
ಮಡಿಕೇರಿ ಮೇ 29 NEWS DESK : ಪ್ರಸಕ್ತ (2025-26) ಸಾಲಿನಲ್ಲಿ ರಾಜ್ಯ ಮಟ್ಟದಲ್ಲಿ ‘ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ’ ಪ್ರಯುಕ್ತ ಜೂ.4 ರಂದು ಬೆಳಗ್ಗೆ 8.30 ಗಂಟೆಗೆ ಮೈಸೂರಿನಲ್ಲಿ ‘ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜೀವನ ಮತ್ತು ಸಾಧನೆಗಳ ಕುರಿತು’ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಯನ್ನು 6 ರಿಂದ 13 ವರ್ಷ ಮತ್ತು 14 ರಿಂದ 18 ವರ್ಷಗಳ ವಯೋಮಿತಿಗೆ ಒಳಪಟ್ಟಂತೆ ಎರಡು ವಿಭಾಗಗಳಲ್ಲಿ ನಡೆಸಲಾಗುತ್ತಿದ್ದು, ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪ್ರತಿ ವಿಭಾಗದಲ್ಲಿ ತಲಾ ಮೂರು (ಪ್ರಥಮ, ದ್ವಿತೀಯ, ತೃತೀಯ) ಬಹುಮಾನ ನೀಡಲಾಗುತ್ತದೆ. ವಿಜೇತರಿಗೆ ಪ್ರಶಸ್ತಿಪತ್ರ, ಪುಸ್ತಕಗಳು ಹಾಗೂ ನಗದು ರೂಪದಲ್ಲಿ ಬಹುಮಾನವನ್ನು ‘ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ’ ದಿನದಂದೆ ಕರ್ನಾಟಕ ಕಲಾಮಂದಿರ, ಮೈಸೂರಿನಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನೀಡಲಾಗುವುದು.
ಕೊಡಗು ಜಿಲ್ಲೆಯಿಂದ ಭಾಗವಹಿಸುವ ಆಸಕ್ತ ವಿದ್ಯಾರ್ಥಿಗಳು URL https://forms.gle/SKMT6PyZbAt6yizv6 ಮೂಲಕ ಹೆಸರು ನೋಂದಾಯಿಸ ಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.









