Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಉಡೋತ್ ಮೊಟ್ಟೆಯಲ್ಲಿ ಕೈಲ್ ಪೊಳ್ದ್ ಸಂಭ್ರಮ*
  • *ಕಸ್ತೂರಿ ರಂಗನ್ ವರದಿ : ಜನವಸತಿ ಗ್ರಾಮಗಳನ್ನು ಸಂಪೂರ್ಣ ಹೊರಗಿಡಲು ಆಗ್ರಹ*
  • *ಭಾರತ್ ಜೋಡೋ : ಲಾಂಛನ ಅನಾವರಣ*
  • *ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟ*
  • *ರಾಷ್ಟ್ರೀಯ ಜೂನಿಯರ್ ಬಾಲಕಿಯರ ಹಾಕಿ ಪಂದ್ಯಾವಳಿ : ಹೈದರಾಬಾದ್ ವಲಯಕ್ಕೆ ರನ್ನರ್ ಅಪ್ ಪ್ರಶಸ್ತಿ*
  • *ಮಹಿಳೆಯರು ಸರ್ಕಾರಿ ಯೋಜನೆಗಳ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು: ಶಾಸಕ ಡಾ. ಮಂತರ್ ಗೌಡ*
  • *ಒಂಟಿ ಸಲಗ ದಾಳಿ: ಕೂಲಿ ಕಾರ್ಮಿಕನಿಗೆ ಗಂಭೀರ ಗಾಯ*
  • *ಅಮೆರಿಕ ಪ್ರವಾಸದಲ್ಲಿದ್ದರೂ ಕಸ್ತೂರಿರಂಗನ್ ವರದಿ ಕುರಿತ ಸಭೆಯಲ್ಲಿ ಭಾಗವಹಿಸಲಿರುವ ಸಂಸದ ಯದುವೀರ್ ಒಡೆಯರ್; ಕೊಡಗು ಹಾಗೂ ಪಶ್ಚಿಮ ಘಟ್ಟಗಳ ಹಿತಾಸಕ್ತಿಗೆ ಬದ್ಧತೆ ಪುನರುಚ್ಚಾರ*
  • *ಕ.ಸಾ.ಪ. ವತಿಯಿಂದ ಸೆ.8ರಂದು ಕುಶಾಲನಗರದಲ್ಲಿ ಸಾಹಿತಿ ದಿ. ವಿ.ಎಸ್. ರಾಮಕೃಷ್ಣ ದತ್ತಿ ಕಾರ್ಯಕ್ರಮ*
  • *ಕನಿಷ್ಠ ವೇತನ ತಡೆ ವಿರೋಧಿಸಿ ಸೆ.8ರಂದು ‘ವಿಧಾನಸೌಧ ಚಲೋ’*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗಿನ ಕಲ್ಪತರು ಗುಂಡುಗುಟ್ಟಿ ಮಂಜನಾಥಯ್ಯ ಕೃತಿಗಳ ಲೋಕಾಪ೯ಣೆ : ಉತ್ತಮ ಅನುವಾದಕ್ಕೆ ಸಾಕಷ್ಟು ಸಾಹಿತ್ಯ ಅಧ್ಯಯನ ಅಗತ್ಯ : ಮುಳಿಯ ರಾಘವಯ್ಯ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗಿನ ಕಲ್ಪತರು ಗುಂಡುಗುಟ್ಟಿ ಮಂಜನಾಥಯ್ಯ ಕೃತಿಗಳ ಲೋಕಾಪ೯ಣೆ : ಉತ್ತಮ ಅನುವಾದಕ್ಕೆ ಸಾಕಷ್ಟು ಸಾಹಿತ್ಯ ಅಧ್ಯಯನ ಅಗತ್ಯ : ಮುಳಿಯ ರಾಘವಯ್ಯ*

