
ಸುಂಟಿಕೊಪ್ಪ ಏ.21 NEWS DESK : ಪನ್ಯದಉದ್ದಿಬಾಣೆ ಮಠದಲ್ಲಿ ಶ್ರದ್ಧಾಭಕ್ತಿಯಿಂದ ದೈವಗಳ ನೇಮೋತ್ಸವ ನಡೆಯಿತು. ಬೆಳಿಗ್ಗೆ ಗಣಹೋಮ, ಸತ್ಯ ನಾರಾಯಣ ಪೂಜೆಯೊಂದಿಗೆ ಆರಂಭಗೊಂಡು ರಾತ್ರಿ ಭಂಡಾರ ತೆಗೆಯಲಾಯಿತು. ಪ್ರಮುಖ ಧರ್ಮ ಶಕ್ತಿ ದೈವಗಳಾದ ಪಾಷಾಣ ಮೂರ್ತಿ(ಕಲ್ಲರ್ಟಿ) ಮತ್ತು ಪಂಜುರ್ಲಿ ಗುಳಿಗ ದೈವಗಳ ಕೋಲ ನಡೆಯಿತು. ಮರುದಿನ ಗುಳಿಗ ಮತ್ತು ಕೊರಗಜ್ಜನ ನೇಮ, ಅಗೇಲು ಸೇವೆ ನಡೆಯಿತು. ನೆರೆದಿದ್ದ ಸುತ್ತಮುತ್ತಲಿನ ನೂರಾರು ಭಕ್ತರು ದೈವಗಳಿಗೆ ಹರಕೆ ಒಪ್ಪಿಸಿ, ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಸುಂಟಿಕೊಪ್ಪ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಮುಖ್ಯಸ್ಥರಾದ ಮೋಣಪ್ಪ ಪೂಜಾರಿ, ಜಿನ್ನಪ್ಪ ಪೂಜಾರಿ, ಮಣಿ ಮುಖೇಶ್, ಕೆ.ಪಿ.ಜಗನ್ನಾಥ್, ನಾಗೇಶ್ ಪೂಜಾರಿ, ರಮೇಶ್ ಪೂಜಾರಿ, ಪದ್ಮನಾಭ, ಬಿ.ಕೆ.ಮೋಹನ್ ದೇಜಪ್ಪ ಇತರರು ಇದ್ದರು.









