Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಗೌರಿ ಗಣೇಶ ಹಬ್ಬ : ಗಣೇಶೋತ್ಸವ ಸಮಿತಿಗಳ ಸಭೆ : ನಿಯಮ ಪಾಲನೆಗೆ ಕೊಡಗು ಪೊಲೀಸ್ ಕಟ್ಟುನಿಟ್ಟಿನ ಸೂಚನೆ*
  • *ವಿರಾಜಪೇಟೆ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಕ್ಷಾಬಂಧನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ*
  • *ವಿರಾಜಪೇಟೆ : ಸೆ.8 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
  • *ಮಡಿಕೇರಿಯಲ್ಲಿ ಮಧ್ಯವಾಷಿ೯ಕ ಕೀಲು ಮತ್ತು ಮೂಳೆ ವಿಭಾಗದ ರಾಜ್ಯ ಸಮ್ಮೇಳನ : ಜಿಲ್ಲಾ ಸಕಾ೯ರಿ ಆಸ್ಪತ್ರೆಯಲ್ಲಿ ಮಂಡಿನೋವಿಗೆ ರೋಬೋಟಿಕ್ ಸಜ೯ರಿ ಸೇವೆ : ಡಾ.ಎ.ಜಿ.ಲೋಕೇಶ್*
  • *ಮಡಿಕೇರಿಗೆ ಬರುತ್ತಿದ್ದ ಬಸ್‌ಗೆ ಆಕಸ್ಮಿಕ ಬೆಂಕಿ; ಸಂಪೂರ್ಣ ಸುಟ್ಟು ಭಸ್ಮ – ಪ್ರಯಾಣಿಕರು, ಸಿಬ್ಬಂದಿ ಪಾರು*
  • *ಮಡಿಕೇರಿಯಲ್ಲಿ ಶಿಕ್ಷಕರ ದಿನಾಚರಣೆ : ಕೊಡಗಿನ ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣಕ್ಕೆ ಯೋಜನೆ : ಸಚಿವ ಪಿ.ಎಂ.ನರೇಂದ್ರಸ್ವಾಮಿ*
  • *ಕೊಡಗು : ಪ್ರಜಾಸೇವಾ ಆಂದೋಲನಕ್ಕೆ ಸಚಿವರಿಂದ ಚಾಲನೆ : ಜನರ ಮನೆ ಬಾಗಿಲಿಗೆ ಸರ್ಕಾರ : ಪಿ.ಎಂ.ನರೇಂದ್ರ ಸ್ವಾಮಿ*
  • *ದಶ ದೇವಾಲಯಗಳ ಜೀರ್ಣೋದ್ಧಾರಕ್ಕೆ ತಲಾ ರೂ.5 ಲಕ್ಷ ಅನುದಾನ ನೀಡಿದ ಶಾಸಕ ಡಾ.ಮಂತರ್ ಗೌಡ : ಪೂಜೆಯ ಮೂಲಕ ಕಾಮಗಾರಿ ಆರಂಭ*
  • *ಸೆಪ್ಟೆಂಬರ್ 7 ರಂದು ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಅವರ 61ನೇ ಪುಣ್ಯಸ್ಮರಣೆ; ಮಡಿಕೇರಿಯಲ್ಲಿ ಸಮರ ವೀರನಿಗೆ ಗೌರವ ಸಮರ್ಪಣೆ*
  • *ಕೊಡವ ಕೂಟಾಳಿಯಡ ಕೂಟದ ಅಧ್ಯಕ್ಷರಾಗಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಕಾರ್ಯದರ್ಶಿಯಾಗಿ ಮಾಚಿಮಾಡ ಡಿಂಪಲ್ ಆಯ್ಕೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸೃಜನಾತ್ಮಕವಾದ ಅನುವಾದದ ಹೊಸ ಪಥ ಸೃಷ್ಟಿಸಿದ ದೀಪಾ ಭಾಸ್ತಿ : ಜ.ನಾ.ತೇಜಶ್ರೀ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸೃಜನಾತ್ಮಕವಾದ ಅನುವಾದದ ಹೊಸ ಪಥ ಸೃಷ್ಟಿಸಿದ ದೀಪಾ ಭಾಸ್ತಿ : ಜ.ನಾ.ತೇಜಶ್ರೀ*

