Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಮಳೆ ಭೀತಿ! ಶ್ರೀಲಂಕಾ ಹವಾಮಾನ ಇಲಾಖೆ ನೀಡಿದ ಆ ಒಂದು ಎಚ್ಚರಿಕೆ ಅಭಿಮಾನಿಗಳಿಗೆ ಬಿಗ್ ಶಾಕ್!*
  • *ವಾಯುಪಡೆ ಸೇರಲು 10th ಪಾಸ್ ಸಾಕು! ತಿಂಗಳಿಗೆ ಭರ್ಜರಿ ಸಂಬಳ; ನಿಮ್ಮ ಜಿಲ್ಲೆಯಲ್ಲೂ ನೇಮಕಾತಿ ಇದೆಯೇ? ಚೆಕ್ ಮಾಡಿ!*
  • *ಬೆಂಗಳೂರು ಐಪಿಎಲ್ ಪಂದ್ಯಗಳಿಗೆ ಷರತ್ತುಬದ್ಧ ಒಪ್ಪಿಗೆ! ಸಂಭ್ರಮಾಚರಣೆ ಮಾಡಿದ್ರೆ ಬೀಳುತ್ತೆ ದಂಡ? ಗೃಹ ಸಚಿವರು ಹೇಳಿದ್ದೇನು?*
  • *ಗಂಡಸರಿಗೂ ಬಸ್ ಪ್ರಯಾಣ ಉಚಿತ! ಮಹಿಳೆಯರಿಗೆ 25,000 ರೂ. ನಗದು; ಕರ್ನಾಟಕದ ಪಕ್ಕದ ರಾಜ್ಯದಲ್ಲಿ ಭರ್ಜರಿ ಗಿಫ್ಟ್ ಘೋಷಣೆ!*
  • *ಫ್ರೀ.. ಫ್ರೀ.. ಫ್ರೀ! ಪಿಯುಸಿ ಪರೀಕ್ಷೆ ಬರೆಯುವವರಿಗೆ ಸಾರಿಗೆ ಇಲಾಖೆಯಿಂದ ಸಿಹಿಸುದ್ದಿ: ಕಂಡಕ್ಟರ್‌ಗೆ ಈ ಒಂದು ಕಾರ್ಡ್ ತೋರಿಸಿದ್ರೆ ಸಾಕು!*
  • *ಮದೆನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ 100 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಎ.ಎಸ್.ಪೊನ್ನಣ್ಣ ಚಾಲನೆ*
  • *ಮಾ.2ರಂದು “ಕುಂಬ್ಯಾರ್ ಕಲಾಡ್ಚ” ವಾರ್ಷಿಕೋತ್ಸವ*
  • *16ನೇ ಅಂತರಾಷ್ಟ್ರೀಯ ಮಟ್ಟದ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿ ಮಕ್ಕಳ ಸಾಧನೆ*
  • *ಫೆ. 15ರಂದು ಚೆಟ್ಟಳ್ಳಿಯಲ್ಲಿ ಮಹಾಶಿವರಾತ್ರಿ ಆಚರಣೆ*
  • *ಲಂಡನ್‌ನಿಂದ ನೇರವಾಗಿ ಜೈಲಿಗೆ? ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ನೀಡಿದ ಅಂತಿಮ ವಾರ್ನಿಂಗ್‌ನ ಸಾರಾಂಶ ಇಲ್ಲಿದೆ!*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಬಾಳೆಗುಂಡಿ ಹಾಡಿಯಲ್ಲಿ ಸೋಲಾರ್ ದೀಪ, ತೋಟಗಾರಿಕೆ ಗಿಡ, ಬಿತ್ತನೆ ಬೀಜಗಳ ವಿತರಣೆ*
ಇತ್ತೀಚಿನ ಸುದ್ದಿಗಳು

