Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸುಂಟಿಕೊಪ್ಪ : ಮನೆಯ ಗೋಡೆ ಕುಸಿತ*
  • *ವಿರಾಜಪೇಟೆಯಲ್ಲಿ “ಶ್ರೀ ಈಶ್ವರ ಇಗ್ಗುತ್ತಪ್ಪ ಪೊಮ್ಮಕ್ಕಡ ಕೂಟ” ಉದ್ಘಾಟನೆ*
  • *ಕೂಡಿಗೆ ಡಯಟ್ ಸಂಸ್ಥೆಯಲ್ಲಿ ಪದವಿ ಪೂರ್ವ ಉಪನ್ಯಾಸಕರಿಗೆ ಸಂಯೋಜಿತ ಪಠ್ಯಕ್ರಮ ಕುರಿತು ತರಬೇತಿ ಕಾರ್ಯಾಗಾರ*
  • *ಮಂಗಳೂರಿನ ಸೆಂಟ್ ಅಲೋಶಿಯಸ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದಲ್ಲಿ ಎಂ. ಎ. ಬಿಸಿನೆಸ್ ಎಕನಾಮಿಕ್ಸ್ ಸ್ನಾತಕೋತ್ತರ ಕೋರ್ಸ್ ಗೆ ಪ್ರವೇಶಾತಿ ಆರಂಭ*
  • *ಪೂರ್ವಿಕಳಿಗೆ ಟಿ.ಪಿ.ರಮೇಶ್ ದತ್ತಿ ಪ್ರಶಸ್ತಿ ಪ್ರದಾನ : ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ, ಪುರಸ್ಕಾರ ಅಗತ್ಯ: ಎ.ಲೋಕೇಶ್ ಕುಮಾರ್*
  • *ವಿರಾಜಪೇಟೆಯಲ್ಲಿ ‘ಡಿಜಿ ಪೇ’ ಸೇವೆಗೆ ಚಾಲನೆ*
  • *ಮಡಿಕೇರಿಯಲ್ಲಿ ಡಾ.ಬಾಬು ಜಗಜೀವನ್ ರಾಂ ಅವರ 40ನೇ ಪುಣ್ಯಸ್ಮರಣೆ : ಗೌರವ ನಮನ ಸಲ್ಲಿಕೆ*
  • *ಬಾಳುಗೋಡು ಪೆಟ್ರೋಲ್ ಬಂಕ್ ಬಳಿ ತಡೆಗೋಡೆ ಕುಸಿತ*
  • *ಮನೆಯ ತಡೆಗೋಡೆ ಕುಸಿತ : ಅಧಿಕಾರಿಗಳಿಂದ ಪರಿಶೀಲನೆ*
  • *ಮಲ್ಲಹಳ್ಳಿ ಜಲಪಾತದಲ್ಲಿ ನೀರಿಗೆ ಇಳಿದು ಅಪಾಯಕಾರಿ ಸ್ಥಿತಿಯಲ್ಲಿ ಸಿಲುಕಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ರಕ್ಷಿಸಿದರು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಅರಂತೋಡಿನಲ್ಲಿ ಸೌಹಾರ್ದ ಇಫ್ತಾರ್ ಕೂಟ : ದೇಶದ ಭಾವೈಕ್ಯತೆಗೆ ಸೌಹಾರ್ದ ಇಫ್ತಾರ್ ಸಹಕಾರಿ : ರಾಜೇಶ್ ನಾಥ್ ಜಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಅರಂತೋಡಿನಲ್ಲಿ ಸೌಹಾರ್ದ ಇಫ್ತಾರ್ ಕೂಟ : ದೇಶದ ಭಾವೈಕ್ಯತೆಗೆ ಸೌಹಾರ್ದ ಇಫ್ತಾರ್ ಸಹಕಾರಿ : ರಾಜೇಶ್ ನಾಥ್ ಜಿ*

