Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಏ.1 ರಂದು ನಾಪೋಕ್ಲುವಿನಲ್ಲಿ ಹಿಂದೂ ಜನಜಾಗೃತಿ ಸಮಾವೇಶ*
  • *ಮಾ.31ರಂದು ಜನರಲ್ ಕೆ.ಎಸ್.ತಿಮ್ಮಯ್ಯ ಅವರ 120ನೇ ಜನ್ಮ ದಿನಾಚರಣೆ*
  • *ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಿ.ಕೆ.ಪ್ರಶಾಂತ್ ಆಯ್ಕೆ*
  • *ಶ್ರೀ ತಿರುನೆಲ್ಲಿ ಪೆಮ್ಮಯ್ಯ ದೇವಾಲಯಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ವಿಶೇಷ ಪೂಜೆ ಸಲ್ಲಿಕೆ*
  • *ಸೋಮವಾರಪೇಟೆಯಲ್ಲಿ ಸಂಭ್ರಮದ ರಾಮೋತ್ಸವ*
  • *ಮೂರ್ನಾಡು : ಮಾ.29 ರಂದು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*
  • *ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಮಿತಿಗಳ ರಚನೆ ಮತ್ತು ನಿರ್ವಹಣೆ ತರಬೇತಿ*
  • *ಕೂಡಿಗೆ : ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ವೃತ್ತಿ ಮೇಳ ಸಹಕಾರಿ : ಸಿಇಓ ಆನಂದ್ ಪ್ರಕಾಶ್ ಮೀನ*
  • *ಕೊಡಗು ವಿಶ್ವವಿದ್ಯಾಲಯದ ಮೂರನೇ ಸಂಸ್ಥಾಪನಾ ದಿನಾಚರಣೆ : ಭಾರತದ ಐತಿಹಾಸಿಕ ಶಿಕ್ಷಣ ಪದ್ಧತಿ ಇಂದಿನ ಅಗತ್ಯ : ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅಭಿಮತ*
  • *ಲಿಟಲ್‌ವುಡ್ ಮಾಂಟೆಸ್ಸರಿ ಶಾಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ : ಗಮನಸೆಳೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ದೇವರ ದಾಸಿಮಯ್ಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ ಬಿಡುಗಡೆ : ಶಾಸಕ ಡಾ.ಮಂತರ್ ಗೌಡ* 
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ದೇವರ ದಾಸಿಮಯ್ಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ ಬಿಡುಗಡೆ : ಶಾಸಕ ಡಾ.ಮಂತರ್ ಗೌಡ* 

