
ವಿರಾಜಪೇಟೆ ಏ.17 NEWS DESK ;: ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದ ವಾರ್ಷಿಕ ಮಹಾಸಭೆ ನಡೆಯಿತು. ವಿರಾಜಪೇಟೆ ಕೊಡವ ಸಮಾಜದ ಆವರಣದಲ್ಲಿ ನಡೆದ ಸಭೆಯಲ್ಲಿ ಒಕ್ಕೂಟದ ಸ್ಥಾಪಕ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಮಾರು ಏಳು ವರ್ಷಗಳಿಂದ ಒಕ್ಕೂಟ ನಡೆದು ಬಂದ ಹಾದಿಯನ್ನು ಮೆಲುಕು ಹಾಕುತ್ತಾ, ಇಲ್ಲಿಯ ತನಕ ಸಹಕಾರ ನೀಡಿದ ಸರ್ವರ ಸಹಕಾರವನ್ನು ಸ್ಮರಿಸಿದರುಹಾಗೂ ಎಲ್ಲರಿಗೂ ಅವಕಾಶ ಸಿಗಬೇಕೆಂಬ ಉದ್ದೇಶದಿಂದ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಆಡಳಿತ ಮಂಡಳಿ ರಚನೆಗೆ ಅನುವು ಮಾಡಿ ಕೊಟ್ಟರು. ಗೌರವ ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಯಪ್ಪ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ತಾತಂಡ ಯಶು ಕಭೀರ್ ವಾರ್ಷಿಕ ಖರ್ಚು ವೆಚ್ಚದ ಲೆಕ್ಕಪತ್ರವನ್ನು ಮಂಡಿಸಿದರು. ಈ ಸಂದರ್ಭ ಸಭೆಯಲ್ಲಿ ಒಕ್ಕೂಟದ ಸದಸ್ಯರುಗಳು, ಆಡಳಿತ ಮಂಡಳಿ ಪದಾಧಿಕಾರಿಗಳು ಹಾಜರಿದ್ದರು.
ಭಾಷಣ ಸ್ಪರ್ಧೆ :: ಸಭೆಯಲ್ಲಿ ನಾಗರಿಕ ಸಮಾಜದಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಬಗ್ಗೆ ಭಾಷಣ ಪೈಪೋಟಿ ನಡೆದು ಬಹುಮಾನ ವಿತರಿಸಲಾಯಿತು.
ನೂತನ ಆಡಳಿತ ಮಂಡಳಿ ರಚನೆ :: ಸಭೆಯಲ್ಲಿ ಸರ್ವಾನುಮತದಿಂದ ನೂತನ ಆಡಳಿತ ಮಂಡಳಿ ರಚನೆ ಮಾಡಾಯಿತು. ಪೊಮ್ಮಕ್ಕಡ ಒಕ್ಕೂಟದ ನೂತನ ಅಧ್ಯಕ್ಷರಾಗಿ ತಾತಂಡ ಜ್ಯೋತಿ ಪ್ರಕಾಶ್, ಉಪಾಧ್ಯಕ್ಷರಾಗಿ ಮುರುವಂಡ ಉಷಾ ನೀಲಕಂಠ, ಕಾರ್ಯದರ್ಶಿಯಾಗಿ ಕುಂಞರ ಚಿತ್ರ ಮನು, ಜಂಟಿ ಕಾರ್ಯದರ್ಶಿ ಮೂಕೊಂಡ ಪ್ರೀತ್, ಖಜಾಂಚಿ ತಾತಂಡ ಯಶು ಕಭೀರ್ ಆಯ್ಕೆಯಾದರು.