ಮಾರ್ಚ್ 27, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮಾ.27 NEWS DESK : ಸರ್ವಧರ್ಮ ಸೌಹಾರ್ದ ಇಫ್ತಾರ್ ಕೂಟಗಳಿಂದ ದೇಶದ ಭಾವೈಕ್ಯತೆಗೆ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ದೊರೆಯಲಿದೆ ಎಂದು ಮರ್ಕಂಜದ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೇಶ್ವರ ಸಿದ್ಧಪುರುಷಮಠದ ಧರ್ಮದರ್ಶಿ ಹಾಗೂ ಕರ್ನಾಟಕ ಅಖಿಲ ಭಾರತೀಯ ಸಂತ ಸಮಿತಿಯ ಮುಖ್ಯ ಕಾರ್ಯದರ್ಶಿ ರಾಜೇಶ್‍ನಾಥ್ ಜಿ ಹೇಳಿದರು. ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದ 20ನೇ ವರ್ಷದ ಸರ್ವಧರ್ಮ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಎಲ್ಲಾ ಧರ್ಮದ ಗುರುಗಳು ಒಟ್ಟಾಗಿದ್ದರೆ ಸಮಾಜವು ಒಟ್ಟುಗೂಡುತ್ತದೆ. ಎಲ್ಲಾ ಧರ್ಮದ ಧರ್ಮ ಗ್ರಂಥಗಳು ಒಳ್ಳೆದನ್ನು ಬೋಧಿಸುತ್ತದೆ. ಅಮಲು ಪದಾರ್ಥದಿಂದಾಗಿ ಎಷ್ಟೋ ಮನೆಗಳು ಹಾಳಾಗುತ್ತಿದೆ, ಇಸ್ಲಾಂ ಧರ್ಮದಲ್ಲಿ ಅಮಲು ಪದಾರ್ಥ ಸೇವನೆಯನ್ನು ನಿಷೇಧಿಸಲಾಗಿದೆ, ನಾವುಗಳು ವ್ಯಸನಿಗಳನ್ನು ವ್ಯಸನದಿಂದ ಮುಕ್ತಗೊಳಿಸಿ ಅವರ ಮನೆಗಳನ್ನು ಬೆಳಗಿಸಬೇಕೆಂದರು. ತಿಂಗಳಿಗೊಮ್ಮೆ ಎಲ್ಲಾ ಧರ್ಮಗುರುಗಳು ಒಟ್ಟಿಗೆ ಸೇರಿ ಸಮಾಜ ಸುಧಾರಣೆ, ಕೋಮು ಸೌಹಾರ್ದತೆ ಬಗ್ಗೆ ಬೈಠಕ್ ಮಾಡಬೇಕೆಂದು ವಿನಂತಿಸಿದರು. ಟಿ.ಎಂ.ಶಾಹಿದ್ ತೆಕ್ಕಿಲ್ ಅವರ ಸಮಾಜಸೇವೆ, ಶಿಕ್ಷಣಕ್ಕೆ ಮತ್ತು ಸೌಹಾರ್ದತೆಗೆ ಒತ್ತು ನೀಡುತ್ತಿರುವುದು ಶ್ಲಾಘನೀಯ, ನನ್ನ ಸ್ನೇಹಿತರಾದ ಶಾಹಿದ್ ಅವರ ಅವರ ತಂದೆ ಅಜ್ಜ ಮತ್ತು ಕುಟುಂಬಸ್ಥರು ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯ ಅದನ್ನು ಮುಂದುವರಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಸುಳ್ಯ ಬೀರಮಂಗಿಲ ಚರ್ಚ್ ಧರ್ಮಗುರು ವಿಕ್ಟರ್ ಡಿ’ಸೊಜ ಮಾತನಾಡಿ ನಾವೆಲ್ಲ ದೇವರ ಮಕ್ಕಳು, ಶಾಂತಿ, ಸಹಭಾಳ್ವೆಯಿಂದ ಬಾಳಬೇಕೆಂಬ ಸೌಹಾರ್ದತೆಯ ಸಂದೇಶ ನೀಡಿ ಎಲ್ಲಾ ಧರ್ಮದವರು ಸೇರಿ ಇಫ್ತಾರ್ ಕೂಟವನ್ನು ಆಚರಿಸಿ ಎಲ್ಲರು ಒಂದೇ ತಾಯಿಯ ಮಕ್ಕಳು ಎಂಬ ಭಾವನೆ ಉಂಟಾಗಿದೆ. ಕಳೆದ 20 ವರ್ಷ ಸಂಸ್ಥೆ ನಡೆಸಿದ ಕಾರ್ಯಕ್ರಮ ಯಶಸ್ವಿಯಾಗಿದೆ. ಇನ್ನೂ ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮ ಸಮಾಜದಲ್ಲಿ ನಡೆಯಲಿ ಎಂದು ಆಶಿಸಿ, ಸರ್ವರಿಗೂ ರಂಜಾನ್ ಶುಭಾಶಯ ತಿಳಿಸಿದರು. ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಎಂ.ಮುಸ್ತಫಾ ಮಾತನಾಡಿ, ತೆಕ್ಕಿಲ್ ಪ್ರತಿಷ್ಠಾನ ಶಾಹಿದ್ ಅವರ ನೇತೃತ್ವದಲ್ಲಿ ಕಳೆದ 20 ವರ್ಷಗಳಿಂದ ನಿರಂತರವಾಗಿ ಎಲ್ಲಾ ಧರ್ಮದವರನ್ನು ಸೇರಿಸಿ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ. ಅವರ ಮತ್ತು ತೆಕ್ಕಿಲ್ ಕುಟುಂಬಸ್ಥರ ಕೊಡುಗೆ ಅನನ್ಯ ಎಂದರು. ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆ ದುವಾ ನೆರವೇರಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ದಾಮೋದರ ಮಾಸ್ಟರ್ ಗೂನಡ್ಕ ಉದ್ಘಾಟಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಅರೆಭಾಷೆ ಮತ್ತು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ತಾಲ್ಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ಮಂಜುನಾಥ್, ಸುಳ್ಯ ಪೆÇಲೀಸ್ ವೃತ್ತ ನಿರೀಕ್ಷಕ ತಿಮ್ಮಫ್ಪ ನಾಯ್ಕ್, ಫಾರೆಸ್ಟರ್ ಚಂದ್ರು, ಮೆಸ್ಕಾಂ ಇಲಾಖೆಯ ಅಧಿಕಾರಿಗಳು, ಸುಳ್ಯ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ್, ಸುಳ್ಯ ತಾಲೂಕು ಅಲ್ಪ ಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್, ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಗೋಕುಲ್ ದಾಸ್, ಕಿಸಾನ್ ಘಟಕದ ಅಧ್ಯಕ್ಷ ಸುರೇಶ್ ಅಮೈ, ಲ್ಯಾಂಪ್ ಸೊಸೈಟಿ ನಿರ್ದೇಶಕ ಭವಾನಿಶಂಕರ, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ತೀರ್ಥರಾಮ ಪರ್ನೋಜಿ ಉಳುವಾರು, ಹಾಜಿ ಇಬ್ರಾಹಿಂ ಕತ್ತರ್, ಟಿ.ಎಂ.ಜಾವೇದ್ ತೆಕ್ಕಿಲ್, ಟಿ.ಎಂ.ಶಮೀರ್ ತೆಕ್ಕಿಲ್, ನ್ಯಾಯವಾದಿ ಮೂಸ, ನಗರ ಪಂಚಾಯತ್ ಸದಸ್ಯ ಧೀರಾಕ್ರಾಸ್ತ, ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ನಗರ ಪಂಚಾಯತ್ ಸದಸ್ಯ ಸಿದ್ಧೀಕ್ ಕೊಕ್ಕೊ, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್.ಕೆ.ಹನೀಫ್, ಸಂಯುಕ್ತ ಜಮಾತ್ ಖಜಾಂಚಿ ಹಮೀದ್ ಹಾಜಿ ಸುಳ್ಯ, ಕೆ.ಆರ್.ಪದ್ಮನಾಭ, ದಿನಕರ ಸಣ್ಣಮನೆ, ಬದುರುದ್ಧೀನ್ ಪಠೇಲ್, ಸೇರಿದಂತೆ ಸರ್ವಧರ್ಮದ ಅನೇಕ ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರುಗಳು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸುಂಟಿಕೊಪ್ಪ : ಮನೆಯ ಗೋಡೆ ಕುಸಿತ*