ಜೂನ್ 2, 20253 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜೂ.2 NEWS DESK : ಅನುವಾದ ಸಾಹಿತ್ಯ ಕಠಿಣವಾದ ಸಾಹಿತ್ಯ ಪ್ರಕಾರವಾಗಿದ್ದು ಸಾಕಷ್ಟು ಸೂಕ್ಷತೆಯಿಂದ ತಜು೯ಮೆ ಮಾಡಬೇಕಾದ ಹೊಣೆಗಾರಿಕೆ ಅನುವಾದಕನ ಮೇಲಿರುತ್ತದೆ, ಸಾಕಷ್ಟು ಸಾಹಿತ್ಯಧ್ಯಾಯನದ ಬಳಿಕವೇ ಉತ್ತಮ ಅನುವಾದ ಸಾಧ್ಯವಾಗುತ್ತದೆ ಎಂದು ಮುಂಬೈನ ಬಾಬಾ ಪರಮಾಣು ಸಂಶೋಧನಾ ಕೇಂದ್ರದ ನಿವೃತ್ತ ವಿಜ್ಞಾನಾಧಿಕಾರಿ ಮುಳಿಯ ರಾಘವಯ್ಯ ಹೇಳಿದ್ದಾರೆ. ಸುಂಟಿಕೊಪ್ಪ ಬಳಿಯ ಗುಂಡುಗುಟ್ಟಿ ಶ್ರೀ ರಾಮಮಂದಿರ ಸಭಾಂಗಣದಲ್ಲಿ ಆಯೋಜಿತ ಮಂಜನಾಥಯ್ಯ ಅವರ 121ನೇ ಜನ್ಮಜಯಂತಿ ಸಮಾರಂಭದಲ್ಲಿ ಗುಂಡುಗುಟ್ಟಿ ಮಂಜನಾಥಯ್ಯ ಅವರ ಜೀವನ ಚರಿತ್ರೆಯ ಕೊಡಗಿನ ಕಲ್ಪತರು ಹೆಸರಿನ ಕನ್ನಡ ಮತ್ತು ಇಂಗ್ಲೀಷ್ ಕೃತಿಗಳನ್ನು ಲೋಕಾಪ೯ಣೆ ಮಾಡಿ ರಾಘವಯ್ಯ ಮಾತನಾಡಿದರು. ಇಂದಿನ ಆಧುನಿಕ ತಂತ್ರಜ್ಞಾನದ ದಿನಗಳಲ್ಲಿ ಗೂಗಲ್ ಅಥವಾ ಎಐ ನೆರವಿನಿಂದ ತಜು೯ಮೆ ಸುಲಭಸಾಧ್ಯ ಎಂಬ ಭಾವನೆ ಹಲವರಲ್ಲಿದೆ. ಆದರೆ ಖಂಡಿತವಾಗಿಯೂ ಈ ತಂತ್ರಜ್ಞಾನ ಬಳಸಿ ಮಾಡುವ ತಜು೯ಮೆ ನೈಜವಾದ ಅನುದಾವಕ್ಕೆ ನ್ಯಾಯ ನೀಡಲಾರದು. ಈ ರೀತಿಯ ತಜು೯ಮೆಯ ಭಾಷೆ ಸ್ಪಷ್ಟವಾದ ಅನುವಾದ ಆಗಲಾರದು ಎಂದೂ ರಾಘವಯ್ಯ ಹೇಳಿದರು. ಬಾರತೀಯ ಭಾಷೆಗಳು ಸಾಕಷ್ಟು ವಷ೯ಗಳ ಇತಿಹಾಸ ಹೊಂದಿವೆ. ಪ್ರತೀ ಭಾಷೆಯೂ ತನ್ನದೇ ಆದ ಮಹತ್ವದ ಪದಗಳನ್ನು ಒಳಗೊಂಡಿರುತ್ತದೆ. ಹೀಗಿರುವಾಗ ಇಂಥ ಭಾಷಾ ಪದಗಳನ್ನು