
ಮಡಿಕೇರಿ ಜೂ.10 NEWS DESK : ಮಡಿಕೇರಿ ನಗರ ಆಟೋ ಮಾಲೀಕ ಚಾಲಕರ ಸಂಘದ ಅಧ್ಯಕ್ಷರಾಗಿ ಎ.ಸಮದ್, ಉಪಾಧ್ಯಕ್ಷರಾಗಿ ದಿನೇಶ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರದ ಬಾಲಭವನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎ.ಅರುಣ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ವಾರ್ಷಿಕ ಮಹಾಸಭೆ 2025-26ನೇ ಸಾಲಿನ ನೂತನ ಆಡಳಿತ ಮಂಡಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಬಾರನ ದಿನೇಶ್, ಕಾರ್ಯದರ್ಶಿಯಾಗಿ ಸುನಿಲ್, ಖಜಾಂಚಿಯಾಗಿ ಹೆಚ್.ಎಸ್.ನಾಗರಾಜ್ ನೇಮಕಗೊಂಡಿದ್ದಾರೆ. ಸಂಘಟನಾ ಕಾರ್ಯದರ್ಶಿಗಳಾಗಿ ಮಂಜು, ರುಹೇಜ್, ಕೆ.ಕೆ.ಸುಕುಮಾರ್, ಆನಂದ ಅಪ್ಪು ಆಯ್ಕೆಯಾಗಿದ್ದು, ನಿರ್ದೇಶಕರಾಗಿ ಸುಲೈಮನ್, ಹರ್ಷಿತ್, ಪ್ರವೀಣ್ ಮುದ್ಯನ, ಜಸ್ಟಿನ್ ಅಪ್ಪು, ಶೇಖರ್ ಪೂಜಾರಿ, ಅನ್ಸರ್, ಗಣೇಶ, ಶ್ರೀಕಾಂತ್, ಜ್ಞಾನಕುಮಾರ್, ರೋನಿ, ಸುಗು ಪೂಜಾರಿರ ಸೇರಿದಂತೆ 20 ಪದಾಧಿಕಾರಿಗಳ ನೂತನ ಸಮಿತಿಯನ್ನು ರಚಿಸಲಾಗಿದೆ.









