


ನಾಪೋಕ್ಲು ಏ.20 NEWS DESK : ಮೇರಿಮಾತೆಯ ದೇವಾಲಯದ ಕ್ರೈಸ್ತ ಬಾಂಧವರು ಶುಭ ಶುಕ್ರವಾರವನ್ನು ಪ್ರಾರ್ಥನೆ ಮತ್ತು ಉಪವಾಸದ ಮೂಲಕ ಗುಡ್ ಆಚರಿಸಿದರು. ಧರ್ಮಗಳಾದ ಜ್ಞಾನ ಪ್ರಕಾಶ್ ಮಾತಾಡಿ, ಈ ಶುಭ ಶುಕ್ರವಾರದಂದು ನಾವು ಪರರನ್ನು ಪ್ರೀತಿಸಿ, ಏಸುಕ್ರಿಸ್ತರ ಆದರ್ಶವನ್ನು ಅನುಸರಿಸಿ ಅವರ ಹಂಗಿನಲ್ಲಿ ಬದುಕಬೇಕು. ಕತ್ತಲೆಯಿಂದ ಬೆಳಕಿನೆಡೆಗೆ ನಡೆಯುವ ಕಾರ್ಯಕ್ಕೆ ನಾಂದಿ ಆಗಬೇಕೆಂದು ಹೇಳಿದರು. ಈ ಸಂದರ್ಭ ಪಾಲನಾ ಸಮಿತಿಯ ಸದಸ್ಯರು, ಯುವಕ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ : ವರದಿ ದುಗ್ಗಳ ಸದಾನಂದ.









