
ಸೋಮವಾರಪೇಟೆ NEWS DESK ಮೇ 29 : ಸೋಮವಾರಪೇಟೆಯಿಂದ ಶನಿವಾರಸಂತೆ, ಹಾಸನ ರಾಜ್ಯ ಹೆದ್ದಾರಿಯ ಕಾಗಡಿಕಟ್ಟೆ ಸಮೀಪ ಬುಧವಾರ ರಾತ್ರಿ ರಸ್ತೆಗಡ್ಡಲಾಗಿ ಭಾರೀ ಗಾತ್ರದ ಮರ ಉರುಳಿಬಿದ್ದು ಸಂಚಾರಕ್ಕೆ ತೊಂದರೆಯಾಯಿತು. ಅರಣ್ಯ ಇಲಾಖೆ, ಸೆಸ್ಕ್ ಸಿಬ್ಬಂದಿ ಹಾಗೂ ಸ್ಥಳೀಯರು ಮರವನ್ನು ತೆರವುಗೊಳಿಸಿ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಿದರು.