ಏಪ್ರಿಲ್ 3, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಏ.3 NEWS DESK : ದೇವರ ದಾಸಿಮಯ್ಯ  ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 5 ಲಕ್ಷ ರೂ.ಬಿಡುಗಡೆ ಮಾಡಲಾಗುವುದು. ಈ ಸಂಬಂಧ ಜಾಗ ಎಲ್ಲಿ ಎಂಬ ಬಗ್ಗೆ ನಿರ್ಧರಿಸುವಂತೆ ಸಮಾಜದ ಪ್ರಮುಖರಿಗೆ ಶಾಸಕರಾದ ಡಾ.ಮಂತರ್ ಗೌಡ ಅವರು ಸಲಹೆ ಮಾಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಾಗ ಅಂತಿಮಗೊಳಿಸಿದ ಕೂಡಲೇ ಅನುದಾನ ಬಿಡುಗಡೆಗೆ ಕ್ರಮವಹಿಸಲಾಗುವುದು. ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟವರಿಗೆ ಶಾಸಕರು ಸಲಹೆ ಮಾಡಿದರು.  ದೇವರ ದಾಸಿಮಯ್ಯ ಕುರಿತು ಹೆಚ್ಚಿನ ಅಧ್ಯಯನಗಳು ನಡೆಯಬೇಕು. ಜೊತೆಗೆ ಪುಸ್ತಕವನ್ನು ಹೊರತರುವಂತಾಗಬೇಕು. ಆ ನಿಟ್ಟಿನಲ್ಲಿ ದೇವರ ದಾಸಿಮಯ್ಯ ಅವರ ಸಂಶೋಧನಾ ಅಧ್ಯಯನಕ್ಕಾಗಿ ಮುಖ್ಯಮಂತ್ರಿ ಅವರ ಜೊತೆ ಚರ್ಚಿಸಿ ಹೆಚ್ಚಿನ ಅನುದಾನ ಬಿಡುಗಡೆಗೆ ಮುಂದಾಗಲಾಗುವುದು ಎಂದು ಡಾ.ಮಂತರ್ ಗೌಡ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.  ಸಮಾಜದಲ್ಲಿ ಅಭಿವೃದ್ಧಿ ಮತ್ತು ಬದಲಾವಣೆ ಕಾಣಬೇಕಾದರೆ ಶಿಕ್ಷಣವೇ ಅತೀಮುಖ್ಯ. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಮತ್ತು ಸುಧಾರಣೆ ಕಾಣಲು ಸಾಧ್ಯ ಎಂದು ಶಾಸಕರು ನುಡಿದರು. ಜನಸಂಖ್ಯೆ ಕಡಿಮೆ ಇರುವವರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಮಾಜ, ಜನಾಂಗದ ಅಭಿವೃದ್ಧಿಯಾದಲ್ಲಿ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರಲ್ಲಿ ಒಗ್ಗಟ್ಟು ಇರಬೇಕು. ಇದರಿಂದ ಪ್ರಗತಿ ಸಾಧ್ಯ ಎಂದು ಡಾ.ಮಂತರ್ ಗೌಡ  ಅಭಿಪ್ರಾಯಪಟ್ಟರು. ಶಿರಂಗಾಲದಲ್ಲಿ ಕೈಮಗ್ಗ ಘಟಕ ಉತ್ತೇಜನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇಂದಿನ ಜಾಗತಿಕರಣ ಯುಗದಲ್ಲಿ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಇಲ್ಲದಂತಾಗಿದೆ. ಸಣ್ಣ ಮತ್ತು ಗುಡಿ ಕೈಗಾರಿಕೆಗಳನ್ನು ಉಳಿಸಿಕೊಂಡು ಆಧುನಿಕತೆಗೂ ಹೊಂದಿಕೊಂಡು ಬದುಕು ನಡೆಸುವಂತಾಗಬೇಕು ಎಂದು ಡಾ.ಮಂತರ್ ಗೌಡ ಕರೆ ನೀಡಿದರು. ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷರಾದ ಟಿ.ಕೆ.