
ಮಡಿಕೇರಿ ಜೂ.9 NEWS DESK : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಘಟಕ ಮತ್ತು ಕೊಡಗು ಕನ್ನಡ ಭವನ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲಾ ಚುಟುಕು ಕಾವ್ಯಶ್ರೀ ಪ್ರಶಸ್ತಿ ಪ್ರದಾನ ಮತ್ತು ಕೊಡಗು ಕಾವ್ಯ ಕವಿಗೋಷ್ಠಿ ಕಾರ್ಯಕ್ರಮ ಜು.6 ರಂದು ನಡಯಲಿದೆ. ನಗರದ ಪತ್ರಿಕಾ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕೊಡಗು ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ನಡೆಸಿದ ಕೊಡಗು ಜಿಲ್ಲೆಯ ಕವಿಗಳಿಗೆ ನೀಡಿದ ಸ್ಪರ್ಧೆಯಲ್ಲಿ ವಿಜೇತರಾದ 5 ಮಂದಿಗೆ “ಕೊಡಗು ಜಿಲ್ಲಾ ಚುಟುಕು ಕಾವ್ಯಶ್ರೀ ಪ್ರಶಸ್ತಿ 2025 ನೀಡಿ ಗೌರವಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ ಪುಸ್ತಕ ನೀಡಿ ಪುರಸ್ಕೃರಿಸಲಾಗುವುದು. ಹೆಸರು ನೋಂದಾಯಿಸಲು ಮನವಿ :: “ಕೊಡಗು ಮಳೆಗಾಲ ಕವಿಗೋಷ್ಠಿ” ಗೆ ಹೆಸರು ನೋಂದಾಯಿಸಲು ಕನ್ನಡ ಚುಟುಕು ಸಾಹಿತ್ಯ ಪರಿಷತ್ ಹಾಗೂ ಕೊಡಗು ಕನ್ನಡ ಭವನ ಅಪೇಕ್ಷಿಸಿದೆ. ಕವಿಗೋಷ್ಠಿಯಲ್ಲಿ ಹೆಸರು ನೋಂದಾಯಿಸುವವರು ಕಾರ್ಯದರ್ಶಿ ಬೊಟ್ಟೋಳಂಡ ನಿವ್ಯ ಕಾವೇರಮ್ಮ 9449505092 ವಾಟ್ಸಪ್ ನಲ್ಲಿ ಹೆಸರು ನೋಂದಾಯಿಸಲು ಕೊಡಗು ಕನ್ನಡ ಭವನ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮತ್ತು ಕನ್ನಡ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಎಂ.ಎ.ರುಬೀನಾ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









