
ಸುಂಟಿಕೊಪ್ಪ, ಜೂ.4 NEWS DESK : ಕೃಷಿ ಇಲಾಖೆ ಸೋಮವಾರಪೇಟೆ ಬಿಜೋಪಚಾರ ಸುರಕ್ಷಿತ ಕೀಟನಾಶಕ ಹಾಗೂ ಭಾರತ ಸರ್ಕಾರ ಗೋಣಿಕೊಪ್ಪ ಸಂಯುಕ್ತಾಶ್ರಯದಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ ಪಶುಪಾಲನೆ ಹಾಗೂ ಮೀನುಗಾರಿಕೆಯ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಹಾಗೂ ಮುಂಗಾರು ಹಂಗಾಮ ಅಭಿಯಾನ ನಡೆಯಿತು. ಗುಡುಗುಟ್ಟಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಬೋಸ್ ಮಂದಣ್ಣ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಉದ್ಘಾಟಿಸಿ ಮಾತನಾಡಿ, ಕೃಷಿ ಚಟುವಟಿಕೆ ಗೆ ಪೂರಕವಾದ ಮಳೆಯಾಗಿದು,್ದ ಮುಂದಿನ ದಿನಗಳಲ್ಲಿ ಉತ್ತಮ ಫಸಲು ಬರುವ ನಿರೀಕ್ಷೆಯಿದೆ. ವಿಜ್ಞಾನಿಗಳು ಶಿಪಾರಸ್ಸು ಮಾಡುವ ಕೀಟನಾಶಕಗಳನ್ನು ಬಳಸಿ ಭೂಮಿಯ ಫಲವತ್ತತೆಯನ್ನು ಕಾಯ್ದುಕೊಂಡು ಕೃಷಿ ಅಭಿವೃದ್ಧಿಯಲ್ಲಿ ಮುಂದಾಗಬೇಕೆಂದು ಬೋಸ್ ಮಂದಣ್ಣ ಸಲಹೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಪಂಚಾಯಿತಿ ಸದಸ್ಯ ಪ್ರಸಾದ್ ಕುಟ್ಡಪ್ಪ ವಹಿಸಿ ಮಾತನಾಡಿದರು. ವಿವಿಧ ಇಲಾಖೆಯ ಸಂಶೋದನಾ ವಿಜ್ಞಾನಿಗಳಾದ ಡಾ.ಪ್ರಭಾಕರ, ಡಾ.ಮೋಹನ್ ಕುಮಾರ, ಡಾ.ರಮೇಶ್ ಕೃಷ್ಣ, ಡಾ.ರಾಜೇಂದ್ರ, ಡಾ.ಬಿಶ್ವವರ್ಜನ್, ಡಾ.ಕೃಷ್ಣಕುಮಾರ್, ಡಾ.ಶಿವಕುಮಾರ್, ಡಾ.ಸಲೀಂ ಹಾಗೂ ಚಂದ್ರಶೇಖರ್ ಸೂಕ್ತ ಮಾಹಿತಿ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಬೆಳೆಗಾರರು ಕೃಷಿ ಬಗ್ಗೆ ಸಂಶಯ ಅನುಮಾನಗಳಿಗೆ ಸಲಹೆಯನ್ನು ವಿಜ್ಞಾನಿಗಳಿಂದ ಪಡೆದುಕೊಂಡರು. ಇದೇ ಸಂದರ್ಭ ವಿವಿಧ ಬಗೆಯ ಹಣ್ಣಿನ ಗಿಡಗಳು, ಬೀಜೋತ್ಪನ್ನಗಳು ಹಾಗೂ ಕೀಟನಾಶಕ ಜೌಷಧಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.