*ಬಾಳೆಗುಂಡಿ ಹಾಡಿಯಲ್ಲಿ ಸೋಲಾರ್ ದೀಪ, ತೋಟಗಾರಿಕೆ ಗಿಡ, ಬಿತ್ತನೆ ಬೀಜಗಳ ವಿತರಣೆ*

March 5, 20252 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ಸಿದ್ದಾಪುರ ಮಾ.5 NEWS DESK : ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (NABARD) -ಬೆಂಗಳೂರು ಹಾಗೂ ಓ.ಡಿ.ಪಿ. ಸಂಸ್ಥೆ ಮೈಸೂರು ಸಹಭಾಗಿತ್ವದಲ್ಲಿ ಬಾಳೆಗುಂಡಿ ಹಾಡಿಯಲ್ಲಿ  ಬುಡಕಟ್ಟು ಸಮುದಾಯದ ಅಭಿವೃದ್ಧಿ ಕಾರ್ಯಕ್ರಮದಡಿ ಸೋಲಾರ್ ದೀಪಗಳು, ತೋಟಗಾರಿಕೆ ಗಿಡಗಳು ಹಾಗೂ ಬಿತ್ತನೆ ಬೀಜಗಳ ವಿತರಣಾ ಕಾರ್ಯಕ್ರಮ ನಡೆಯಿತು.  ಬಾಳೆಗುಂಡಿ, ವಾಲ್ನೂರು-ತ್ಯಾಗತ್ತೂರು ವ್ಯಾಪ್ತಿಯ 50 ಜನ ಫಲಾನುಭವಿಗಳಿಗೆ,
ಸೋಲಾರ್ ಮನೆದೀಪಾ, ಹಣ್ಣಿನ ಗಿಡ, ಅಡಕೆಗಿಡ, ತೆಂಗಿನ ಸಸಿಗಳು, ಮೆಣಸು ಬಳ್ಳಿ, ಹಾಗೂ ತರಕಾರಿ ಬಿತ್ತನೆ ಬೀಜಗಳನ್ನು ವಿತರಿಸಲಾಯಿತು.  ಸಾವಯವ ಕೃಷಿ, ಮಣ್ಣು ಮತ್ತು ನೀರು ಪರೀಕ್ಷೆ, ಜಾಲಬಂಧ, ಸರ್ಕಾರಿ ಸೌಲಭ್ಯಗಳ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ಓ.ಡಿಪಿ ಸಂಸ್ಥೆಯ ನಿರ್ದೇಶಕರಾದ ಫಾದರ್ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ ಮಾತನಾಡಿ ವಾಲ್ನೂರು, ಬಾಳೆಗುಂಡಿ, ತ್ಯಾಗತ್ತೂರು ಹಾಡಿಗಳಲ್ಲಿ ನಬಾರ್ಡ್ ಬೆಂಗಳೂರು ಹಾಗೂ ಓ.ಡಿ.ಪಿ ಸಂಸ್ಥೆಯ ಸಹಕಾರದಿಂದ ಬುಡಕಟ್ಟು ಜನರ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲೂ ಜನರ ಸಹಕಾರ ಮುಖ್ಯವಾಗಿದೆ. ಇಲ್ಲಿಯ ಜನರನ್ನು ಒಗ್ಗೂಡಿಸಿ, ಮಹಿಳೆಯರಿಗೆ 3 ಮಹಿಳಾ ಸ್ವ-ಸಹಾಯ ಸಂಘಗಳನ್ನು ರಚಿಸಿ, ವಿವಿಧ ತರಬೇತಿಗಳ ಮೂಲಕ ಅರಿವನ್ನು ಮೂಡಿಸಿದೆ. ಗ್ರಾಮಕ್ಕೆ ಭೇಟಿ ನೀಡಿ ಅವರ ಕಷ್ಟಸುಖಗಳಿಗೆ ಓ.ಡಿ.ಪಿ. ಸಂಸ್ಥೆಯು ಸ್ಪಂದಿಸಿದೆ. ಇಲ್ಲಿಯ ಜನರ ಜೀವನೋಪಾಯ ಅಭಿವೃದ್ಧಿಗಾಗಿ ಈಗಾಗಲೇ 20 ಕುಟುಂಬಗಳಿಗೆ ಆದಾಯೋತ್ಪನ್ನ ಚಟುವಟಿಕೆ ನಡೆಸಲು ಕೋಳಿ ಮರಿಗಳು, ಹಂದಿ ಮರಿಗಳನ್ನು ನೀಡಲಾಗಿದ್ದು, ಜೀವನಕ್ಕೆ ಆರ್ಥಿಕ ಸಹಾಯವಾಗುತ್ತಿದೆ. ಪಶು ಸಂಗೋಪನಾ ಇಲಾಖೆ ಮೂಲಕ ಹಂದಿ ಹಾಗೂ ಕೋಳಿಗಳಿಗೆ ಚುಚ್ಚು ಮದ್ದು ನೀಡಿ ಸಾಕಾಣಿಕೆ ಬಗ್ಗೆ ಶಿಬಿರಗಳನ್ನು ನಡೆಸಿದೆ. ನಬಾರ್ಡ್ ಹಾಗೂ ಓ.ಡಿ.ಪಿ ಸಂಸ್ಥೆಯು ಜನರ ಸಮಸ್ಯೆಗಳಿಗೆ ಸ್ವಂದಿಸಿ ಎಲ್ಲಾ ಕುಟುಂಬಗಳು ಅಭಿವೃದ್ಧಿ ಹೊಂದಿ ತಮ್ಮ ಜೀವನದಲ್ಲಿ ಉತ್ತಮ ಬದಲಾವಣೆ ಕಂಡುಕೊಳ್ಳಲಿ ಎಂದು ಹಾರೈಸಿದರು. ವಾಲ್ಲೂರು -ತ್ಯಾಗತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅಭಿವೃದ್ಧಿಯೊಂದಿಗೆ ಮುಂದೆ ತರಲು ಸಂಸ್ಥೆ ಮುಂದಾಗಿರುವುದು ಶ್ಲಾಘನೀಯ. ಇದರೊಂದಿಗೆ ಸರ್ಕಾರಗಳ ಯೋಜನೆಗಳನ್ನ ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಮತ್ತಷ್ಟು ಅಭಿವೃದ್ಧಿಯೊಂದಿಗೆ ಮುಂದೆ ಬರಲು ಸಾಧ್ಯವಾಗಲಿದೆ. ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮುಖ್ಯ ವಾಹಿನಿಗೆ ಬರಬೇಕೆಂದರು. ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ,ಲಿಂಗರಾಜು ಮಾತನಾಡಿ ಇಲಾಖೆಯಿಂದ ಸಿಗುವ ಸೌಲಭ್ಯಗಳು ಹಾಗೂ ಹಂದಿ, ಕೋಳಿ, ಹಸುಗಳ ಸಾಕಣಿಕೆ ಬಗ್ಗೆ ಅದಕ್ಕೆ ಬರುವ ಖಾಯಿಲೆಗಳು, ಅದಕ್ಕಾಗಿ ದೊರೆಯುವ ಚುಚ್ಚುಮದ್ದು ಹಾಗೂ ಔಷಧಿಗಳ ಬಳಕೆಯ ಬಗ್ಗೆ ಮಾಹಿತಿ ನೀಡಿದರು.  ಈ ಸಂದರ್ಭ ಗ್ರಾ.ಪಂ  ಅಭಿವೃದ್ಧಿ ಅಧಿಕಾರಿ ಮೇದಪ್ಪ, ಕಾರ್ಯದರ್ಶಿ ರವಿ, ಓ.ಡಿ.ಪಿ.ಸಂಯೋಜಕ  ಜಯರಾಮು, ಮೆಲ್ವಿನ್, ಹಾಡಿಯ ಅಧ್ಯಕ್ಷ ರಮೇಶ್, ಜಿಲ್ಲಾ ವಲಯ ಸಂಯೋಜಕಿ  ಜಾಯ್ಸ್ ಮೆನೇಜಸ್, ಪ್ರಮುಖರಾದ ಪ್ರಜ್ವಲ್, ಧನುಕುಮಾರ್, ಮಮತಾ ಅಂಗನವಾಡಿ ಶಿಕ್ಷಕಿ ರೇಷ್ಮೆ ಸೇರಿದಂತೆ ಫಲಾನುಭವಿಗಳು ಸ್ಥಳೀಯರು ಹಾಜರಿದ್ದರು.

