
ಸಿದ್ದಾಪುರ ಮೇ 27 NEWS DESK : ಸಮಸ್ತ ಕೇಂದ್ರಿಯ ಜಂಇಯ್ಯತುಲ್ ಮುಅಲ್ಲಿಮೀನ ಕೊಡಗು ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆಯು ಕಲ್ಲುಬಾಣೆ ದಾರುಲ್ ಇಸ್ಲಾಂ ಮದರಸದಲ್ಲಿ ನಡೆಯಿತು. ಎಂ.ಅಬ್ದುಲ್ ರೆಹಮಾನ್ ಮುಸ್ಲಿಯಾರ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಯನ್ನು ಪಿ.ಬಿ.ಇಸ್ಮಾಯಿಲ್ ಮುಸ್ಲಿಯಾರ್ ಉದ್ಘಾಟಿಸಿದರು. ನಂತರ ನಡೆದ ಚರ್ಚೆಯಲ್ಲಿ ವಲಯ ಮಟ್ಟದ ಶಿಕ್ಷಕರ ಒಕ್ಕೂಟವಾದ ರೈಂಜ್ ಜಂಇಯ್ಯತುಲ್ ಮುಅಲ್ಲಿಮೀನ ಕಾರ್ಯಾಚರಣೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ನಿರ್ಧರಿಸಲಾಯಿತು. ಮದರಸಾ ಶಿಕ್ಷಕರು ಮತ್ತು ಸಂಘಟನಾ ಕಾರ್ಯಕರ್ತರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಮಾದಕ ವ್ಯಸನದ ವಿರುದ್ಧ ಅಭಿಯಾನವನ್ನು ನಡೆಸಲು ಮತ್ತು ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಸಹಿಗಳನ್ನು ಮುಖ್ಯಮಂತ್ರಿಗೆ ಸಲ್ಲಿಸಲು ತೀರ್ಮಾನಿಸಲಾಯಿತು. ಪ್ರಧಾನ ಕಾರ್ಯದರ್ಶಿ ಎಂ.ಆರಿಫ್ ಫೈಝಿ ಜಂಇಯ್ಯತುಲ್ ಮುಅಲ್ಲಿಮೀನ್ ವಾರ್ಷಿಕ ವರದಿ ಮತ್ತು ಆದಾಯವನ್ನು ಮಂಡಿಸಿದರು. :: ನೂತನ ಪದಾಧಿಕಾರಿಗಳ ಆಯ್ಕೆ :: ಸಭೆಯಲ್ಲಿ 2025-26ನೇ ಸಾಲಿನ ಜಂಇಯ್ಯತುಲ್ ಮುಅಲ್ಲಿಮೀನ್ ಕೊಡಗು ಜಿಲ್ಲಾ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎಂ.ಅಬ್ದುಲ್ ರೆಹಮಾನ್ ಮುಸ್ಲಿಯಾರ್ ಗೋಣಿಕೊಪ್ಪ, ಉಪಾಧ್ಯಕ್ಷರಾಗಿ ಸಿ.ಕೆ.ಸೂಪಿ ದಾರಿಮಿ ಶನಿವಾರಸಂತೆ, ಪಿ.ಅಬ್ದುಲ್ಲಾ ಮುಸ್ಲಾಯರ್ ವಿರಾಜಪೇಟೆ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಆರಿಫ್ ಫೈಝಿ ಸಿದ್ದಾಪುರ, ಸಹ ಕಾರ್ಯದರ್ಶಿಗಳಾಗಿ ಕೆ.ಎಂ.ಅಬೂಬಕರ್ ವಾಫಿ ಸಿದ್ಧಾಪುರ ಮತ್ತು ಮುಹಮ್ಮದ್ ಹನೀಫ್ ಫೈಝಿ ಬಮ್ಮತಿ, ಕೋಶಾಧಿಕಾರಿ ತಮ್ಲೀಖ್ ದಾರಿಮಿ ಕುಶಾಲನಗರ, ಎಸ್.ಕೆ.ಎಸ್.ಬಿ.ವಿ ಚೆರ್ಮಾನ್ ಪಿ.ಬಿ.ಇಸ್ಮಾಯಿಲ್ ಮುಸ್ಲಿಯಾರ್ ಪೆರುಂಪಾಡಿ. ಸಂಚಾಲಕ ಕೆ.ಎಂ. ಅಬೂಬಕರ್ ವಾಫಿ ಸಿದ್ಧಾಪುರ, ಕಾರ್ಯಕಾರಿ ಸದಸ್ಯರಾಗಿ ಬಶೀರ್ ಹಸನಿ ನೆಲ್ಲಿಹುದಿಕೇರಿ ಮತ್ತು ಅಬ್ದುಲ್ ರಝಾಕ್ ಫೈಝಿ ಕೊಡ್ಲಿಪೇಟೆ ಹಾಗೂ ಸದಸ್ಯರಾಗಿ ವೈ.ಎಂ.ಉಮರ್ ಫೈಝಿ ಸಿದ್ದಾಪುರ, ಹನೀಫ ಫೈಝಿ ಮಡಿಕೇರಿ, ಉಬೈದ್ ಫೈಝಿ ಬಜಗುಂಡಿ, ಪಿ.ಕೆ.ಹನೀಫ್ ಮುಸ್ಲಿಯಾರ್ ಸಿದ್ದಾಪುರ, ಅಬ್ದುಲ್ ರವೂಫ್ ಹುದವಿ ನೆಲ್ಲಿಹುದಿಕೇರಿ , ಅಬ್ದುಲ್ ಗನಿ ಮದನಿ ವಿರಾಜಪೇಟೆ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಆರಿಫ್ ಫೈಝಿ ಸ್ವಾಗತಿಸಿದರು. ಹನೀಫ್ ಫೈಝಿ ವಂದಿಸಿದರು.









