

ಸುಂಟಿಕೊಪ್ಪ ಜೂ.9 NEWS DESK : ಸುಂಟಿಕೊಪ್ಪದಲ್ಲಿ ಮುಸ್ಲಿಂ ಬಾಂಧವರು ತ್ಯಾಗ, ಸಮಾನತೆ, ಸಹಬಾಳ್ವೆಯ ಸಂಕೇತವಾದ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಭಾಂದವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭ ಹಾರೈಸಿಕೊಂಡರು. ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್‍ನಲ್ಲಿ ಇಬ್ರಾಹಿಂ ಯಾಸನಿ, ಸುನ್ನಿ ಹನಫಿ ಮುಸ್ಲಿಂ ಜಮಾಅತ್ ಮೌಲನಾ ಜುಬೇರ್, ಸುನ್ನಿ ಶಾಫಿ ಜುಮಾ ಮಸ್ಜಿದ್ ಧಾರ್ಮಿಕ ಧರ್ಮಗುರುಗಳಾದ ಇಸಾಂ ಬಾಕವಿ, ಮಸ್ಜಿದ್ ಮೌಲನಾ ಇನಾಂ, ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್ ಮುಸ್ಲಿಯರ್ ಅಬ್ದುಲ್ ಅಜೀಜ್ ಸಖಾಫಿ ಅವರುಗಳು ಧಾರ್ಮಿಕ ಪ್ರವಚ ಪ್ರಾರ್ಥನೆಯನ್ನು ಸಲ್ಲಿಸಿದರು. ಸಲಾಫಿ ಮಸೀದಿಯಲ್ಲಿ ಬಕ್ರೀದ್ ಈದ್‍ಉಲ್ ಆಧಾ ಅಂಗವಾಗಿ ನಿಷಾದ್ ಸಲಾಯಿ ಅವರು ಧಾರ್ಮಿಕ ಪ್ರವಚನ ಹಾಗೂ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ಪುರುಷರು, ಮಹಿಳೆಯರು, ಮಕ್ಕಳು ಒಗ್ಗೂಡಿ ಪ್ರಾರ್ಥನೆಯನ್ನು ಸಲ್ಲಿಸಿದರು. ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್, ಹಾಗೂ ಪೊಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ವಹಿಸಿದ್ದರು.









