
ಸೋಮವಾರಪೇಟೆ NEWS DESK ಮೇ 31 : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 600ಕ್ಕೆ 591 ಅಂಕಗಳಿಸಿ ಶೇ.99.36 ಫಲಿತಾಂಶದೊಂದಿಗೆ ಕೊಡಗು ಜಿಲ್ಲೆಗೆ ಟಾಪರ್ ಆಗಿರುವ ಶನಿವಾರಸಂತೆ ಸೆಕ್ರೆಡ್ ಹಾರ್ಟ್ ಆಂಗ್ಲಮಾಧ್ಯಮ ಪಿಯು ಕಾಲೇಜಿನ ವಿದ್ಯಾರ್ಥಿನಿ ಡಿ. ತೇಜಸ್ವಿನಿ ಅವರನ್ನು ಶಾಸಕ ಡಾ.ಮಂತರ್ ಗೌಡ ಅವರು ತಮ್ಮ ಕಚೇರಿಯಲ್ಲಿ ಸನ್ಮಾನಿಸಿದರು. ಕನ್ನಡ 99, ಇಂಗ್ಲೀಷ್ 94, ಭೌತಶಾಸ್ತ್ರ 100, ರಸಾಯನ ಶಾಸ್ತ್ರ 98, ಗಣಿತ 100, ಕಂಪ್ಯೂಟರ್ ಸೈನ್ಸ್ 100 ಅಂಕಗಳಿಸಿದ್ದಾರೆ. ಉಚ್ಚಂಗಿ-ಬೀರಳ್ಳ ಗ್ರಾಮದ ಕೃಷಿಕ ಹಾಗು ನಿವೃತ್ತ ಸೈನಿಕ ಎಲ್.ಎನ್. ಧರ್ಮಪ್ಪ ಹಾಗೂ ಕೆ.ಬಿ. ತಾರಾಮಣಿ ಪುತ್ರಿಯಾಗಿದ್ದಾರೆ.








