
ಮಡಿಕೇರಿ ಮೇ 28 NEWS DESK : ಕೊಡಗು ಜಿಲ್ಲಾ ಕಿವುಡರ ಸಂಘದ ವಾರ್ಷಿಕ ಮಹಾಸಭೆಯು ವಿರಾಜಪೇಟೆಯ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷೆ ಗೌರು ಸೋಮಣ್ಣ, ಕೊಡಗು ಕಿವುಡರ ಸಂಘವು ಏಳು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಮುಂದೆಯೂ ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಭವಿಷ್ಯದಲ್ಲಿ ಹೆಚ್ಚಿನ ಸದಸ್ಯರನ್ನು ಒಂದೇ ವೇದಿಕೆಯಲ್ಲಿ ಸೇರುವಂತೆ ಮಾಡಬೇಕು. ಕೊಡಗಿನಲ್ಲಿ ಕಿವುಡರ ಶಾಲೆಯನ್ನು ತೆರೆಯಲು ಪ್ರಯತ್ನ ಮಾಡಬೇಕಾಗಿದೆ. ಮಾತ್ರವಲ್ಲದೆ ವಿರಾಜಪೇಟೆಯಲ್ಲಿ ಒಂದು ಕಚೇರಿಯ ಅವಶ್ಯಕತೆ ಇದ್ದು, ಸ್ಥಳೀಯ ಪುರಸಭೆಗೆ ಈ ಕುರಿತು ಮನವಿ ಸಲ್ಲಿಸಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜೋಸೆಫ್ ಸ್ಯಾಮ್, ಚಾರ್ಟೆಡ್ ಅಕೌಂಟೆಂಟ್ ಈಶ್ವರ್ ಭಟ್, ಸಂಘದ ಕ್ರೀಡಾ ಪರಿಷತ್ ಅಧ್ಯಕ್ಷ ವಿ.ಕುಮಾರ್, ರಾಜೇಶ್, ಚಂದನ್ ಹಾಜರಿದ್ದರು. ಭಾನು ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರಂಜಿತ್ ಪುದಿಯತಂಡ ವಾರ್ಷಿಕ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು.










