


ಕುಶಾಲನಗರ ಜೂ.9 NEWS DESK : ಕುಶಾಲನಗರದ ಶ್ರೀ ಚೌಡೇಶ್ವರಿ ದೇವಾಲಯದ ದೇವಾಂಗ ಸಂಘದ ವತಿಯಿಂದ ಕುಶಾಲನಗರದ ರಥಬೀದಿಯಲ್ಲಿರುವ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ವಾರ್ಷಿಕೋತ್ಸವು ಶ್ರದ್ಧಾಭಕ್ತಿಯಿಂದ ಜರುಗಿತು. ಮುಂಜಾನೆಯಿಂದಲೆ ಗಣಪತಿ ಹೋಮ, ಧ್ವಜಾರೋಹಣ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿತು. ನಂತರ ಸಮುದಾಯದ ಬಾಂಧವರು ಕಾವೇರಿ ನದಿಗೆ ತೆರೆಳಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ, ನದಿಯಿಂದ ಕಳಸ ಹೊತ್ತವರು ಜಾನಪದ ವೀರಗಾಸೆ ನೃತ್ಯ,ಮಂಗಳವಾದ್ಯದೊಂದಿಗೆ ನಗರ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ ದೇವಾಲಯಕ್ಕೆ ತಲುಪಿದರು. ನಂತರ ದೇವಾಲಯದಲ್ಲಿ ದೇವಿಗೆ ಪೂಜಾ ವಿಧಿ ವಿಧಾನಗಳು ನಡೆದು ಮಹಾಮಂಗಳಾರತಿ, ಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನೆರವೇರಿತು. ಪೂಜಾ ಕೈಂಕರ್ಯಯನ್ನು ದೇವಾಲಯದ ಅರ್ಚಕ ಪ್ರಸನ್ನ ಕುಮಾರ್ ನೆರವೇರಿಸಿದರು. ಸಂಜೆ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ದೇವಿಯ ವಿಗ್ರಹವನ್ನು ಕುಳ್ಳಿರಿಸಿ ಪೂಜೆ ಸಲ್ಲಿಸಿ, ವೀರಗಾಸೆ ನೃತ್ಯ, ಮಂಗಳ ವಾದ್ಯದೊಂದಿಗೆ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆಯು ದೇವಾಲಯದ ಆವರಣದಿಂದ ಬೈಜನಹಳ್ಳಿನವರೆಗೆ ನಗರದ ಪ್ರಮುಖ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಾಗಿತು. ಈ ಸಂದರ್ಭದಲ್ಲಿ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನವು ನಡೆಯಿತು. ನಂತರ ಮೆರವಣಿಗೆಯು ಸ್ವ ಸ್ಧಳ ದೇವಾಲಯದ ಆವರಣಕ್ಕೆ ಬಂದು ಸೇರಿತು. ಪೂಜ್ಯೋತ್ಸವ ಕಾರ್ಯಕ್ರಮದಲ್ಲಿ ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ನೂರಾರು ಭಕ್ತರು ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ದೇವಾಂಗ ಸಂಘದ ಅಧ್ಯಕ್ಷ ಡಿ.ವಿ.ರಾಜೇಶ್, ಉಪಾಧ್ಯಕ್ಷ ಡಿ.ವಿ.ಚಂದ್ರು(ರಾಕಿ), ಪ್ರಧಾನ ಕಾರ್ಯದರ್ಶಿ ಡಿ.ಆರ್.ಕೃಷ್ಣಕುಮಾರ್, ಸಹ ಕಾರ್ಯದರ್ಶಿ ಡಿ.ವಿ.ಚಂದ್ರಶೇಖರ್, ಖಜಾಂಚಿ ಡಿ.ವಿ.ಪ್ರದೀಪ್, ಸಂಘಟನಾ ಕಾರ್ಯದರ್ಶಿ ಡಿ.ಎನ್.ವಿನೋದ್, ಡಿ.ಆರ್.ಜಯಂತ್, ಗೌರವ ಸಲಹೆಗಾರರಾದ ಡಿ.ಟಿ.ವಿಜಯೆಂದ್ರ, ಡಿ.ಎಸ್.ಕೋದಂಡರಾಮ, ಡಿ.ಟಿ.ನಾಗ್ರೇಂದ್ರ, ಡಿ.ಕೆ.ತಿಮ್ಮಪ್ಪ, ಡಿ.ಸಿ.ಜಗದೀಶ್, ಡಿ,ಸಿ.ಪ್ರಭಾಕರ್, ಹೆಚ್.ಎನ್.ಯೋಗೇಶ್, ಯತಿರಾಜ್ , ಮಹಿಳಾ ಘಟಕದ ಪ್ರಮುಖರಾದ ಪದ್ಮಮಹೇಶ್, ಶೋಭಾ ರವಿಕುಮಾರ್, ರೂಪ ಕುಮಾರ್, ಶೋಭಾ ಅನಿಲ್, ಗೀತಾ ಸೋಮಶೇಖರ್, ಯುವಕ ಸಂಘದ ಡಿ.ಎಸ್. ಯತೀರಾಜ್, ಡಿ.ಪಿ.ಮಧು, ಡಿ. ಪಿ.ಗಣೇಶ್, ಡಿ.ಟಿ. ರವಿಶಂಕರ್, ಸೇರಿದಂತೆ ಸಮಿತಿಯ ನಿರ್ದೇಶಕರು ಹಾಜರಿದ್ದರು.