ಜುಲೈ 6, 2026

*ವಿರಾಜಪೇಟೆಯಲ್ಲಿ “ಶ್ರೀ ಈಶ್ವರ ಇಗ್ಗುತ್ತಪ್ಪ ಪೊಮ್ಮಕ್ಕಡ ಕೂಟ” ಉದ್ಘಾಟನೆ*

ಜುಲೈ 6, 2026

*ಕೂಡಿಗೆ ಡಯಟ್ ಸಂಸ್ಥೆಯಲ್ಲಿ ಪದವಿ ಪೂರ್ವ ಉಪನ್ಯಾಸಕರಿಗೆ ಸಂಯೋಜಿತ ಪಠ್ಯಕ್ರಮ ಕುರಿತು ತರಬೇತಿ ಕಾರ್ಯಾಗಾರ*

ಜುಲೈ 6, 2026

*ವಿರಾಜಪೇಟೆಯಲ್ಲಿ “ಶ್ರೀ ಈಶ್ವರ ಇಗ್ಗುತ್ತಪ್ಪ ಪೊಮ್ಮಕ್ಕಡ ಕೂಟ” ಉದ್ಘಾಟನೆ*

ಜುಲೈ 6, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಜು.6 NEWS DESK : ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಸಬಲೀಕರಣದ ಉದ್ದೇಶದೊಂದಿಗೆ ವೀರಾಜಪೇಟೆಯ ಮಹಿಳೆಯರು ಒಗ್ಗೂಡಿ”ಶ್ರೀ…

*ಕೂಡಿಗೆ ಡಯಟ್ ಸಂಸ್ಥೆಯಲ್ಲಿ ಪದವಿ ಪೂರ್ವ ಉಪನ್ಯಾಸಕರಿಗೆ ಸಂಯೋಜಿತ ಪಠ್ಯಕ್ರಮ ಕುರಿತು ತರಬೇತಿ ಕಾರ್ಯಾಗಾರ*

ಜುಲೈ 6, 2026

*ಮಂಗಳೂರಿನ ಸೆಂಟ್ ಅಲೋಶಿಯಸ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದಲ್ಲಿ ಎಂ. ಎ. ಬಿಸಿನೆಸ್ ಎಕನಾಮಿಕ್ಸ್ ಸ್ನಾತಕೋತ್ತರ ಕೋರ್ಸ್ ಗೆ ಪ್ರವೇಶಾತಿ ಆರಂಭ*

ಜುಲೈ 6, 2026

*ಪೂರ್ವಿಕಳಿಗೆ ಟಿ.ಪಿ.ರಮೇಶ್ ದತ್ತಿ ಪ್ರಶಸ್ತಿ ಪ್ರದಾನ : ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ, ಪುರಸ್ಕಾರ ಅಗತ್ಯ: ಎ.ಲೋಕೇಶ್ ಕುಮಾರ್*

ಜುಲೈ 6, 2026

*ವಿರಾಜಪೇಟೆಯಲ್ಲಿ ‘ಡಿಜಿ ಪೇ’ ಸೇವೆಗೆ ಚಾಲನೆ*

ಜುಲೈ 6, 2026

*ಮಡಿಕೇರಿಯಲ್ಲಿ ಡಾ.ಬಾಬು ಜಗಜೀವನ್ ರಾಂ ಅವರ 40ನೇ ಪುಣ್ಯಸ್ಮರಣೆ : ಗೌರವ ನಮನ ಸಲ್ಲಿಕೆ*

ಜುಲೈ 6, 2026

*ಬಾಳುಗೋಡು ಪೆಟ್ರೋಲ್ ಬಂಕ್ ಬಳಿ ತಡೆಗೋಡೆ ಕುಸಿತ*

ಜುಲೈ 6, 2026

*ಮನೆಯ ತಡೆಗೋಡೆ ಕುಸಿತ : ಅಧಿಕಾರಿಗಳಿಂದ ಪರಿಶೀಲನೆ*

ಜುಲೈ 6, 2026

*ಮಲ್ಲಹಳ್ಳಿ ಜಲಪಾತದಲ್ಲಿ ನೀರಿಗೆ ಇಳಿದು ಅಪಾಯಕಾರಿ ಸ್ಥಿತಿಯಲ್ಲಿ ಸಿಲುಕಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ರಕ್ಷಿಸಿದರು*

ಜುಲೈ 6, 2026

*ಕೊಡವ ವೆಲ್ಫೇರ್ ಮತ್ತು ರಿಕ್ರಿಯೇಷನ್ ಅಸೋಸಿಯೇಷನ್ ನ ಬ್ಯಾಡ್ಮಿಂಟನ್ ಅಂಕಣ ಉದ್ಘಾಟನೆ*

ಜುಲೈ 6, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.