
ಮಡಿಕೇರಿ ಮಾ.6 NEWS DESK : ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು-ಕೀಯಲ್ ಕೇರೀ-ಮೂವೇರ-ತೆಕ್ಕೆಡ ಹಾಗೂ ಮೇದರ ಮನೆಗಳಿಗೆ ತೆರಳುವ ರಸ್ತೆಯ ಅಭಿವೃದ್ಧಿ ಕಾಮಗಾರಿಗಳನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಅನುದಾನದಲ್ಲಿ ಕೈಗೊಳ್ಳಲಾಯಿತು. ಹಲವಾರು ವರ್ಷಗಳಿಂದ ಯಾವುದೇ ಪ್ರಮುಖ ಅಭಿವೃದ್ಧಿ ಕಾಮಗಾರಿ ಕಾಣದೆ ತೀರಾ ಕುಗ್ರಾಮವಾಗಿದ್ದ ಪೇರೊರು-ಕೀಯಲ್ ಕೇರಿಗೆ ರಸ್ತೆ ಕಾಮಗಾರಿ ಕೈಗೊಂಡಿದ್ದಕ್ಕೆ, ಈ ಭಾಗದ ಸ್ಥಳೀಯ ನಾಗರೀಕರು ಶಾಸಕರಿಗೆ ಧನ್ಯವಾದ ಸಲ್ಲಿಸಿದರು.









