
ಮಡಿಕೇರಿ ಜು.25 NEWS DESK : 2025-26 ನೇ ಸಾಲಿನ ಕಾರ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾರ್ಯಾಧ್ಯಕ್ಷರಾಗಿ ಕೋಟೆಮಾರಿಯಮ್ಮ ದೇವಾಲಯದ ಅರುಣ್ ಕುಮಾರ್ ಆಯ್ಕೆಯಾಗಿದ್ದಾರೆ. ಮಡಿಕೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆಯು ಮಡಿಕೇರಿಯ ರಾಜ್ ದರ್ಶನ್ ಸಭಾಂಗಣದಲ್ಲಿ ನಡೆಯಿತು. ಬಹಳ ಕುತುಹಲ ಕೆರಳಿಸಿದ್ದ ಕಾರ್ಯಧ್ಯಕ್ಷ ಸ್ಥಾನಕ್ಕೆ ತೆರೆಬಿದ್ದಿದ್ದು, ಮುಂದಿನ ಎರಡು ವರ್ಷ ಬಿ.ಕೆ.ಅರುಣ್ ಕುಮಾರ್ ಅಧಿಕಾರ ವಹಿಸಲಿದ್ದಾರೆ. ಈ ಒಂದು ಸ್ಥಾನಕ್ಕೆ ನಾಲ್ಕು ಜನರ ನಡುವೆ ಬಹಳ ಪೈಪೋಟಿ ನಡೆದಿದ್ದು, ಚುನಾವಣೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಿತು. ಇದರಲ್ಲಿ ಕೋಟೆಮಾರಿಯಮ್ಮ ದೇವಾಲಯದ ಜಿ.ಸಿ.ಜಗದೀಶ್, ಕೋದಂಡ ರಾಮ ದೇವಾಲಯದ ಜಯಂತಿ ಶೆಟ್ಟಿ ರೈ, ಕೋಟೆ ಮಾರಿಯಮ್ಮ ದೇವಾಲಯದ ಅರುಣ್ ಕುಮಾರ್ ಹಾಗೂ ದೇಚೂರು ಶ್ರೀ ರಾಮಮಂದಿರ ದೇವಾಲಯದ ಟಿ.ಎಂ.ಅಯ್ಯಪ್ಪ ಅವರುಗಳ ನಡುವೆ ಪೈಪೋಟಿ ನಡೆಯಿತು. ಚುನಾವಣೆಯಲ್ಲಿ ಕೋಟೆ ಮಾರಿಯಮ್ಮ ದೇವಾಲಯದ ಅರುಣ್ ಕುಮಾರ್ 6 ಮತಗಳನ್ನ ಪಡೆಯುವ ಮೂಲಕ ಮುಂದಿನ ಎರಡು ವರ್ಷ ಅಧಿಕಾರ ಹಿಡಿದಿದ್ದಾರೆ. ಇದರ ಜೊತೆಗೆ ಉಪಾಧ್ಯಕ್ಷರಾಗಿ ಪೇಟೆ ಶ್ರೀ ರಾಮದ ಓ.ಎನ್.ಬಾಬು, ಸಹ ಕಾರ್ಯದರ್ಶಿಯಾಗಿ ಮುದ್ದುರಾಜ್ ಆಯ್ಕೆಯಾಗಿದ್ದಾರೆ.









