



ಮಡಿಕೇರಿ ಜೂ.21 NEWS DESK : ಯೋಗವು ಜೀವನ ಪಾಠ ಹೇಳಿಕೊಡುವುದರೊಂದಿಗೆ ವ್ಯಕ್ತಿಯ ಸದೃಢ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯೋಗದಿಂದ ಏಕಾಗ್ರತೆ ವೃದ್ಧಿಯಾಗುವುದರೊಂದಿಗೆ ಮಕ್ಕಳ ಜ್ಞಾನ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ. ಭಾರತದ ಪುರಾತನ ಪದ್ಧತಿಗಳಲ್ಲಿ ಯೋಗಾಸನ ಅಭ್ಯಾಸವು ಒಂದಾಗಿದೆ. ಯೋಗ ಕಾರ್ಯಕ್ರಮವು ಕೇವಲ ಯೋಗ ದಿನಾಚರಣೆಗೆ ಮಾತ್ರ ಸೀಮಿತವಾಗದೆ, ದಿನನಿತ್ಯದ ಬದುಕಿನಲ್ಲಿ ಎಲ್ಲರೂ ಅಳವಡಿಸಿಕೊಳ್ಳುವಂತೆ ಆಗಬೇಕು ಎಂದು ಕರೆ ನೀಡಿದರು. ಈ ಸಂದರ್ಭ ಶ್ರೀ ರಾಮಕೃಷ್ಣ ಶಾರದ ಆಶ್ರಮದ ಅಧ್ಯಕ್ಷರಾದ ಪರಹಿತನಂದಾ ಸ್ವಾಮಿ, ಕಾರ್ಯಕ್ರಮ ಆಯೋಜಕರು ಹಾಗೂ ಪ್ರಮುಕರು ಹಾಜರಿದ್ದರು.