ಜೂನ್ 10, 20254 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜೂ.10 NEWS DESK : ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿ ಅವರು ತಮ್ಮ ‘ಹಾರ್ಟ್ ಲ್ಯಾಂಪ್’ ಅನುವಾದ ಕೃತಿಯ ಮೂಲಕ, ಸಾಂಪ್ರದಾಯಿಕವಾದ ಅನುವಾದದ ಚೌಕಟ್ಟುಗಳನ್ನು ಮೀರಿ, ಸೃಜನಾತ್ಮಕವಾದ ಅನುವಾದದ ಹೊಸ ಪಥವನ್ನು ಸೃಷ್ಟಿಸಿದ್ದಾರೆಂದು ಹಾಸನ ಜಿಲ್ಲೆಯವರಾದ ಕವಿ ಮತ್ತು ಅನುವಾದಕಿಯಾದ ಜ.ನಾ.ತೇಜಶ್ರೀ ಅಭಿಪ್ರಾಯಿಸಿದ್ದಾರೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಮತ್ತು ಮಡಿಕೇರಿ ತಾಲ್ಲೂಕು ಕಸಾಪ ಸಂಯುಕ್ತಾಶ್ರಯದಲ್ಲಿ ನಗರದ ರೆಡ್ ಬ್ರ್ರಿಕ್ಸ್‍ನ ಸತ್ಕಾರ ಸಭಾಂಗಣದಲ್ಲಿ ಆಯೋಜಿತ ಸಮಾರಂಭದಲ್ಲಿ ಬೂಕರ್ ಪ್ರಶಸ್ತಿಗೆ ಪಾತ್ರರಾದ ದೀಪಾ ಭಾಸ್ತಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ಕನ್ನಡದ ಖ್ಯಾತ ಸಾಹಿತಿ ನಾನು ಮುಷ್ತಾಕ್ ಮತ್ತು ಅವರ ಕೃತಿ ಎದೆಯ ಹಣತೆಯನ್ನು ಹಾರ್ಟ್ ಲ್ಯಾಂಪ್ ಆಗಿ ಅನುವಾದಿಸಿದ ದೀಪಾ ಭಾಸ್ತಿ ಅವರು, ಕನ್ನಡದಿಂದ ಇಂಗ್ಲೀಷ್‍ಗೆ ಮಾಡಿರುವ ಅನುವಾದದಲ್ಲಿ ‘ಕನ್ನಡದ ಭಾಷಾ ಸೌಂದರ್ಯವನ್ನು, ಚೆಲುವನ್ನು’ ಹಾಗೆಯೇ ಕಾಯ್ದುಕೊಂಡಿದ್ದಾರೆಂದು ತಿಳಿಸಿದರು. ಇಂಗ್ಲೀಷ್ ಭಾಷೆಗೆ ಅನುವಾದಿತ ಕೃತಿಗಳು ಲ್ಲಿಯವರೆಗೆ, ಆಯಾ ಭಾಷೆಗಳಲ್ಲಿನ ವಿಚಾರಗಳನ್ನು, ‘ಇಟಾಲಿಕ್ಸ್’ ಇಲ್ಲವೆ ಶಬ್ದದ ಅರ್ಥವನ್ನು ನೀಡುವ ಮೂಲಕ ಇಂಗ್ಲೀಷ್ ಓದುವ ಮಂದಿಗೆ ಅರ್ಥೈಸುವ ಪ್ರಯತ್ನವನ್ನು ಮಾಡುತ್ತಿರುವಂತೆ ಕಾಣುತಿತ್ತು. ದೀಪಾ ಭಾಸ್ತಿ ಅವರು