
ಸೋಮವಾರಪೇಟೆ ಏ.22 NEWS DESK : ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಸಹಕಾರಿಯಾಗಲಿವೆ ಎಂದು ಸಾಂದೀಪನಿ ಶಾಲೆಯ ವ್ಯವಸ್ಥಾಪ ನಿರ್ದೇಶಕ ಲಿಖಿತ್ ತಿಳಿಸಿದರು. ಯಶೋದೆ ರಂಗಶಿಕ್ಷಣ ಟ್ರಸ್ಟ್, ಸಾಂದೀಪನಿ ಶಾಲೆಯ ಆಶ್ರಯದಲ್ಲಿ ಶಾಲೆಯ ಆವರಣದಲ್ಲಿ ಕಳೆದ ಇಪ್ಪತ್ತು ದಿನಗಳಿಂದ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯು ಅವಶ್ಯಕವೆಂದರು,ಇದರಿಂದಾಗಿ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಕಲಿಸುವ ಶಿಬಿರಗಳು ಇತೀಚೆಗೆ ನಡೆಯುತಿಲ್ಲವೆಂದು ವಿಷಾದಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಕೀಲ ಶ್ರೀನಿಧಿ ಮಾತನಾಡಿ ವರ್ಷವಿಡೀ ತರಗತಿಯಲ್ಲಿ ಪಾಠಪ್ರವಚನ ಕೇಳಿದ ಮಕ್ಕಳಿಗೆ ಇಂತಹ ಶಿಬಿರಗಳು ಮಕ್ಕಳ ಚಟುವಟಿಕೆಗಳಲ್ಲಿ ಬದಲಾವಣೆ ತರಲಿವೆ ಆದ್ದರಿಂದ ಇಂತಹ ಶಿಬಿರಗಳು ಆಯೋಜನೆಗೊಳ್ಳಬೇಕು ಎಂದು ತಿಳಿಸಿದರು. ಸಾಂಸ್ಕೃತಿಕ ಚಟುವಟಿಕೆಗಳೊಡನೆ ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸುವ ಹಾಗೂ ಕಲಿಸುವ ಕಾರ್ಯವಾಗಬೇಕೆಂದರು. ಪತ್ರಕರ್ತ ಎಸ್.ಮಹೇಶ್, ವೈದ್ಯರಾದ ರಾಕೇಶ್ ಪಟೇಲ್, ಕಾಫಿ ಬೆಳೆಗಾರ ಸಜನ್ ಪೂವಯ್ಯ, ಶಿಕ್ಷಕಿ ವಾಸಂತಿ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರದಲ್ಲಿ ಯಶೋಧೆ ರಂಗ ಟ್ರಸ್ಟ್ ನ ನಿಶಾಂತ್ ಮುತ್ತಣ್ಣ, ಗಣೇಶ್ ಭೀಮನಕೋಣೆ, ಸಿದ್ದಾನ್ ವಿಜಯ್, ಮಾಲಾಶ್ರೀ ಗಾವಂಕರ್, ಕಾಜು ಗುತ್ತಲ್ ರವರುಗಳು ಕಲಿಸಿ ಕೊಟ್ಟ ಹಾಡು,ನಾಟಕಗಳನ್ನು ಪ್ರದರ್ಶಿಸಿ ಗಮನ ಸೆಳೆದರು.









