
ನಾಪೋಕ್ಲು ಜೂ.12 NEWS DESK : ಮರಂದೋಡ ಗ್ರಾಮದ ಕೇಕುಮಾನಿ ಶ್ರೀ ಭಗವತಿ ದೇವಸ್ಥಾನದ ಭದ್ರಕಾಳಿ, ವಿಷ್ಣುಮೂರ್ತಿಯ ದೊಡ್ಡ ಪಟ್ಟಣಿ ಉತ್ಸವವು ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು. ಉತ್ಸವದ ಅಂಗವಾಗಿ ಊರಿನ 13 ಕುಟುಂಬದ ದೊಡ್ಡ ಮನೆಯಿಂದ ಕಲಿಯಪಾತ್ರೆ ಇಳಿಯುವುದು ಬಳಿಕ ಎತ್ತು ಪೋರಾಟದ ಮೂಲಕ ದೇವಸ್ಥಾನಕ್ಕೆ ಆಗಮಿಸಿ ನಂತರ ಬಾಳೋ ಪಾಟ್, ಬೊಳಕಾಟ್ ನಡೆಯಿತು. ಮುಂಜಾನೆ ಸಾರ್ಥವು ಅಯ್ಯಪ್ಪ, ಅಜ್ಜಪ್ಪ ದೇವರ ಕೋಲಾಟ ನಡೆದು ಬಳಿಕ ಭದ್ರಕಾಳಿ ಹಾಗೂ ಪಡಮಾಳಿ ದೇವರ ಕೋಲ ತಿರುಮುಡಿ ಶ್ರೀ ಭಗವತಿ ದೇವಸ್ಥಾನದವರೆಗೆ ತೆರಳಿ ಮೂಲ ಸ್ಥಾನಕ್ಕೆ ಹಿಂತುರುಗಿತು. ಬಳಿಕ ಭಕ್ತಾದಿಗಳು ಹರಕೆ ಕಾಣಿಕೆ ಒಪ್ಪಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಆಡಳಿತ ಮಂಡಳಿಯವರು, ತಕ್ಕ ಮುಖ್ಯಸ್ಥರು ಹಾಗೂ ವಿವಿಧ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.