ಗೂಗಲ್, ಎಐ ತಂತ್ರಜ್ಞಾನದಿಂದ ತಜು೯ಮೆ ಮಾಡಿದರೆ ಖಂಡಿತವಾಗಿಯೂ ಆಯಾ ಭಾಷೆಗೆ ವ್ಯಾಯ ದೊರಕಿದಂತಾಗದು ಎಂದೂ ಮುಳಿಯ ರಾಘವಯ್ಯ ಅಭಿಪ್ರಾಯಪಟ್ಟರು. ಕಾಯ೯ಕ್ರಮದಲ್ಲಿ ಗುಂಡುಗುಟ್ಟಿ ಮಂಜನಾಥಯ್ಯ ಅವರ ಕುರಿತು ಮಾತನಾಡಿದ ಹಿರಿಯ ಸಾಹಿತಿ ಸಿ.ಪಿ. ಬೆಳ್ಳಿಯಪ್ಪ, ಕೊಡಗಿನಲ್ಲಿ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಮುಂಚೂಣಿ ನಾಯಕತ್ವ ವಹಿಸಿದ್ದ ಮಂಜನಾಥಯ್ಯನವರು, ಗಾಂಧೀಜಿಯವರನ್ನೇ ತನ್ನ ಗುಂಡುಗುಟ್ಟಿ ಬಂಗಲೆಗೆ ಕರೆತಂದಿದ್ದರು. ಗುಂಡುಗುಟ್ಟಿಯಲ್ಲಿಯೇ ಇದ್ದ ಕಥೆಗಾತಿ೯ ಕೊಡಗಿನ ಗೌರಮ್ಮ ಆ ಸಂದಭ೯ ಗಾಂಧೀಜಿಯವರ ಮಾತಿನಿಂದ ಪ್ರೇರಿತರಾಗಿ ತನ್ನೆಲ್ಲಾ ಚಿನ್ನಾಭರಣಗಳನ್ನು ಸ್ವಾತಂತ್ರ್ಯ ಚಳವಳಿಯ ಹೋರಾಟಕ್ಕೆಂದು ಗಾಂಧೀಜಿಗೆ ನೀಡಿದ್ದರು. ಡಿವಿಜಿ. ಬೇಂದ್ರೆ, ಶಿವರಾಮಕಾರಂತ, ಪಂಜೆ ಮಂಗೇಶರಾಯ ಸೇರಿದಂತೆ ಕೊಡಗಿಗೆ ಬರುತ್ತಿದ್ದ ಅನೇಕ ಸಾಹಿತ್ಯ ದಿಗ್ಗಜರಿಗೆ ಗುಂಡುಗು್ಟ್ಟಿ ಮಂಜನಾಥಯ್ಯ ಸಾಹಿತ್ಯ ರಚನೆಗೆ ಪ್ರೇರಣೆಯಾಗಿದ್ದರು ಎಂದು ಸ್ಮರಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಮಂಜನಾಥಯ್ಯ ಸ್ಪಾಪಕಾಧ್ಯಕ್ಷರಾಗಿದ್ದ ಕನಾ೯ಟಕ ಸಂಘದ ವತಿಯಿಂದ 1983 ರಲ್ಲಿ ಸುಧಾಶ್ರೀಧರ್ ಅಧ್ಯಕ್ಷತೆಯಲ್ಲಿ ಚಿರಂತನ ಅವರ ಲೇಖನಿಯಲ್ಲಿ ಗುಂಡುಗುಟ್ಟಿ ಮಂಜನಾಥಯ್ಯ ಕುರಿತ ಪ್ರಥಮ ಕೖತಿ ಪ್ರಕಟವಾಗಿತ್ತು. ಇದೀಗ ಆ ಕೃತಿಯನ್ನು ಮರುಮುದ್ರಿಸಿ, ಇಂಗ್ಲೀಷ್ ಭಾಷೆಗೂ ಅನುವಾದಿಸಿದ್ದು ಶ್ಲಾಘನೀಯ ಪ್ರಯತ್ನ ಎಂದರು. ಕನ್ನಡದ ಸಾಹಿತಿಗಳಿಗೆ ಗುಂಡುಗುಟ್ಟಿ ಮಂಜನಾಥಯ್ಯ ಅವರ ಮನೆ ತವರು ಮನೆಯಂತೆಯೇ ಇತ್ತು. 