Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮೂರ್ನಾಡಿನಲ್ಲಿ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಿಗೆ ಅರಿವು*
  • *ಆ.28 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ*
  • *ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಪೊನ್ನಣ್ಣ ಭೇಟಿ*
  • *ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಸಿಎಂ, ಶಾಸಕ ಪೊನ್ನಣ್ಣ ಭೇಟಿ*
  • *ದೊಡ್ಡಸ್ಥಿಕೆಯಿಂದ ಪದ್ಧತಿ–ಸಂಸ್ಕೃತಿಯ ಕಡೆಗಣನೆ ಸಲ್ಲದು : ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ*
  • *ಟೆಂಪೋ ಟ್ರಾವೆಲರ್ ಮೇಲೆ ಮಗುಚಿದ ಲಾರಿ : ನಾಲ್ವರಿಗೆ ಗಾಯ*
  • *ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡಲ್ಲ*
  • *ಘಮ ಘಮಿಸಿದ ಆಟಿ ಹಬ್ಬದೂಟದ ಘಮಲು..! ಮಕ್ಕಂದೂರಿನಲ್ಲಿ ಗೌಡ ಮಹಿಳಾ ಒಕ್ಕೂಟದ ಆಟಿ ಜಂಬರ*
  • *ಸುಂಟಿಕೊಪ್ಪದಲ್ಲಿ ಸಂಭ್ರಮದ ಓಣಂ ಆಚರಣೆ*
  • *ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.46.86 ಲಕ್ಷ ನಿವ್ವಳ ಲಾಭ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗಿನಲ್ಲಿ ಭಾರೀ ಮಳೆ : ಪೊಲೀಸ್ ಅಧಿಕಾರಿಗಳು ಹಾಗೂ ಸ್ವಯಂ ಸೇವಕರ ಸಭೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

*ಕೊಡಗಿನಲ್ಲಿ ಭಾರೀ ಮಳೆ : ಪೊಲೀಸ್ ಅಧಿಕಾರಿಗಳು ಹಾಗೂ ಸ್ವಯಂ ಸೇವಕರ ಸಭೆ*

ಜುಲೈ 3, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜು.3 NEWS DESK : ಜಿಲ್ಲೆಯಲ್ಲಿ ಮುಂಗಾರು ಮಳೆಯ ಸಂದರ್ಭ ಸಂಭವನೀಯ ಪ್ರಾಕೃತಿಕ ವಿಕೋಪವನ್ನು ಎದುರಿಸುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸ್ವಯಂ ಸೇವಕರ ಸಭೆ ನಡೆಯಿತು. ನಗರದ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಪ್ರಕೃತಿ ವಿಕೋಪ ನಿರ್ವಹಣೆ, ಸಂಪನ್ಮೂಲಗಳ ಬಳಕೆ, ಸ್ಥಳೀಯರ ನೆರವು, ಮಾಹಿತಿ ಹಂಚಿಕೆ, ಸಂಪರ್ಕ ಮುಂತಾದ ವಿಚಾರಗಳ ಬಗ್ಗೆ ಪರಸ್ಪರ ಚರ್ಚಿಸಲಾಯಿತು. ಈ ಸಂದರ್ಭ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು, ಜಿಲ್ಲೆಯಲ್ಲಿ ಹಲವು ವರ್ಷಗಳ ನಂತರ ಜೂನ್ ತಿಂಗಳ ಅಂತ್ಯದವರೆಗೆ ಅತೀ ಹೆಚ್ಚು ಮಳೆಯಾಗಿದ್ದು, ನದಿ, ಜಲಾಶಯ, ಕೆರೆ, ತೋಡು, ಹಳ್ಳ ಇತರೆ ನೀರಿನ ಮೂಲಗಳು ಈಗಾಗಲೇ ತುಂಬಿ ಹರಿಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಯಾವುದೇ ರೀತಿಯ ಪ್ರಕೃತಿ ವಿಕೋಪ ಉಂಟಾದಲ್ಲಿ ಮುನ್ನೆಚ್ಚಾರಿಕಾ ಕ್ರಮ ಕೈಗೊಳ್ಳುವ ಸಲುವಾಗಿ ಸಭೆ ನಡೆಸಿ ಪ್ರಕೃತಿ ವಿಕೋಪ ಸಂದರ್ಭ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ ಎಲ್ಲಾ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಗಿದೆ ಎಂದರು. ಠಾಣೆ ಹಾಗೂ ಗ್ರಾಮ ಬೀಟ್ ವ್ಯಾಪ್ತಿಯಲ್ಲಿ ಸ್ವಯಂಸೇವಕರನ್ನು ಗುರುತಿಸಿ ವಿವರಗಳನ್ನು ಸಂಗ್ರಹಿಸುವುದು, ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ರಕ್ಷಣೆಗೆ ಸನ್ನದ್ದರಾಗಿರುವ ನಿಟ್ಟಿನಲ್ಲಿ ಮತ್ತು ಕೈಗೊಳ್ಳಬೇಕಾಗ ಕ್ರಮಗಳ ಕುರಿತು ಸ್ವಯಂಸೇವಕರೊಂದಿಗೆ ಠಾಣಾ ಮಟ್ಟದಲ್ಲಿ ಸಭೆಯನ್ನು ನಡೆಸಿ ಸೂಕ್ತ ಸಲಹೆಯನ್ನು ನೀಡುವುದು, ಠಾಣಾ ವ್ಯಾಪ್ತಿಯಲ್ಲಿ ಲಭ್ಯವಿರುವ ಜೆಸಿಬಿ, ಕ್ರೇನ್, ಟೋಯಿಂಗ್ ವಾಹನ, ವುಡ್ ಕಟ್ಟರ್, 4*4 ಜೀಪ್ ವಿವರ ಹಾಗೂ ವಾಹನದ ಮಾಲೀಕರ ವಿವರಗಳನ್ನು (ಹೆಸರು, ವಿಳಾಸ, ಠಾಣೆ ಹೆಸರು, ಮೊಬೈಲ್ ಸಂಖ್ಯೆ) ಸಂಗ್ರಹಿಸುವಂತೆ ಸೂಚಿಸಲಾಗಿದ್ದು, ತುರ್ತು ಸಂದರ್ಭಗಳಲ್ಲಿ ವಿವಿಧ ಸಂಘನೆಯ ಸ್ವಯಂಸೇವಕರು ಮತ್ತು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು. ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ರಕ್ಷಣೆಯಲ್ಲಿ ಪಾಲ್ಗೊಳ್ಳಲು ಇಚ್ಚೆಯುಳ್ಳವರು ತಮ್ಮ ವಿವರಗಳನ್ನು (ಹೆಸರು, ವಿಳಾಸ, ಠಾಣೆ ಹೆಸರು, ಮೊಬೈಲ್ ಸಂಖ್ಯೆ) ಕೊಡಗು ಜಿಲ್ಲಾ ಪೊಲೀಸ್ ಕಛೇರಿಯ ಮೊಬೈಲ್ ಸಂಖ್ಯೆ: 8277958444 ಗೆ ನೇರವಾಗಿ ನೀಡುವಂತೆ ಹಾಗೂ ತಮ್ಮ ವಿವರಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಿ ಸ್ವಯಂಸೇವಕರ ಪಟ್ಟಿಯಲ್ಲಿ ಸೇರಿಸಿಕೊಂಡು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವಂತೆ ಮನವಿ ಮಾಡಿದರು. ಸಾರ್ವಜನಿಕರು ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ಪ್ರಕೃತಿ ವಿಕೋಪ ಉಂಟಾದ ಸ್ಥಳ ಹಾಗೂ ನೆರವಿನ ಅವಶ್ಯಕತೆ ಕುರಿತು ಕೊಡಗು ಜಿಲ್ಲಾ ಪೊಲೀಸ್ ಕಛೇರಿಯ ಮೊಬೈಲ್ ಸಂಖ್ಯೆ: 8277958444 ಗೆ ಮಾಹಿತಿಯನ್ನು ನೀಡಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮೂರ್ನಾಡಿನಲ್ಲಿ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಿಗೆ ಅರಿವು*

