


ನಾಪೋಕ್ಲು ಏ.20 NEWS DESK : ಕಾಂತೂರು ಗ್ರಾಮದ ಬೊಳ್ತಜೀರ ನೂತನ ಐನ್ ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ ಹಾಗೂ ದೈವಗಳ ಕೋಲ ಶ್ರದ್ಧಾ ಭಕ್ತಿಯಿಂದ ಜರುಗಿತು. ಐದು ವರ್ಷಕ್ಕೆ ಒಮ್ಮೆ ಜರುಗುವ ಹರಿಸೇವೆಯಲ್ಲಿ ಭಕ್ತಾದಿಗಳು ಹರಕೆ ಸೇವೆ ಸಲ್ಲಿಸಿದರು. ಬಳಿಕ ವಂಶಪರಂಪರೆಯಿಂದ ನಡೆಸಿಕೊಂಡು ಬರುತ್ತಿರುವ ಕೊರತ್ತಿ, ಪೊಟ್ಟ ದೈವ, ಗುಳಿಗ, ಅಂಗರೆ, ಚೌಂಡಿ ದೈವ ಕೋಲಗಳು ಸಾಂಪ್ರದಾಯಿಕವಾಗಿ ನೆರವೇರಿತು. ಈ ಸಂದರ್ಭ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಕಾರ್ಯಕ್ರಮ ಮುಖ್ಯಸ್ಥರಾದ ಸಿದ್ದಾರ್ಥ (ನಂದ) ಅವರ ಮಂದಾರತ್ವದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿತು.
ವರದಿ : ದುಗ್ಗಳ ಸದಾನಂದ









