
ಕುಶಾಲನಗರ ಜೂ.7 NEWS DESK : ಕುಶಾಲನಗರ ಪಟ್ಟಣದ ಗಣಪತಿ ದೇವಾಲಯ ಮುಂಭಾಗ ಸಂಚಾರಿ ಪೊಲೀಸ್ ಚೌಕಿ ಬಳಿ ಯುತಿಯೊಬ್ಬಳು ನೆರಳು ಗಿಡ ನೆಟ್ಟು ತನ್ನ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ಸಂಭ್ರಮಿಸಿ ಇತರರಿಗೆ ಮಾದರಿಯಾಗಿದ್ದಾಳೆ. ಕುಶಾಲನಗರ ಪಟ್ಟಣದ ಹೃದಯ ಭಾಗದ ಪೊಲೀಸ್ ಚೌಕಿಯಲ್ಲಿ ಸಂಚಾರಿ ಪೊಲೀಸರು ದಿನದ ಬಹುತೇಕ ಅವಧಿ ಬಿಸಿಲಿಗೆ ಮೈಯೊಡ್ಡಿ ತಮ್ಮ ನಿತ್ಯದ ಸಂಚಾರಿ ನಿಯಂತ್ರಣ ಕೆಲಸ ಮಾಡುತ್ತಿರುವುದನ್ನು ಗಮನಿಸಿದ ಯುವತಿ ಚೈತನ್ಯ ಪೊಲೀಸರಿಗೆ ನೆರಳು ಕಲ್ಪಿಸುವ ಆಶಯದೊಂದಿಗೆ ಗಿಡ ಒಂದನ್ನು ನೆಟ್ಟು ಅದಕ್ಕೆ ಕಬ್ಬಿಣದ ಆವರಣ ಬೇಲಿ ನಿರ್ಮಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪ್ರತಿಯೊಬ್ಬರು ತಮ್ಮ ಹುಟ್ಟುಹಬ್ಬವನ್ನು ಕನಿಷ್ಠ ಒಂದು ಗಿಡ ನೆಟ್ಟು ಬೆಳೆಸಿ ಆಚರಿಸುವ ಮೂಲಕ ಸಂಭ್ರಮಿಸುವಂತೆ ಚೈತನ್ಯಳ ಸಾರ್ವಜನಿಕ ಸಂದೇಶ ಕುಶಾಲನಗರ ಪಟ್ಟಣ ಸುತ್ತಮುತ್ತ ಪ್ರಾಪ್ತಿಯ ಜನರ ಗಮನ ಸೆಳೆದಿದೆ.









