

ಸುಂಟಿಕೊಪ್ಪ ಜೂ.7 NEWS DESK : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸುಂಟಿಕೊಪ್ಪ ಪೊಲೀಸ್ ಠಾಣೆ ಆವರಣದಲ್ಲಿ ಗಿಡ ನೆಡುವುದರೊಂದಿಗೆ ವಿಶ್ವ ಪರಿಸರ ದಿನ ಆಚರಿಸಲಾಯಿತು. ಸುಂಟಿಕೊಪ್ಪ ಪೊಲೀಸ್ ಠಾಣೆ ಆವರಣದಲ್ಲಿ ಠಾಣಾಧಿಕಾರಿ ಮೋಹನ್ ರಾಜ್ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಸುಂಟಿಕೊಪ್ಪ ನಾಡು ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರೀಶಾ ನಾವು ಪರಿಸರವನ್ನು ಉಳಿಸಬೇಕೆಂದರೆ ಪ್ಲಾಸಿಕ್ ಬಳಕೆಯನ್ನು ಕಡಿಮೆ ಮಾಡಿಬೇಕು, ಪರಿಸರದಲ್ಲಿರುವ ಪಕ್ಷಿಗಳಿಗೆ ಮನೆಯ ಮುಂದೆ ನೀರನ್ನು ಇಡಬೇಕು ಎಂದು ಹೇಳಿದರು. ಈ ಸಂದರ್ಭ ಅಪರಾಧ ವಿಭಾಗದ ಸಬ್‍ಇನ್ಸ್‍ಪೇಕ್ಟರ್ ಭಾರತಿ, ಎಎಸ್‍ಐ ಸೈಮನ್ ಡಿ.ಕುನ್ಹ, ಪೇದೆ ಜಗದೀಶ್ ಪಾಲ್ಗೊಂಡಿದರು.