ಪಾಂಡುರಂಗ ಅವರು ಮಾತನಾಡಿ ಕುಶಾಲನಗರದಲ್ಲಿ 16 ಸೆಂಟ್ ಜಾಗವನ್ನು ಕಾಯ್ದಿರಿಸಲು ಕಳೆದ 8 ವರ್ಷಗಳಿಂದ ಪ್ರಯತ್ನಿಸುತ್ತಾ ಬರಲಾಗಿದೆ. ಆದರೆ ಈ ಕಾರ್ಯ ಕೈಗೂಡಿಲ್ಲ ಎಂದು ಶಾಸಕರ ಗಮನಕ್ಕೆ ತಂದರು. ಕುಶಾಲನಗರದಲ್ಲಿ ದೇವರ ದಾಸಿಮಯ್ಯ ಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಆ ನಿಟ್ಟಿನಲ್ಲಿ ಜಾಗಕ್ಕಾಗಿ ಹಲವು ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕರ ಗಮನಕ್ಕೆ ತಂದರು. ಶಿರಂಗಾಲದಲ್ಲಿ ನೇಕಾರಿಕೆ ಕಟ್ಟಡ ಕುಸಿಯುವ ಹಂತದಲ್ಲಿದ್ದು, ಈ ಬಗ್ಗೆ ಗಮನಹರಿಸಬೇಕು. ನೇಕಾರರ ಬದುಕು ತುಂಬಾ ತೊಂದರೆಯಲ್ಲಿದ್ದು, ಕೊಡಗು ಜಿಲ್ಲೆಯಲ್ಲಿ ನೇಕಾರಿಕೆ ಉಳಿಯಬೇಕು ಎಂದರು. ಜಿಲ್ಲಾ ನೇಕಾರರ ಒಕ್ಕೂಟದ ಕಾರ್ಯದರ್ಶಿ ನಾಗರಾಜ ಶೆಟ್ಟಿ ಅವರು ಮಾತನಾಡಿ ನೇಕಾರಿಕೆ ಪುನಃಶ್ಚೇತನಕ್ಕೆ ಒತ್ತು ನೀಡಬೇಕಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಯಾವುದಾದರೂ ವೃತ್ತಕ್ಕೆ ದೇವರ ದಾಸಿಮಯ್ಯ ಅವರ  ಹೆಸರಿಡುವಂತಾಗಬೇಕು ಎಂದು ಕೋರಿದರು. ಸಾಹಿತಿ ಕಣಿವೆ ಭಾರಧ್ವಜ್ ಆನಂದ ತೀರ್ಥ ಅವರು ಮಾತನಾಡಿ ರಾಮನಾಥರ ಆರಾಧಕರಾಗಿದ್ದ ದೇವರ ದಾಸಿಮಯ್ಯ ಅವರು ನಾಡಿನಲ್ಲಿ ದೊಡ್ಡ ವಚನಕಾರ ಎಂದು ತಿಳಿಸಿದರು.   176 ಕ್ಕೂ ಹೆಚ್ಚು ವಚನಗಳನ್ನು ಬರೆದಿರುವ ದೇವರದಾಸಿಮಯ್ಯ ಅವರು 10 ನೇ ಶತಮಾನದಲ್ಲಿಯೇ ಸಮಾಜದ ಬದುಕಿನ ಬಗ್ಗೆ ಅಗಾಧವಾಗಿ ಚಿಂತನೆ ಮಾಡಿದ್ದಾರೆ ಎಂದರು. ಕಾಯಕವನ್ನು ಶ್ರದ್ಧೆಯಿಂದ ನಿರ್ವಹಿಸಿ ನೇಕಾರಿಕೆ ಮಾಡಬೇಕು ಎಂದು ಸಾರಿದ್ದಾರೆ. ನೇಕಾರಿಕೆ ಇಲ್ಲದೆ ಚಂದ ಮತ್ತು ಸೃಷ್ಠಿ ಅಸಾಧ್ಯ. ಭೂಮಿಯ ಮೇಲಿನ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಶ್ರೇಷ್ಠತೆ ಹೊಂದಿದ್ದಾರೆ ಎಂದು ಭಾರಧ್ವಜ್ ಆನಂದ್ ತೀರ್ಥ  ಹೇಳಿದರು. ಸಂಸ್ಕೃತಿ ಗಟ್ಟಿಗೊಳ್ಳಲು ಬೇರುಗಳನ್ನು ತಿಳಿದುಕೊಳ್ಳಬೇಕು. ಆ ನಿಟ್ಟಿನಲ್ಲಿ ದೇವರ ದಾಸಿಮಯ್ಯ ಅವರ ಬಗ್ಗೆ ಇನ್ನಷ್ಟು ಸಂಶೋಧನಾ ಕಾರ್ಯಗಳು ನಡೆಯಬೇಕು. ಕುಲಕಸುಬುಗಳು ನಾಶವಾಗಬಾರದು ಎಂದರು. ಬಹುತ್ವ ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರದಲ್ಲಿ ಏಕಮುಖ ಸಂಸ್ಕೃತಿ ಒಳ್ಳೆಯದಲ್ಲ. ಕಥೆಗಳನ್ನು ನಂಬಬಾರದು. ಇರುವ ವಾಸ್ತವವನ್ನು ಅರಿತುಕೊಂಡು ಮುನ್ನಡೆ ಸಾಧಿಸಬೇಕು ಎಂದರು.   ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷರಾದ ಟಿ.ವಿ.ಜಗದೀಶ, ಶ್ರೀ ರಾಮಲಿಂಗೇಶ್ವರ ಚೌಡೇಶ್ವರಿ ದೇವಾಲಯ ಸಮಿತಿಯ ಅಧ್ಯಕ್ಷರಾದ ಗಜೇಂದ್ರ, ಕುಶಾಲನಗರದ ಕುರುಹಿನಶೆಟ್ಟಿ ಸಂಘದ ಅಧ್ಯಕ್ಷರಾದ ವೇಣು, ತೊರೆನೂರು ಗ್ರಾ.ಪಂ.ಅಧ್ಯಕ್ಷರಾದ ಶೋಭ, ಪ್ರಕಾಶ, ಪದ್ಮ, ಪ್ರೇಮ್ ಕುಮಾರ್ ಇತರರು ಇದ್ದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ವಿರಾಜಪೇಟೆ ಕಾವೇರಿ ಪದವಿ ಕಾಲೇಜು ಉಪನ್ಯಾಸಕರಾದ ಎಚ್.ವಿ.ನಾಗರಾಜು ನಿರೂಪಿಸಿದರು. ಗಣೇಶ ಮತ್ತು ತಂಡದವರು ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಏ.1 ರಂದು ನಾಪೋಕ್ಲುವಿನಲ್ಲಿ ಹಿಂದೂ ಜನಜಾಗೃತಿ ಸಮಾವೇಶ*