ಆಗಷ್ಟ್ 26, 2026

*ಆ.28 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ*

ಆಗಷ್ಟ್ 26, 2026

*ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಪೊನ್ನಣ್ಣ ಭೇಟಿ*

ಆಗಷ್ಟ್ 26, 2026

*ಆ.28 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ*

ಆಗಷ್ಟ್ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಆ.26 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದೊಂದಿಗೆ ಬ್ರಹ್ಮಶ್ರೀ…

*ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಪೊನ್ನಣ್ಣ ಭೇಟಿ*

ಆಗಷ್ಟ್ 26, 2026

*ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಸಿಎಂ, ಶಾಸಕ ಪೊನ್ನಣ್ಣ ಭೇಟಿ*

ಆಗಷ್ಟ್ 26, 2026

*ದೊಡ್ಡಸ್ಥಿಕೆಯಿಂದ ಪದ್ಧತಿ–ಸಂಸ್ಕೃತಿಯ ಕಡೆಗಣನೆ ಸಲ್ಲದು : ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ*

ಆಗಷ್ಟ್ 26, 2026

*ಟೆಂಪೋ ಟ್ರಾವೆಲರ್ ಮೇಲೆ ಮಗುಚಿದ ಲಾರಿ : ನಾಲ್ವರಿಗೆ ಗಾಯ*

ಆಗಷ್ಟ್ 26, 2026

*ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡಲ್ಲ*

ಆಗಷ್ಟ್ 26, 2026

*ಘಮ ಘಮಿಸಿದ ಆಟಿ ಹಬ್ಬದೂಟದ ಘಮಲು..! ಮಕ್ಕಂದೂರಿನಲ್ಲಿ ಗೌಡ ಮಹಿಳಾ ಒಕ್ಕೂಟದ ಆಟಿ ಜಂಬರ*

ಆಗಷ್ಟ್ 26, 2026

*ಸುಂಟಿಕೊಪ್ಪದಲ್ಲಿ ಸಂಭ್ರಮದ ಓಣಂ ಆಚರಣೆ*

ಆಗಷ್ಟ್ 26, 2026

*ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.46.86 ಲಕ್ಷ ನಿವ್ವಳ ಲಾಭ*

ಆಗಷ್ಟ್ 26, 2026

*ಕಸ್ತೂರಿ ರಂಗನ್ ವರದಿಯಿಂದ 53 ಗ್ರಾಮಗಳನ್ನು ಕೈಬಿಡಲು ಆಗ್ರಹ : ಸೆ.11ರಂದು ಬೃಹತ್ ಪ್ರತಿಭಟನೆ*

ಆಗಷ್ಟ್ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.