
ಮಡಿಕೇರಿ ಮೇ 30 NEWS DESK : ಮಳೆಯಿಂದ ಹಾನಿಯಾದ ವಿವಿಧ ಸ್ಥಳಗಳಿಗೆ ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಮವಾರಪೇಟೆ ಹೋಬಳಿ ಕುಂಬೂರು ಹಾಗೂ ಜಂಬೂರು, ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮದಲ್ಲಿ ಮಳೆಯಿಂದಾಗಿ ಹಾನಿಯಾಗಿರುವ ಮನೆಗಳನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭ ಕಂದಾಯ ಅಧಿಕಾರಿಗಳು ಹಾಜರಿದ್ದರು. ಭಾಗಮಂಡಲ ಹೋಬಳಿ ಕಡಿಯತ್ತೂರು ಗ್ರಾಮದ ತೊರೇರ ತಂಗಮ್ಮ ಎಂಬವರ ಕೊಟ್ಟಿಗೆ ಮೇಲೆ ಮರ ಬಿದ್ದು ಕೊಟ್ಟಿಗೆ ಹಾನಿಯಾಗಿದೆ.