ಮಾರ್ಚ್ 28, 2026

*ಮಾ.31ರಂದು ಜನರಲ್ ಕೆ.ಎಸ್.ತಿಮ್ಮಯ್ಯ ಅವರ 120ನೇ ಜನ್ಮ ದಿನಾಚರಣೆ*

ಮಾರ್ಚ್ 28, 2026

*ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಿ.ಕೆ.ಪ್ರಶಾಂತ್ ಆಯ್ಕೆ*

ಮಾರ್ಚ್ 28, 2026

*ಮಾ.31ರಂದು ಜನರಲ್ ಕೆ.ಎಸ್.ತಿಮ್ಮಯ್ಯ ಅವರ 120ನೇ ಜನ್ಮ ದಿನಾಚರಣೆ*

ಮಾರ್ಚ್ 28, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮಾ.28 NEWS DESK : ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯನವರ 120ನೇ ಜಯಂತಿಯನ್ನು ಮಾ.31ರಂದು ನಗರದಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ…

*ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಿ.ಕೆ.ಪ್ರಶಾಂತ್ ಆಯ್ಕೆ*

ಮಾರ್ಚ್ 28, 2026

*ಶ್ರೀ ತಿರುನೆಲ್ಲಿ ಪೆಮ್ಮಯ್ಯ ದೇವಾಲಯಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ವಿಶೇಷ ಪೂಜೆ ಸಲ್ಲಿಕೆ*

ಮಾರ್ಚ್ 28, 2026

*ಸೋಮವಾರಪೇಟೆಯಲ್ಲಿ ಸಂಭ್ರಮದ ರಾಮೋತ್ಸವ*

ಮಾರ್ಚ್ 28, 2026

*ಮೂರ್ನಾಡು : ಮಾ.29 ರಂದು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*

ಮಾರ್ಚ್ 28, 2026

*ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಮಿತಿಗಳ ರಚನೆ ಮತ್ತು ನಿರ್ವಹಣೆ ತರಬೇತಿ*

ಮಾರ್ಚ್ 28, 2026

*ಕೂಡಿಗೆ : ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ವೃತ್ತಿ ಮೇಳ ಸಹಕಾರಿ : ಸಿಇಓ ಆನಂದ್ ಪ್ರಕಾಶ್ ಮೀನ*

ಮಾರ್ಚ್ 28, 2026

*ಕೊಡಗು ವಿಶ್ವವಿದ್ಯಾಲಯದ ಮೂರನೇ ಸಂಸ್ಥಾಪನಾ ದಿನಾಚರಣೆ : ಭಾರತದ ಐತಿಹಾಸಿಕ ಶಿಕ್ಷಣ ಪದ್ಧತಿ ಇಂದಿನ ಅಗತ್ಯ : ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅಭಿಮತ*

ಮಾರ್ಚ್ 28, 2026

*ಲಿಟಲ್‌ವುಡ್ ಮಾಂಟೆಸ್ಸರಿ ಶಾಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ : ಗಮನಸೆಳೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ*

ಮಾರ್ಚ್ 28, 2026

*ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ : ಮಿಲನ ಕೆ.ಭರತ್‍ಗೆ ಬೆಳ್ಳಿ ಪದಕ*

ಮಾರ್ಚ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.