Share. Facebook Twitter Pinterest LinkedIn Tumblr Email WhatsApp
Previous Article*ಹೆಗ್ಗಳ ಗ್ರಾಮದಲ್ಲಿ ಎನ್‍ಎಸ್‍ಎಸ್ ಶಿಬಿರ ಉದ್ಘಾಟನೆ : ನಿಸ್ವಾರ್ಥ ಸೇವೆ ಜನಮಾನಸದಲ್ಲಿ ಶಾಶ್ವತ : ಮಹೇಶ್ ಗಣಪತಿ*
Next Article *ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ.ಕೆ.ಗಣೇಶ್ ರೈ ರಚಿತ “ಕಡಲಾಚೆಯ ರಮ್ಯ ನೋಟ ದುಬಾಯಿ” ಪುಸ್ತಕ ಬಿಡುಗಡೆ*

Website design development company services in Mangalore

Forex Trading Teacher in India

Related Posts

*ವಾಯುಪಡೆ ಸೇರಲು 10th ಪಾಸ್ ಸಾಕು! ತಿಂಗಳಿಗೆ ಭರ್ಜರಿ ಸಂಬಳ; ನಿಮ್ಮ ಜಿಲ್ಲೆಯಲ್ಲೂ ನೇಮಕಾತಿ ಇದೆಯೇ? ಚೆಕ್ ಮಾಡಿ!*