ಇಂತಹ ಅನುವಾದದ ಕಟ್ಟು ಪಾಡುಗಳನ್ನು ಬೀಡಾ ಬೀಸಾಗಿ ಮುರಿದು ಮುನ್ನುಗಿದ್ದಾರೆ, ಇವರ ಅನುವಾದಿತ ಹಾರ್ಟ್ ಲ್ಯಾಂಪ್ ಕೃತಿ ‘ಕನ್ನಡ ಕಂಪ’ನ್ನು ಗಾಢವಾಗಿ ಆವರಿಸಿಕೊಂಡಿದೆ. ಇಂತಹ ಅನುವಾದ ಕೃತಿ, ಅನುವಾದದ ಹೊಸ ಹಾದಿಯನ್ನು ಸೃಷ್ಟಿಸಿದೆಯೆಂದು ಮನದುಂಬಿ ನುಡಿದರು. ಅನುವಾದ ಸಾಹಿತ್ಯದ ಮಿನುಗುತಾರೆ :: ಸಮಾರಂಭವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿದ ಕರ್ನಾಟಕ ಸಂಸ್ಕøತ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ಪದ್ಮಾಶೇಖರ್ ಮಾತನಾಡಿ, ಬಾನು ಮುಷ್ತಾಕ್ ಅವರ ಕೃತಿಯನ್ನು ಹಾರ್ಟ್ ಲ್ಯಾಂಪ್ ಆಗಿ ಇಂಗ್ಲೀಷ್‍ಗೆ ಅನುವಾದಿಸಿ ಬೂಕರ್ ಪ್ರಶಸ್ತಿಯನ್ನು ಪಡೆದ ದೀಪಾ ಬಾಸ್ತಿ ಅವರು ಅನುವಾದ ಸಾಹಿತ್ಯದ ಮಿನುಗುತಾರೆಯಾಗಿ, ನಾಳಿನ ಭರವಸೆಯ ಬೆಳಕಾಗಿ ಮೂಡಿಬಂದಿದ್ದಾರೆ. ಇಂತಹ ಭರವಸೆಯ ಬೆಳಕನ್ನು ಆರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದೆಂದು ತಿಳಿಸಿದರು. ಬಾನು ಮುಷ್ಲಾಕ್ ಮತ್ತು ದೀಪಾ ಭಾಸ್ತಿ ಅವರು ವಿವಿಧ ಪ್ರದೇಶಗಳ ಪ್ರತ್ಯೇಕ ಸಮುದಾಯಗಳಿಗೆ ಸೇರಿದವರು. ಬಾನು ಮುಷ್ಲಾಕ್ ಅವರ ಕೃತಿಗಳಲಿನ್ಲ ಮುಸ್ಲಿಂ ಸಮುದಾಯದ ಸಾಂಸ್ಕøತಿಕ, ಸಾಮಾಜಿಕ ಹಿನ್ನೆಲೆಯ ಸೂಕ್ಷ್ಮಗಳನ್ನು ಅರಿತು, ಅವರ ಮನಸ್ಥಿತಿಗಳ ಅಧ್ಯಯನದ ಮೂಲಕ ದೀಪಾ ಭಾಸ್ತಿ ಪರಕಾಯ ಪ್ರವೇಶ ಮಾಡುವ ಮೂಲಕ ಸಾಹಿತ್ಯದ ಪುನರ್ ಸೃಷ್ಟಿಯನ್ನೇ ಮಾಡಿರುವುದಾಗಿ ಮೆಚ್ಚುಗೆಯ ನುಡಿಗಳನ್ನಾಡಿದರು. ಅನುದಾದ ಸಾಹಿತ್ಯವೆನ್ನುವುದು ದೇಶ, ಭಾಷೆಯ ಮಿತಿಗಳನ್ನು ಮೀರಿ ಎರಡು ಭಾಷೆಗಳ ನಡುವೆ ಸಂವಹನವನ್ನು ಸೃಷ್ಟಿಸುವ ಕ್ರಿಯೆ. ಇಂತಹ ಸಾಧ್ಯತೆಯ ಹಣತೆಯನ್ನು ಕನ್ನಡ ಕೃತಿಯನ್ನು ಇಂಗ್ಲೀಷ್‍ಗೆ ಅನುವಾದ ಮಾಡಿ, ಬೂಕರ್ ಪ್ರಶಸ್ತಿಗೆ ಪಾತ್ರರಾಗುವ ಮೂಲಕ ದೀಪಾ ಭಾಸ್ತಿ ಅವರು ಮಾಡಿದ್ದಾರೆ. ಹಾರ್ಟ್ ಲ್ಯಾಂಪ್ ಇಂಗ್ಲೀಷ್ ಅನುವಾದ ಕೃತಿ ಯಾವುದೇ ಒಂದು ಕಥಾ ಸಂಕಲನಕ್ಕೆ ದೊರೆತ ಮೊಟ್ಟ ಮೊದಲ ಬೂಕರ್ ಪ್ರಶಸ್ತಿಯೇ ಆಗಿದೆ. ಕನ್ನಡ ಸಾಹಿತ್ಯದಲ್ಲಿ ಪಂಪನಿಂದ ಕುವೆಂಪು ವರೆಗೆ ಅಸಂಖ್ಯ ಸಾಹಿತ್ಯ ಕೃತಿಗಳು ರಚಿತವಾಗಿದ್ದು, ಇವುಗಳು ವಿಶ್ವ ಸಾಹಿತ್ಯವನ್ನೇ ಮೀರಿ ಗೆಲ್ಲುವ ಚೈತನ್ಯವನ್ನು ಹೊಂದಿರುಂತಹದ್ದು. ಹೀಗಿದ್ದೂ ಇಂತಹ ಕನ್ನಡ ಕೃತಿಗಳು ಇಂಗ್ಲೀಷ್‍ಗೆ ಅನುವಾದ ಆಗದಿರುವುದರತ್ತ ಬೊಟ್ಟು ಮಾಡಿದರು.
ಇವರು ಕನ್ನಡದ ರಾಯಭಾರಿಗಳು :: ಬೂಕರ್ ಪ್ರಶಸ್ತಿಗೆ ಪಾತ್ರರಾದ ಬಾನು ಮುಷ್ತಾಕ್ ಮತ್ತು ಅನುವಾದಕಿ ದೀಪಾ ಬಾಸ್ತಿ ಅವರು ವಿಶ್ವ ಸ್ತರದಲ್ಲಿ ಕನ್ನಡ ರಾಯಭಾರಿಗಳೇ ಆಗಿದ್ದಾರೆಂದು ಮೆಚ್ಚುಗೆಯ ನುಡಿಗಳನ್ನಾಡಿ, ಬಾನು ಮುಷ್ತಾಕ್ ಅವರ ಕೃತಿ ಇಲ್ಲಿ ಕೇವಲ ಅನುವಾದವಾಗಿಲ್ಲ. ಬದಲಾಗಿ ಮರು ಸೃಷ್ಟಿಯೇ ಆಗುವ ಮೂಲಕ ಬೂಕರ್ ಪ್ರಶಸ್ತಿ ಇವರ ಮುಡಿಗೇರಿದೆ. ದೀಪಾ ಬಾಸ್ತಿ ಅವರು ಅನುವಾದ ಮಾಡಿರುವುದರಿಂದ ಒಂದರ್ಥದಲ್ಲಿ ಬಾನು ಮುಷ್ತಾಕ್ ಅವರು ಅದೃಷ್ಟವಂತೆ ಎಂದು ಅಭಿಪ್ರಾಯಿಸಿ, ಈ ಒಂದು ಬೂಕರ್ ಪ್ರಶಸ್ತಿ ಕನ್ನಡದ ಅಸ್ಮಿತೆಯನ್ನು ಜಾಗತಿಕ ಮಟ್ಟದಲ್ಲಿ ದಾಖಲು ಮಾಡಿದೆಯೆಂದು ತಿಳಿಸಿದರು. ಸನ್ಮಾನ ಸ್ವೀಕರಿಸಿ ದೀಪಾ ಬಾಸ್ತಿ ಅವರು ಮಾತನಾಡಿ, ಕನ್ನಡ ಮತ್ತು ವಸಾಹತುಶಾಹಿ ಭಾಷೆಯಾದ ಇಂಗ್ಲೀಷ್ ನಡುವಿನ ಸಂಬಂಧಗಳನ್ನು ಬೆಳೆಸಿಕೊಳ್ಳುವ ಬಗೆ ಮತ್ತು ಕನ್ನಡದ ಮೂಲ ನೆಲೆಯನ್ನು ಇಂಗ್ಲೀಷ್ ಸಾಹಿತ್ಯದಲ್ಲಿ ಪ್ರತಿಬಿಂಬಿಸುವ ಮೂಲಕ, ಕನ್ನಡ ಭಾಷೆಯ ಬಗ್ಗೆಯೂ ಇಂಗ್ಲೀಷ್ ಭಾಷಾ ಓದುಗರಿಗೆ ತಿಳಿಸುವ ಪ್ರಯತ್ನವಾಗಿ, ಕನ್ನಡದ ಪದಗಳನ್ನು ಯಥಾವತ್ತಾಗಿ ಅನುವಾದದಲ್ಲಿ ಬಳಸಿಕೊಂಡಿದ್ದೇನೆ. ಅನುವಾದಗಳ ಸಂದರ್ಭ ಇಲ್ಲಿನ ಪದಗಳನ್ನು ಇಂಗ್ಲೀಷ್‍ನಲ್ಲಿ ಅರ್ಥೈಸುವ ಗೊಜಲುಗಳಿಗೆ ಬದಲಾಗಿ, ಇಲ್ಲಿರುವ ಪದಗಳನ್ನು ಬಳಸಿರುವುದಾಗಿ ತಿಳಸಿದರಲ್ಲದೆ, ಇಂಗ್ಲೀಷ್‍ನ ‘ಸುಪೀರಿಯರ್’ ಮನಸ್ಥಿತಿಯನ್ನು ಕಳೆಯಲು ಸಾಕಷ್ಟು ಅನುವಾದ ಕೃತಿಗಳ ಅಗತ್ಯತೆ ಇರುವುದಾಗಿ ನುಡಿದರು. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪಶಸ್ತ್ತಿಗಳು ದೊರಕಲಿ :: ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತರಾದ ಜಿ. ಚಿದ್ವಿಲಾಸ್ ಮಾತನಾಡಿ, ಬೂಕರ್ ಪ್ರಶಸ್ತಿಗೆ ಪಾತ್ರರಾದ ದೀಪಾ ಭಾಸ್ತಿ ಅವರಿಗೆ ಮುಂದಿನ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ದೊರಕಿಸಿಕೊಡುವ ಕಾರ್ಯವಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ, ಬೂಕರ್ ಪ್ರಶಸ್ತಿಯ ಮೂಲಕ ಕನ್ನಡ ಭಾಷೆ ವಿಶ್ವ ಮಟ್ಟದಲ್ಲಿ ತಲೆ ಎತ್ತಿ ನಿಲ್ಲುವಂತೆ ತಮ್ಮ ಅನುವಾದ ಕೃತಿಯ ಮೂಲಕ ದೀಪಾ ಭಾಸ್ತಿ ಅವರು ಮಾಡಿದ್ದಾರೆಂದು ಮೆಚ್ಚುಗೆಯ ನುಡಿಗಳನ್ನಾಡಿದರು. ಸಭಾಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಎರಡೂವರೆ ಸಾವಿರ ವರ್ಷದ ಶ್ರೀಮಂತ ಭಾಷಾ ಸಂಸ್ಕೃತಿಯನ್ನು ಕನ್ನಡ ಹೊಂದಿದ್ದು, 