾಂ ಉರೂಸ್ ಗೆ ಭಾಗವಹಿಸಲು ಬರುವವರು ಹಾಗೂ ಸಾರ್ವಜನಿಕರು ತಮ್ಮ ತಮ್ಮ ವಾಹನವನ್ನು ಕೊಟ್ಟಮುಡಿ ಜಂಕ್ಷನ್ ನಿಂದ ಎಮ್ಮೆಮಾಡು ಜಂಕ್ಷನ್ ವರೆಗೆ ರಸ್ತೆಯ ಎರಡು ಬದಿಯಲ್ಲಿ ನಿಲ್ಲಿಸದಂತೆ ಮನವಿ ಮಾಡಿದ್ದಾರೆ.
ಸಾರ್ವಜನಿಕರಿಗೆ ಪಾರ್ಕಿಂಗ್ ಸ್ಥಳ:
1) ಪೊಲೀಸ್ ಮೈದಾನ
2) ಕಂದಾಯ ಇಲಾಖೆಯ ಮುಂಭಾಗ
3) ಹಳೆ ಪೊಲೀಸ್ ವಸತಿ ತೆರವು ಮಾಡಿದ ಸ್ಥಳ
4) ಚೆರಿಯಪರುಂಬು ಕ್ರೀಡಾಂಗಣದ ಮುಂಭಾಗ ಮೈದಾನ