February 14, 2026

*ಬೆಂಗಳೂರು ಐಪಿಎಲ್ ಪಂದ್ಯಗಳಿಗೆ ಷರತ್ತುಬದ್ಧ ಒಪ್ಪಿಗೆ! ಸಂಭ್ರಮಾಚರಣೆ ಮಾಡಿದ್ರೆ ಬೀಳುತ್ತೆ ದಂಡ? ಗೃಹ ಸಚಿವರು ಹೇಳಿದ್ದೇನು?*

February 14, 2026

*ಗಂಡಸರಿಗೂ ಬಸ್ ಪ್ರಯಾಣ ಉಚಿತ! ಮಹಿಳೆಯರಿಗೆ 25,000 ರೂ. ನಗದು; ಕರ್ನಾಟಕದ ಪಕ್ಕದ ರಾಜ್ಯದಲ್ಲಿ ಭರ್ಜರಿ ಗಿಫ್ಟ್ ಘೋಷಣೆ!*

February 13, 2026

*ಬೆಂಗಳೂರು ಐಪಿಎಲ್ ಪಂದ್ಯಗಳಿಗೆ ಷರತ್ತುಬದ್ಧ ಒಪ್ಪಿಗೆ! ಸಂಭ್ರಮಾಚರಣೆ ಮಾಡಿದ್ರೆ ಬೀಳುತ್ತೆ ದಂಡ? ಗೃಹ ಸಚಿವರು ಹೇಳಿದ್ದೇನು?*

February 14, 2026

ಬೆಂಗಳೂರು: ಸಿಲಿಕಾನ್ ಸಿಟಿಯ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026ರ ಐಪಿಎಲ್ (IPL) ಪಂದ್ಯಗಳನ್ನು…

*ಗಂಡಸರಿಗೂ ಬಸ್ ಪ್ರಯಾಣ ಉಚಿತ! ಮಹಿಳೆಯರಿಗೆ 25,000 ರೂ. ನಗದು; ಕರ್ನಾಟಕದ ಪಕ್ಕದ ರಾಜ್ಯದಲ್ಲಿ ಭರ್ಜರಿ ಗಿಫ್ಟ್ ಘೋಷಣೆ!*

February 13, 2026

*ಫ್ರೀ.. ಫ್ರೀ.. ಫ್ರೀ! ಪಿಯುಸಿ ಪರೀಕ್ಷೆ ಬರೆಯುವವರಿಗೆ ಸಾರಿಗೆ ಇಲಾಖೆಯಿಂದ ಸಿಹಿಸುದ್ದಿ: ಕಂಡಕ್ಟರ್‌ಗೆ ಈ ಒಂದು ಕಾರ್ಡ್ ತೋರಿಸಿದ್ರೆ ಸಾಕು!*

February 13, 2026

*ಮದೆನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ 100 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಎ.ಎಸ್.ಪೊನ್ನಣ್ಣ ಚಾಲನೆ*

February 13, 2026

*ಮಾ.2ರಂದು “ಕುಂಬ್ಯಾರ್ ಕಲಾಡ್ಚ” ವಾರ್ಷಿಕೋತ್ಸವ*

February 13, 2026

*16ನೇ ಅಂತರಾಷ್ಟ್ರೀಯ ಮಟ್ಟದ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿ ಮಕ್ಕಳ ಸಾಧನೆ*

February 13, 2026

*ಫೆ. 15ರಂದು ಚೆಟ್ಟಳ್ಳಿಯಲ್ಲಿ ಮಹಾಶಿವರಾತ್ರಿ ಆಚರಣೆ*

February 13, 2026

*ಲಂಡನ್‌ನಿಂದ ನೇರವಾಗಿ ಜೈಲಿಗೆ? ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ನೀಡಿದ ಅಂತಿಮ ವಾರ್ನಿಂಗ್‌ನ ಸಾರಾಂಶ ಇಲ್ಲಿದೆ!*

February 13, 2026

*ಸಂಭ್ರಮದಿಂದ ಜರುಗಿದ ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ನ ವಾರ್ಷಿಕ ಮಹೋತ್ಸವ. ಮೈಸೂರು ಧರ್ಮಾಧ್ಯಕ್ಷರಾದ ಬಿಷಪ್ ಫ್ರಾನ್ಸಿಸ್ ಸೆರಾವೋ ರವರ ನೇತೃತ್ವದಲ್ಲಿ ಜರುಗಿದ ದಿವ್ಯ ಬಲಿಪೂಜೆ*

February 13, 2026

*ಫೆ.15 ರಂದು ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ*

February 13, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.