1932 ರಲ್ಲಿ ಡಿ.ವಿ. ಗುಂಡಪ್ಪ ಅಧ್ಯಕ್ಷತೆಯಲ್ಲಿ ಮಡಿಕೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿತವಾದಾಗ ಮಂಜನಾಥಯ್ಯ ನೀಡಿದ ನೆರವು ಸ್ಮರಣೀಯವಾಗಿತ್ತು ಎಂದೂ ರಮೇಶ್ ಹೇಳಿದರು. ಜನಮಾನಸದಲ್ಲಿ ಮಂಜನಾಥಯ್ಯ ಹೆಸರು ಚಿರಸ್ಥಾಯಿಯಾಗುವ ನಿಟ್ಟಿನಲ್ಲಿ ಈ ಕೖತಿಗಳು ಖಂಡಿತಾ ಸಹಕಾರಿಯಾಗಿದೆ ಎಂದೂ ರಮೇಶ್ ನುಡಿದರು. ಪತ್ರಕತ೯ ಜಿ. ಚಿದ್ವಿಲಾಸ್ ಮಾತನಾಡಿ, ಸುಂದರ ಮತ್ತು ಆರೋಗ್ಯವಂತ ಸಮಾಜ ನಿಮಾ೯ಣಕ್ಕೆ ಅನೇಕ ಮಹನೀಯರು ಮಹತ್ವದ ಕೊಡುಗೆ ನೀಡಿರುತ್ತಾರೆ. ಕೊಡಗಿನ ಪಾಲಿಗೆ ಇಂಥ ಮಹನೀಯರಲ್ಲಿ ಗುಂಡುಗುಟ್ಟಿ ಮಂಜನಾಥಯ್ಯ ಕೂಡ ಪ್ರಮುಖರು ಎಂದರು. ಕಂಬದಕಡ ಅಣೆಕಟ್ಟು ಯೋಜನೆ ಕೊಡಗಿಗೆ ಮಾರಕವಾಗುತ್ತಿದ್ದ ಸಂದಭ೯ ಮಂಜನಾಥಯ್ಯನವರ ನೇತೖತ್ವದಲ್ಲಿ ನಡೆದ ಹೋರಾಟಕ್ಕೆ ಶಕ್ತಿ ಪತ್ರಿಕೆಯ ಮೂಲಕ ಬಿ.ಎಸ್. ಗೋಪಾಲಕೖಷ್ಣ ಬೆಂಬಲ ನೀಡಿದ್ದರು. ಹೋರಾಟ ತೀವ್ರಗೊಂಡ ಪರಿಣಾಮವಾಗಿ ಕಂಬದಕಡ ಯೋಜನೆ ಸ್ಘಗಿತವಾಯಿತು ಎಂದರು. ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ನಡಿಕೇರಿಯಂಡ ಬೋಸ್ ಮಂದಣ್ಣ ಮಾತನಾಡಿ, ಭಾರತದಲ್ಲಿ ಏನೇ ಹೊಸ ಕೖಷಿ ಪದ್ದತಿ ಕಂಡುಬಂದರೂ ಅದನ್ನು ಕೊಡಗಿನಲ್ಲಿ ಪ್ರಥಮ ಎಂಬಂತೆ ಪ್ರಗತಿ ಪರ ಕೖಷಿಕರಾಗಿದ್ದ ಮಂಜನಾಥಯ್ಯ ಜಾರಿಗೆ ತರುತ್ತಿದ್ದರು. ಇವರ ಪ್ರಯತ್ನದಿಂದಾಗಿಯೇ ಬಾಳೆಹೊನ್ನೂರಿನ ನಂತರ ಭಾರತದಲ್ಲಿಯೇ ಎರಡನೇ ಕಾಫಿ ಸಂಶೋಧನಾ ಕೇಂದ್ರ ಚೆಟ್ಟಳ್ಳಿಯಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಹಾಗೇ ಹರದೂರು ಏತ ನೀರಾವರಿ ಯೋಜನೆ ಮೂಲಕ ಸಾವಿರಾರು ಕೃಷಿಕರಿಗೆ ಎರಡನೇ ಬೆಳೆ ಬೆಳೆಯಲು ಮಂಜನಾಥಯ್ಯ ನೆರವಾದರು ಎಂದು ಸ್ಮರಿಸಿಕೊಂಡರು. ಮಂಜನಾಥಯ್ಯನವರ ಸ್ವಾಥ೯ ರಹಿತ ಜೀವನಸದಾ ಮಾದರಿಯಾಗಿದೆ ಎಂದೂ ಬೋಸ್ ಮಂದಣ್ಣ ಶ್ಲಾಘಿಸಿದರು. ಕುಶಾಲನಗರದಲ್ಲಿನ ನಿವೖತ್ತ ಉಪನ್ಯಾಸಕ ಕೆ.ಎಸ್. ಭಟ್ ಮಾತನಾಡಿ, ಆತ್ಮ ನಿಭ೯ರ್ ಯೋಜನೆಯಂತೆ 75 ವಷ೯ಗಳ ಹಿಂದೆಯೇ ಗುಂಡುಗುಟ್ಟಿಯಲ್ಲಿ ಅನೇಕ ವಿನೂತನ ಯೋಜನೆಗಳನ್ನು ಮಂಜನಾಥಯ್ಯ ಜಾರಿಗೊಳಿಸಿದ್ದರು. ಆ ಯೋಜನೆಗಳು ಸಾವಿರಾರು ಕೃಷಿಕರಿಗೆ, ನಾಗರಿಕರಿಗೆ ಇಂದಿಗೂ ನೆರವು ನೀಡಿದೆ ಎಂದರು. ಚೆಟ್ಟಳ್ಳಿಯ ಕಾಫಿ ಬೆಳೆಗಾರ ಹೆಚ್.ಎಸ್. ತಿಮ್ಮಪ್ಪಯ್ಯ ಮಾತನಾಡಿ, ವಿದ್ಯಾಥಿ೯ಗಳು, ಕಾಫಿ ಕೖಷಿಕರು, ಉದ್ಯಮಿಗಳು ಹೀಗೆ ಯಾರೇ ಬಂದರೂ ಮಂಜನಾಥಯ್ಯ ಇಲ್ಲ ಎನ್ನದೇ ಆಥಿ೯ಕ ನೆರವು ನೀಡುತ್ತಿದ್ದರು. ಹಲವರ ಪಾಲಿಗೆ ಕಲ್ಪವೖಕ್ಷದಂತಿದ್ದ ಮಹಾನ್ ವ್ಯಕ್ತಿತ್ವ ಅವರದ್ದಾಗಿತ್ತು. ತಾನು ಮಾತ್ರ ಉತ್ತಮ ಕೖಷಿಕನಾದರೆ ಸಾಲದು ತನ್ನ ಸುತ್ತಲಿನಲ್ಲಿರುವ ಇತರ ಕೖಷಿಕರೂ ಉತ್ತಮ ಬೆಳೆ ಬೆಳೆಯಬೇಕೆಂಬ ಉದ್ದೇಶದಿಂದ ಮಂಜನಾಥಯ್ಯ ಇತರ ಕೖಷಿಕರಿಗೂ ಸಹಾಯ ಮಾಡಿ ಅವರನ್ನೂ ಸ್ವಾವಲಂಭಿಯಾಗಿ ಮಾಡುತ್ತಿದ್ದರು ಎಂದೂ ತಿಮ್ಮಪ್ಪಯ್ಯ ಸ್ಮರಿಸಿದರು. ಪುಸ್ತಕಗಳನ್ನು ಪ್ರಕಾಶನಗೊಳಿಸಿದ ಮಡಿಕೇರಿಯ ವಾತಾ೯ ಕಮ್ಯೂನಿಕೇಷನ್ಸ್ ನ ವ್ಯವಸ್ಥಾಪಕ ನಿದೇ೯ಶಕ ಅನಿಲ್ ಹೆಚ್..