
ಮಡಿಕೇರಿ ಜೂ.14 NEWS DESK : ಹುದಿಕೇರಿಯಲ್ಲಿ ನೂತನ ವಿದ್ಯುತ್ ಪ್ರಸರಣ ಉಪ-ಕೇಂದ್ರ ಸ್ಥಾಪನೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೂಮಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು, ಈ ಹಿಂದೆ ಕ್ಷೇತ್ರದ ಜನತೆಗೆ ಕೊಟ್ಟ ಭರವಸೆಯಂತೆ ಈ ಭಾಗದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಉತ್ತಮ ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ಒದಗಿಸುವ ಸಲುವಾಗಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಶೀಘ್ರದಲ್ಲೇ ಇದನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಚೀಫ್ ಎಲೆಕ್ಟ್ರಿಕ್ ಆಫೀಸರ್ ರೋಷನ್ ಅಪ್ಪಚ್ಚು ಮಾತನಾಡಿ, ಸುಮಾರು 19.34 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ ಒಂದು ವರ್ಷದ ಕಾಲಾವಧಿಯಲ್ಲಿ ಪೂರ್ಣಗೊಳ್ಳಲಿದ್ದು, ಉಪ ಕೇಂದ್ರದಿಂದ 11 ಕೆವಿಯ 12 ಮಾರ್ಗ ಪೊನ್ನಂಪೇಟೆಯಿಂದ ಹುದಿಕೇರಿವರೆಗೆ ಹೊರಹೋಗಲಿದೆ ಎಂದರು. ಶಾಸಕರ ಪ್ರಯತ್ನದಿಂದಾಗಿ ಕ್ಷೇತ್ರಾದ್ಯಂತ ಹಲವು ವಿದ್ಯುತ್ ಉಪ-ಕೇಂದ್ರಗಳು ಸ್ಥಾಪನೆಗೊಳ್ಳುತಿದೆ ಎಂದು ಹೇಳಿದರು. ಈ ಸಂದರ್ಭ ಚೆಸ್ಕಾಂ ಅಧಿಕಾರಿಗಳು, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಕಾಂಗ್ರೆಸ್ ಅಧ್ಯಕ್ಷ ಸೂರಜ್, ಪೊನ್ನಂಪೇಟೆ ತಾಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಅಣಲಮಾಡ ಲಾಲಾ ಅಪ್ಪಣ್ಣ, ಹುದಿಕೇರಿ ಪಂಚಾಯಿತಿ ಅಧ್ಯಕ್ಷ ಕುಪ್ಪಣಮಾಡ ನವ್ಯ ಕಾವೇರಮ್ಮ, ಹಿರಿಯ ಕಾಂಗ್ರೆಸ್ ಮುಖಂಡರಾದ ಚೇಕ್ಕೇರ ವಾಸು ಕುಟ್ಟಪ್ಪ, ಚೆಕ್ಕೇರ ಸುಧೀರ್, ಮೋಟಯ್ಯ, ಡಿಸಿಸಿ ಸದಸ್ಯರಾದ ಮುಕಟ್ಟೀರ ಸಂದೀಪ್, ಅಜ್ಜಿಕುಟ್ಟಿರ ಗಿರೀಶ್, ನೂರೇರ ಮನೋಹರ್, ಅಣಲಮಾಡ ಹರೀಶ್, ಅಲಿರಾ ರಶೀದ್, ಕುಪ್ಪಣ ಮಾಡ ಕಾವೇರಮ್ಮ,ಕೊಡoಗಡ ವಾಸು, ಕೊಡಂಗಡ ದಮಯಂತಿ ಹಾಗೂ ಪ್ರಮುಖರು ಉಪಸಿತರಿದ್ದರು.










