
ಸುಂಟಿಕೊಪ್ಪ ಜೂ.20 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಲಾ ಕಾವೇರಿ ಜ್ಞಾನ ವಿಕಾಸ ಕೇಂದ್ರ ಹಾಗೂ ಭೂಮಿಕ ಸ್ವಸಹಾಯ ಸಂಘ ಸಂಯುಕ್ತಾಶ್ರಯದಲ್ಲಿ ಪುಟ್ಟ ಮಕ್ಕಳಿಗೆ ಅಜ್ಜಿಯ ಕೈ ತುತ್ತು ಸ್ವ ಉದ್ಯೋಗದ ಕುರಿತು ಕಾನ್‍ಬೈಲ್ ವಿಭಾಗದ ಶ್ರೀ ಕ್ಷೇ.ಧ.ಗ್ರಾ.ಯೋ. ಸ್ವ ಸಹಾಯ ಸಂಘದ ಪದಾಧಿಕಾರಿಗಳಿಗೆ ಮಾಹಿತಿ ಕಾರ್ಯಗಾರವನ್ನು ನೀಡಲಾಯಿತು. ಮಂಜಿಕೇರೆ ಸಮುದಾಯ ಭವನದಲ್ಲಿ ಕಾನ್‍ಬೈಲ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ಕಾನ್‍ಬೈಲ್ ಕಾರ್ಯಕ್ಷೇತ್ರದ ವತಿಯಿಂದ ಆಯೋಜಿಸಲಾಗಿದ್ದ ಸ್ವ ಸಹಾಯ ಸಂಘದ ಪದಾಧಿಕಾರಿಗಳ ಮಕ್ಕಳಿಗೆ ಮಕ್ಕಳಿಗೆ ಅಜ್ಜಿಯಂದಿರ ಕೈ ತುತ್ತು ಎಂಬ ವಿನೂತನ ಕಾರ್ಯಕ್ರಮವನ್ನು ಅಯೋಜಿಸುವ ಮೂಲಕ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಹಿಂದಿನ ಕಾಲದ ಆಚಾರ, ವಿಚಾರ, ವೈಚಾರಿಕತೆಯು ಮರೆಯಾಗುತ್ತಿದ್ದು, ಮಕ್ಕಳಿಗೆ ಹಿರಿಯರೊಂದಿಗೆ ಇರಬೇಕಾದ ಗೌರವ, ಪ್ರೀತಿ, ಅನ್ಯೂನತೆ, ವಾತ್ಸಲ್ಯತೆಯು ಕುಂಠಿತಗೊಳ್ಳುತ್ತಿರುವುದು ಸೊಜಿಗದ ವಿಚಾರವಾಗಿದೆ. ಇದನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಇಂತಹ ಅಜ್ಜಿಯ ಕೈ ತುತ್ತು ಎಂಬ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ಹಿರಿಯರ ಸಂಬಂಧಗಳನ್ನು ಗಟ್ಟಿಗೊಳಿಸುವ ಇರಾದೆಯನ್ನು ಹೊಂದಲಾಗಿದೆ ಎಂದು ತಲಾಕಾವೇರಿ ಜ್ಞಾನ ವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಮಾಲಿನಿ ಅಭಿಪ್ರಾಯ ವ್ಯಕ್ತಪಡಿಸಿದರು. ಇಂದಿನ ದಿನಗಳಲ್ಲಿ ನಾವುಗಳು ಸ್ವ ಉದ್ಯೋಗವನ್ನು ಕಲಿತುಕೊಳ್ಳುವುದರಿಂದ ನಮ್ಮ ವೈಯಕ್ತಿಕ ಜೀವನವು ಸುಭದ್ರ ಜೀವನವಾಗಿ ನಿರ್ವಹಿಸಬಹುದು ತಮ್ಮ ಕುಟುಂಬಗಳ ನಿರ್ವಹಣೆಗೂ ಸ್ವ ಉದ್ಯೋಗ ಸಹಕಾರಿಯಾಗಲಿದೆ ಎಂದು ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಮಾಲಿನಿ ಹೇಳಿದರು. ಭೂಮಿಕ ತಂಡದ ಸದಸ್ಯೆ ಪೂವಮ್ಮ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾನ್‍ಬೈಲ್ ವ್ಯಾಪ್ತಿಯ ಸೇವಾ ಪ್ರತಿನಿಧಿ ಯಶೋಧ ಬಸವರಾಜ್, ಇದ್ದರು. ಕಾನ್‍ಬೈಲ್ ವ್ಯಾಪ್ತಿಯ ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳಾದ ಜನನಿ, ಭೂಮಿಕ, ಕನ್ನಿಕ, ಭಗವತಿ ಹಾಗೂ ದೃತಿ ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು. ಮೊದಲಿಗೆ ಅಜಿರ ಸ್ವಾಗತಿಸಿ, ಶೋಭಾ ವಂದಿಸಿದರು. ಗ್ರಾಮದ ಹಿರಿಯರಿಂದ ಮಕ್ಕಳಿಗೆ ಕೈ ತುತ್ತು ನೀಡಲಾಯಿತು.