ಟಿ. ಮಾತನಾಡಿ, ಸಮಾಜಸೇವೆ, ರಾಜಕೀಯ, ಧಾಮಿ೯ಕ ಸೇವೆ, ಸ್ವಾತಂತ್ರ್ಯ ಹೋರಾಟ, ಕೖಷಿ, ಹೈನುಗಾರಿಕೆ, ಪುಪ್ಪ ವಹಿವಾಟು,ಹೀಗೆ ಮಂಜನಾಥಯ್ಯ ಹತ್ತು ಹಲವಾರು ಸೇವಾ ಕಾಯ೯ಗಳಲ್ಲಿ ನಿರತರಾಗಿದ್ದರು. ಇಂಥ ಅಪರೂಪದ ಸಾಧಕನ ಕುರಿತು ಎರಡೂ ಕೖತಿಗಳು ಭವಿಷ್ಯದ ಪೀಳಿಗೆಗೆ ಮಾಗ೯ದಶ೯ನ ನೀಡಲಿದೆ. ಮಂಜನಾಥಯ್ಯ ಅವರ ಆದಶ೯ ಜೀವನ ಇತರರಿಗೆ ಮಾಗ೯ದಶ೯ನವಾಗಲು ಈ ಕೃತಿಗಳು ದಾರಿದೀಪದಂತಿದೆ ಎಂದು ಅಭಿಪ್ರಾಯಪಟ್ಟರು. ಇದೇ ಸಂದಭ೯ ಕೖತಿಗಳನ್ನು ಮುದ್ರಿಸಿದ ಕಾನಬೈಲು ತೋಟಮಾಲೀಕ ಗುಂಡುಗುಟ್ಟಿ ರಾಜೇಂದ್ರಕುಮಾರ್ ಅವರು ಮುಳಿಯ ರಾಘವಯ್ಯ ಅವರನ್ನು ಸನ್ಮಾನಿಸಿದರು. ಸ್ವಾತಿ ಮಂದಣ್ಣ ಸ್ವಾಗತಿಸಿ, ವಂದಿಸಿದ ಕಾಯ೯ಕ್ರಮದಲ್ಲಿ ಸಾಧನಾ ರಾಜೇಂದ್ರ, ಮಂಜನಾಥಯ್ಯ ಅವರ ಮೊಮ್ಮಕ್ಕಳಾದ ಶಾಂತಳ, ಮರಿಮಕ್ಕಳಾದ ಮನುಗೌತಮ್, ಮುಕುಲ್ ಮಹೇಂದ್ರ, ಅಕ್ಷಯ್ ಸೇರಿದಂತೆ ಜಿಲ್ಲೆಯಾದ್ಯಂತಲಿನ ಅನೇಕ ಗಣ್ಯರು ಹಾಜರಿದ್ದರು. ಗುಂಡುಗುಟ್ಟಿ ಮಂಜನಾಥಯ್ಯ ಅವರ 121 ನೇ ಜನ್ಮಜಯಂತಿ ಸಂದಭ೯ ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಲಾಯಿತು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಉಡೋತ್ ಮೊಟ್ಟೆಯಲ್ಲಿ ಕೈಲ್ ಪೊಳ್ದ್ ಸಂಭ್ರಮ*

