
ಸಿದ್ದಾಪುರ ಏ.17 NEWS DESK : ಕೊಂಡಂಗೇರಿ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಮೊಹಮ್ಮದ್ ಪೈಗಂಬರ್ ಸ.ಅ ರವರ ಸಂತತಿ ಪುತ್ರರಾದ ಬಹು ಅಸ್ಸಯ್ಯದ್ ಅಬ್ದುಲ್ಲಾಹಿ ಸಖಾಫ ಅಲ್ ಹಳ್ರಮಿ (ನ.ಮ) ಹಾಗೂ ಸಮೀಪದ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಪವಾಡ ಪುರುಷರ ಹೆಸರಿನಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ಏ.18 ರಿಂದ 22 ರವರಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ ಎಂದು ಕೊಂಡಂಗೇರಿ ಸುನ್ನೀ ಮುಸ್ಲಿಂ ಜಮಾಅತ್ ಅಧ್ಯಕ್ಷ ಕುಪ್ಪಂದರ ಕೆ.ಯೂಸುಫ್ ಹಾಜಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏ.18 ರಂದು ಶುಕ್ರವಾರ 2 ಗಂಟೆಗೆ ಮಖಾಂ ಅಲಂಕಾರ ಹಾಗೂ ದುಆಃ ನಂತರ ಸಾಮೂಹಿಕ ಪ್ರಾರ್ಥನೆ ನೆರವೇರಲಿದೆ.
ಧಾರ್ಮಿಕ ಪಂಡಿತ ಸಯ್ಯದ್ ಅಲವಿ ಜಲಾಲುದ್ದೀನ್ ಅಲ್ ಹಾದಿ ನೇತೃತ್ವ ವಹಿಸಲಿದ್ದು, ತಕ್ಕ ಮುಖ್ಯಸ್ಥರುಗಳಾದ ಪೇರಿಯಂಡ ಎ ಕುಂಇ ಅಹಮದ್ ಮುಸ್ಲಿಯಾರ್, ಕುಪ್ಪಂದರ ಎಂ.ಯಹ್ಯಾ ಹಾಜಿ, ಎಂ ಐ ಇಕ್ಬಾಲ್, ಕೊಟ್ಟಿಯಾಡ್ ಎಂ ಶಾದುಲಿ ಸಮ್ಮುಖದಲ್ಲಿ ಅಪರಾಹ್ನ 2-30 ಘಂಟೆಗೆ ಕೊಂಡಂಗೇರಿ ಸುನ್ನೀ ಮುಸ್ಲಿಂ ಜಮಾಅತ್ ಅಧ್ಯಕ್ಷ ಕುಪ್ಪಂದರ ಕೆ.ಯೂಸುಫ್ ಹಾಜಿ ಹಾಗೂ ಉಪಾಧ್ಯಕ್ಷ ಕನ್ನಂಡಿಯಂಡ ಎಂ ಮೊಹಮ್ಮದ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಏ.19 ರಂದು ರಾತ್ರಿ 7 ಗಂಟೆಗೆ ಜಾಲಾಲಿಯಾ ರಾತಿಬ್ ನಡೆಯಲಿದ್ದು ಅಸ್ಸಯ್ಯದ್ ಜಅಫರ್ ಸ್ವಾದಿಖ್ ತಂಙಳ್ ಕೊಂಬೋಳ್ ನೇತೃತ್ವ ವಹಿಸಲಿದ್ದಾರೆ. ಏ.20 ರಂದು ರಾತ್ರಿ ಧಾರ್ಮಿಕ ಪಂಡಿತ ಹಾಮಿದ್ ಯಾಸೀನ್ ಚೌಹರಿ ಕೊಲ್ಲಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಏ.21 ರಂದು 1 ಗಂಟೆಗೆ ಸಾರ್ವಜನಿಕ ಸೌಹಾರ್ದ ಸಮ್ಮೇಳನವು ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕುಪ್ಪಂದರ ಕೆ ಯುಸೂಪ್ ಹಾಜಿ ಅಧ್ಯಕ್ಷತೆಯಲ್ಲಿ
ನಡೆಯಲಿದ್ದು, ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಲಕಟ್ಟೆ ಹಜರತ್ ದುಆ ನೇತೃತ್ವ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ರಾಜ್ಯ ಎಸ್.ವೈ.ಎಸ್ ಅಧ್ಯಕ್ಷ ಡಾ. ಅಬ್ದುಲ್ ಹಕೀಂ ಅಝ್ಹರಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ ಎಸ್ ಪೊನ್ನಣ್ಣ,ದಾರ್ಮಿಕ ಪಂಡಿತ ಸಯ್ಯದ್ ಎಸ್ ಹಕೀಂ ಅಸ್ಸಖಾಫ್ ತಂಙಳ್ ಆದೂರು, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೈನಿ, ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ
ಎನ್ ಕೆ ಎಂ ಶಾಫಿ ಸಹದಿ, ಪ್ರಮುಖರಾದ ಅಸ್ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೂಸಿ ತಂಙಳ್ ಕಿಲ್ಲೂರು,ಹಾಲುಗುಂದ ಗ್ರಾಮ ಪಂಚಾಯತಿ ಅಧ್ಯಕ್ಷ ಪಿ ಎ ದಿನೇಶ್,ಸದಸ್ಯರುಗಳಾದ ಹೆಚ್ ಹೆಚ್ ಹನೀಫ್,. ಕೆ ಹೆಚ್ ಅಬ್ದುಲ್ ರಹ್ಮಾನ್, ಕೆ ಜಿ ಲೋಕೇಶ್, ಪ್ರಮುಖರಾದ ಹುಸೈನ್ ಸಖಾಫಿ,
ಪುಡಿಯಂಡ ಇ ಶಾದುಲಿ, ಡಾ.ಜೋಯಿಪುರಾ ಎ ಕುಂಞ ಅಬ್ದುಲ್ಲ ಹಾಜಿ,ಎಂ ಐ ಮುಹಮ್ಮದ್ ಸಾಲಿ ಹಾಜಿ, ಪೇರಿಯಂಡ ಹೆಚ್ ಇಸ್ಮಾಯಿಲ್ ಸಖಾಫಿ, ಮಹಮ್ಮದ್ ಇರ್ಪಾನ್ ಸೇರಿದಂತೆ ಮತ್ತಿತರರು ಉಪಸ್ಥಿತಲಿದ್ದಾರೆ. ಏ.22 ರಂದು ಕಥಾ ಪ್ರಸಂಗ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಕನ್ನಡಿಯಂಡ ಎಂ ಮೊಹಮ್ಮದ್,ಪ್ರಧಾನ ಕಾರ್ಯದರ್ಶಿ ಪುದಿಯಂಡ ಎ ಶಾದುಲಿ,ಪ್ರಮುಖರಾದ ಪಯಕಾರ ಈ ಅಲಿ, ಎಂ ಈ ಶಾದುಲಿ, ಪೇರಿಯಂಡ ಎಚ್ ಮೊಹಿನ್,ಕುಂಞ ಅಹಮದ್ ಮುಸ್ಲಿಯಾರ್,ಎಂ ಐ ಇಕ್ಬಾಲ್,ಕೊಟೆಯಾಡ ಎಂ ಶಾದುಲಿ ಉಪಸ್ಥಿತರಿದ್ದರು.










