
ಸೋಮವಾರಪೇಟೆ ಜೂ.17 NEWS DESK : ಸೋಮವಾರಪೇಟೆ ತಾಲ್ಲೂಕು ಮೊಗೇರ ಸೇವಾ ಸಮಿತಿ ಸಭೆಯು ತಾಲ್ಲೂಕು ಅಧ್ಯಕ್ಷ ವಸಂತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸೋಮವಾರಪೇಟೆ ಪತ್ರಿಕಾಭವನದಲ್ಲಿ ನಡೆದ ಸಭೆಯಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಉಚಿತ ನೋಟ್‍ಬುಕ್ ಗಳನ್ನು ವಿತರಿಸಲು ತೀರ್ಮಾನಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ಅನಾರೋಗ್ಯಕ್ಕೆ ತುತ್ತಾಗಿದ್ದು, ಅವರ ಚಿಕಿತ್ಸೆಗೆ 10 ಸಾವಿರ ರೂ.ಗಳನ್ನು ಸಂಘದ ವತಿಯಿಂದ ಕುಟುಂಬಕ್ಕೆ ನೀಡಲಾಯಿತು. ಅಸ್ಸಾಂ ಮೂಲದ ವ್ಯಕ್ತಿಯೋರ್ವ ಕಾರೇಕೊಪ್ಪ ಜಂಕ್ಷನ್‍ನಲ್ಲಿ ಕಾರ್ಮಿಕ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಪೊಲೀಸರು ಎಚ್ಚೆತ್ತುಕೊಳ್ಳಬೇಕು. ಇಲ್ಲಿನ ಕಾರ್ಮಿಕರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸಭೆಯಲ್ಲಿ ಅಧ್ಯಕ್ಷರು ಒತ್ತಾಯಿಸಿದರು. ಕಡಿಮೆ ಸಂಬಳಕ್ಕೆ ಹೊರರಾಜ್ಯದ ಕೂಲಿ ಕಾರ್ಮಿಕರ ಕರೆತಂದು ಲೈನ್‍ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಅವರ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡುತ್ತಿಲ್ಲ. ಹಲ್ಲೆ, ಕೊಲೆ, ಮಾನಭಂಗದಂತಹ ಕೃತ್ಯಗಳು ನಡೆದಾಗ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡಿ, ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಕೆ.ಕೆ.ಗಣೇಶ್, ಸಲಹೆಗಾರ ಕೆ.ವಿ.ನಂದ ಇದ್ದರು.