8 ಜ್ಞಾನ ಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿದೆಯಾದರು, ಕನ್ನಡದ ಮಹತ್ವದ ಕೃತಿಗಳು ಅನುವಾದವಾಗಿಲ್ಲವೆಂದು ನುಡಿದು, ಬಾನು ಮುಷ್ತಾಕ್ ಅವರ ಕನ್ನಡದ ಕೃತಿಯ ಅನುವಾದದ ಮೂಲಕ ಬೂಕರ್ ಪ್ರಶಸ್ತಿ ಬಂದಿರುವುದು ಇದೇ ಮೊದಲೆಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ :: ಜಿಲ್ಲಾ ಕಸಾಪ ಅಧ್ಯಕ್ಷ ಎಂಪಿ. ಕೇಶವ ಕಾಮತ್ ಅವರು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವವನ್ನು ಇದೇ ಸಂದರ್ಭ ದೀಪಾ ಭಾಸ್ತಿ ಅವರಿಗೆ ನೀಡಿದ್ದು ವಿಶೇಷ. ಸನ್ಮಾನ :: ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರೊ.ಪದ್ಮಾಶೇಖರ್ ಮತ್ತು ಜ.ನಾ. ತೇಜ ಶ್ರೀ ಅವರನ್ನು ಜಿಲ್ಲಾ ಕಸಾಪದಿಂದ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷರಾದ ಪುರಿಯನೆರವನ ರೇವತಿ ರಮೇಶ್, ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ಉಪಸ್ಥಿತರಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶೀ ಎಸ್.ಐ. ಮುನೀರ್ ಅಹಮ್ಮದ್ ಸ್ವಾಗತಿಸಿದರು. ಗೌರವ ಸಮರ್ಪಣೆಯ ಅಭಿನಂದನಾ ಪತ್ರವನ್ನು ಸಾಹಿತಿ ಸುಬ್ರಾಯ ಸಂಪಾಜೆ ವಾಚಿಸಿದರು. ಅತಿಥಿಗಳನ್ನು ಡಾ. ಕಾವೇರಿ ಪ್ರಕಾಶ್, ಶಿಕ್ಷಕಿ ಕೆ.ಜಿ.ರಮ್ಯ ಸಭೆಗೆ ಪರಿಚಯಿಸಿದರು. ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಗೌರಿ ಗಣೇಶ ಹಬ್ಬ : ಗಣೇಶೋತ್ಸವ ಸಮಿತಿಗಳ ಸಭೆ : ನಿಯಮ ಪಾಲನೆಗೆ ಕೊಡಗು ಪೊಲೀಸ್ ಕಟ್ಟುನಿಟ್ಟಿನ ಸೂಚನೆ*