ಸೆಪ್ಟೆಂಬರ್ 4, 2026

*ಕಸ್ತೂರಿ ರಂಗನ್ ವರದಿ : ಜನವಸತಿ ಗ್ರಾಮಗಳನ್ನು ಸಂಪೂರ್ಣ ಹೊರಗಿಡಲು ಆಗ್ರಹ*

ಸೆಪ್ಟೆಂಬರ್ 4, 2026

*ಭಾರತ್ ಜೋಡೋ : ಲಾಂಛನ ಅನಾವರಣ*

ಸೆಪ್ಟೆಂಬರ್ 4, 2026

*ಕಸ್ತೂರಿ ರಂಗನ್ ವರದಿ : ಜನವಸತಿ ಗ್ರಾಮಗಳನ್ನು ಸಂಪೂರ್ಣ ಹೊರಗಿಡಲು ಆಗ್ರಹ*

ಸೆಪ್ಟೆಂಬರ್ 4, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, ಸೆ.4 NEWS DESK : ಕಸ್ತೂರಿ ರಂಗನ್ ಹೋರಾಟ ಸಮಿತಿ-ಕೊಡಗು ಜಿಲ್ಲೆ ವತಿಯಿಂದ ಮಡಿಕೇರಿಯಲ್ಲಿ ಕಸ್ತೂರಿರಂಗನ್ ವರದಿ ಕುರಿತು…

*ಭಾರತ್ ಜೋಡೋ : ಲಾಂಛನ ಅನಾವರಣ*

ಸೆಪ್ಟೆಂಬರ್ 4, 2026

*ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟ*

ಸೆಪ್ಟೆಂಬರ್ 4, 2026

*ರಾಷ್ಟ್ರೀಯ ಜೂನಿಯರ್ ಬಾಲಕಿಯರ ಹಾಕಿ ಪಂದ್ಯಾವಳಿ : ಹೈದರಾಬಾದ್ ವಲಯಕ್ಕೆ ರನ್ನರ್ ಅಪ್ ಪ್ರಶಸ್ತಿ*

ಸೆಪ್ಟೆಂಬರ್ 4, 2026

*ಮಹಿಳೆಯರು ಸರ್ಕಾರಿ ಯೋಜನೆಗಳ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು: ಶಾಸಕ ಡಾ. ಮಂತರ್ ಗೌಡ*

ಸೆಪ್ಟೆಂಬರ್ 4, 2026

*ಒಂಟಿ ಸಲಗ ದಾಳಿ: ಕೂಲಿ ಕಾರ್ಮಿಕನಿಗೆ ಗಂಭೀರ ಗಾಯ*

ಸೆಪ್ಟೆಂಬರ್ 4, 2026

*ಅಮೆರಿಕ ಪ್ರವಾಸದಲ್ಲಿದ್ದರೂ ಕಸ್ತೂರಿರಂಗನ್ ವರದಿ ಕುರಿತ ಸಭೆಯಲ್ಲಿ ಭಾಗವಹಿಸಲಿರುವ ಸಂಸದ ಯದುವೀರ್ ಒಡೆಯರ್; ಕೊಡಗು ಹಾಗೂ ಪಶ್ಚಿಮ ಘಟ್ಟಗಳ ಹಿತಾಸಕ್ತಿಗೆ ಬದ್ಧತೆ ಪುನರುಚ್ಚಾರ*

ಸೆಪ್ಟೆಂಬರ್ 4, 2026

*ಕ.ಸಾ.ಪ. ವತಿಯಿಂದ ಸೆ.8ರಂದು ಕುಶಾಲನಗರದಲ್ಲಿ ಸಾಹಿತಿ ದಿ. ವಿ.ಎಸ್. ರಾಮಕೃಷ್ಣ ದತ್ತಿ ಕಾರ್ಯಕ್ರಮ*

ಸೆಪ್ಟೆಂಬರ್ 4, 2026

*ಕನಿಷ್ಠ ವೇತನ ತಡೆ ವಿರೋಧಿಸಿ ಸೆ.8ರಂದು ‘ವಿಧಾನಸೌಧ ಚಲೋ’*

ಸೆಪ್ಟೆಂಬರ್ 4, 2026

*7ನೇ ಹೊಸಕೋಟೆಯಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ*

ಸೆಪ್ಟೆಂಬರ್ 4, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.