
ಮಡಿಕೇರಿ ಮೇ 22 NEWS DESK : ಸುಂಟಿಕೊಪ್ಪದ ಬ್ಲೂಬಾಯ್ಸ್ ಯುವಕ ಸಂಘದ ವತಿಯಿಂದ ನಡೆಯುತ್ತಿರುವ ಡಿ ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಪಂದ್ಯಾವಳಿಯ ಫೈನಲ್ ಪಂದ್ಯಾವಳಿ ಹಾಗೂ ಸಮಾರೋಪ ಸಮಾರಂಭವು ಮೇ 25 ರಂದು ನಡೆಯಲಿದೆ. ಸುಂಟಿಕೊಪ್ಪದ ಸರ್ಕಾರಿ ಶಾಲಾ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಅಂತಿಮ ಪಂದ್ಯಾವಳಿಯನ್ನು ಸುಂಟಿಕೊಪ್ಪದ ಬೆಟ್ಟಗೇರಿ ಗ್ರೂಪ್ ಆಫ್ ಎಸ್ಟೇಟ್‍ನ ಡಿ.ವಿನೋದ್ ಶಿವಪ್ಪ ಉದ್ಘಾಟಿಸಲಿದ್ದು, ಡಿ. ವಿಶಾಲ್ ಶಿವಪ್ಪ ಬಹುಮಾನ ವಿತರಣೆ ಮಾಡಲಿದ್ದಾರೆ. ಸಂಜೆ 4.30 ಗಂಟೆಗೆ ನಡೆಯುವ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಶಾಸಕರು ಮತ್ತು ಕೆಎಸ್‍ಎಫ್‍ಎ ಅಧ್ಯಕ್ಷ ಹಾಗೂ ಬಿಡಿಎ ಅಧ್ಯಕ್ಷ ಎನ್.ಎ.ಹರಿಸ್, ನಟ ಅಭಿಷೇಕ್ ಅಂಬರೀಶ್, ನಟಿ ಶುಭ್ರ ಅಯ್ಯಪ್ಪ ಪಾಲ್ಗೊಳ್ಳಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಅರಕಲಗೂಡು ಶಾಸಕರು ಮತ್ತು ಮಾಜಿ ಸಚಿವ ಎ. ಮಂಜು, ಮೈಸೂರು ವಲಯ ಐಜಿಪಿ ಡಾ. ಬೋರಲಿಂಗಯ್ಯ, ಬೈಲಕುಪ್ಪೆ ಬೋಧಿಸತ್ವ ಟ್ರಸ್ಟ್ ಅಧ್ಯಕ್ಷರಾದ ಓಗ್ಯೆನ್ ಸಮ್ತೆನ್ಲಿಗ್ಪ ಕರ್ಮ ರಿನ್ಪೋಚೆ ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿ ವೆಂಕಟ್ ರಾಜ, ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಕಾನೂನು ಸಲಹೆಗಾರರು, ಕೊಡಗು ಜಿಲ್ಲಾ ಆಡಳಿತ ಕಾನೂನು ಸಲಹೆಗಾರರಾದ ಎ.ಲೋಕೇಶಕುಮಾರ್, ಕುಶಾಲನಗರ ಎಸ್‍ಎಲ್‍ಎನ್ ಗ್ರೂಪ್‍ನ ಸಾತಪ್ಪನ್, ವಿಶ್ವನಾಥನ್, ಬೆಂಗಳೂರು ಎಸ್ಮಾರ್ಟ್ ಸಿಇಒ ಪ್ರಶಾಂತ್ ವೆಂಕಟರಮಣ, ವಿಪಿ ಎಂಬಸಿ ಗ್ರೂಪ್‍ನ ಹರಪಳ್ಳಿ ರವೀಂದ್ರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ, ಕೊಡಗು ಜಿ.ಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಬಿಬಿವೈಸಿ ಅಧ್ಯಕ್ಷ ಜೆರ್ಮಿ ಡಿಸೋಜಾ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಉದ್ಯಮಿಗಳಾದ ಪಿ.ಸಿ.ಅಸ್ಸೈನಾರ್, ಜೈದ್, ಕೆ. ಸುಬ್ಬಯ್ಯ, ಪುರುಷೋತ್ತಮ ರೈ, ಎ.ಶಬೀರ್, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಪ್ರಧಾನ ಕಾರ್ಯದರ್ಶಿ ಎಂ.ಎ.ಉಸ್ಮಾನ್, ಸುಂಟಿಕೊಪ್ಪ ಎಸ್‍ಎನ್‍ಡಿಪಿ ಅಧ್ಯಕ್ಷ ಕೆ.ಕೆ.ಪ್ರಸಾದ್ ಕುಟ್ಟಪ್ಪ, ಸುಂಟಿಕೊಪ್ಪದ ಸರ್ಕಾರಿ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಹೆಚ್.ಯು.ರಫೀಕ್ ಖಾನ್ ಗೌರವ ಉಪಸ್ಥಿತರಿರಲಿದ್ದಾರೆ. :: ಬಹುಮಾನ :: ಮೇ 16 ರಂದು ಪ್ರಾರಂಭವಾದ ಪಂದ್ಯಾವಳಿಯಲ್ಲಿ 25 ತಂಡಗಳು ಪಾಲ್ಗೊಂಡಿದ್ದು, ಅಂತಿಮ ಪಂದ್ಯಾವಳಿಯ ಪ್ರಥಮ ಮತ್ತು ದ್ವಿತೀಯ ವಿಜೇತ ತಂಡಕ್ಕೆ ಡಿ.ವಿನೋದ್ ಶಿವಪ್ಪ ಮತ್ತು ಅವರ ಪುತ್ರ ವಿಶಾಲ್ ಶಿವಪ್ಪ ಅವರು ಡಿ.ಶಿವಪ್ಪ ಸ್ಮರಣಾರ್ಥವಾಗಿ 1 ಲಕ್ಷ ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನವಾಗಿ 50 ಸಾವಿರ ನಗದು ಮತ್ತು ಟ್ರೋಫಿ ಜೊತೆಗೆ ವೈಯಕ್ತಿಕ ಬಹುಮಾನ ನೀಡಲಿದ್ದಾರೆ.