ಸೆಪ್ಟೆಂಬರ್ 5, 2026

*ವಿರಾಜಪೇಟೆ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಕ್ಷಾಬಂಧನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ*

ಸೆಪ್ಟೆಂಬರ್ 5, 2026

*ವಿರಾಜಪೇಟೆ : ಸೆ.8 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಸೆಪ್ಟೆಂಬರ್ 5, 2026

*ವಿರಾಜಪೇಟೆ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಕ್ಷಾಬಂಧನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ*

ಸೆಪ್ಟೆಂಬರ್ 5, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಸೆ.5 NEWS DESK : ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವಿರಾಜಪೇಟೆ ಸೇವಾ ಕೇಂದ್ರದಲ್ಲಿ ಪಾವನ ಪರ್ವ ರಕ್ಷಾಬಂಧನ…

*ವಿರಾಜಪೇಟೆ : ಸೆ.8 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಸೆಪ್ಟೆಂಬರ್ 5, 2026

*ಮಡಿಕೇರಿಯಲ್ಲಿ ಮಧ್ಯವಾಷಿ೯ಕ ಕೀಲು ಮತ್ತು ಮೂಳೆ ವಿಭಾಗದ ರಾಜ್ಯ ಸಮ್ಮೇಳನ : ಜಿಲ್ಲಾ ಸಕಾ೯ರಿ ಆಸ್ಪತ್ರೆಯಲ್ಲಿ ಮಂಡಿನೋವಿಗೆ ರೋಬೋಟಿಕ್ ಸಜ೯ರಿ ಸೇವೆ : ಡಾ.ಎ.ಜಿ.ಲೋಕೇಶ್*

ಸೆಪ್ಟೆಂಬರ್ 5, 2026

*ಮಡಿಕೇರಿಗೆ ಬರುತ್ತಿದ್ದ ಬಸ್‌ಗೆ ಆಕಸ್ಮಿಕ ಬೆಂಕಿ; ಸಂಪೂರ್ಣ ಸುಟ್ಟು ಭಸ್ಮ – ಪ್ರಯಾಣಿಕರು, ಸಿಬ್ಬಂದಿ ಪಾರು*

ಸೆಪ್ಟೆಂಬರ್ 5, 2026

*ಮಡಿಕೇರಿಯಲ್ಲಿ ಶಿಕ್ಷಕರ ದಿನಾಚರಣೆ : ಕೊಡಗಿನ ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣಕ್ಕೆ ಯೋಜನೆ : ಸಚಿವ ಪಿ.ಎಂ.ನರೇಂದ್ರಸ್ವಾಮಿ*

ಸೆಪ್ಟೆಂಬರ್ 5, 2026

*ಕೊಡಗು : ಪ್ರಜಾಸೇವಾ ಆಂದೋಲನಕ್ಕೆ ಸಚಿವರಿಂದ ಚಾಲನೆ : ಜನರ ಮನೆ ಬಾಗಿಲಿಗೆ ಸರ್ಕಾರ : ಪಿ.ಎಂ.ನರೇಂದ್ರ ಸ್ವಾಮಿ*

ಸೆಪ್ಟೆಂಬರ್ 5, 2026

*ದಶ ದೇವಾಲಯಗಳ ಜೀರ್ಣೋದ್ಧಾರಕ್ಕೆ ತಲಾ ರೂ.5 ಲಕ್ಷ ಅನುದಾನ ನೀಡಿದ ಶಾಸಕ ಡಾ.ಮಂತರ್ ಗೌಡ : ಪೂಜೆಯ ಮೂಲಕ ಕಾಮಗಾರಿ ಆರಂಭ*

ಸೆಪ್ಟೆಂಬರ್ 5, 2026

*ಸೆಪ್ಟೆಂಬರ್ 7 ರಂದು ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಅವರ 61ನೇ ಪುಣ್ಯಸ್ಮರಣೆ; ಮಡಿಕೇರಿಯಲ್ಲಿ ಸಮರ ವೀರನಿಗೆ ಗೌರವ ಸಮರ್ಪಣೆ*

ಸೆಪ್ಟೆಂಬರ್ 5, 2026

*ಕೊಡವ ಕೂಟಾಳಿಯಡ ಕೂಟದ ಅಧ್ಯಕ್ಷರಾಗಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಕಾರ್ಯದರ್ಶಿಯಾಗಿ ಮಾಚಿಮಾಡ ಡಿಂಪಲ್ ಆಯ್ಕೆ*

ಸೆಪ್ಟೆಂಬರ್ 5, 2026

*ಮಡಿಕೇರಿ ನಗರಸಭೆ ನಿರ್ಧಾರಕ್ಕೆ ಚೇಂಬರ್ ಆಫ್ ಕಾಮರ್ಸ್ ತೀವ್ರ ವಿರೋಧ*

ಸೆಪ್ಟೆಂಬರ್ 5, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.