
ಸುಂಟಿಕೊಪ್ಪ ಆ.13 NEWS DESK : ಸುಂಟಿಕೊಪ್ಪ ಎಸ್‍ವೈಎಸ್ ವತಿಯಿಂದ ‘ಪ್ರೇಶ್ ಇಂಡಿಯಾ’ ಎಂಬ ಧ್ಯೇಯವಾಕ್ಯದೊಂದಿಗೆ ನಾಮಫಲಕಗಳನ್ನು ಸ್ವಚ್ಛಗೊಳಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸುಂಟಿಕೊಪ್ಪ ಎಸ್‍ವೈಎಸ್ ಟೀಂ ಇಸಾಬಾ ತಂಡದ ಯುವಕರು ಗದ್ದೆಹಳ್ಳದಿಂದ ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿರುವ ಸರಕಾರಿ ಮತ್ತು ವಿವಿಧ ಸಂಘ ಸಂಸ್ಥೆಗಳಿಗೆ ಸೇರಿದ ನಾಮಫಲಕಗಳನ್ನು ಸ್ವಚ್ಛಗೊಳಿದರು. ಸ್ವಚ್ಛತಾ ಕಾರ್ಯದಲ್ಲಿ ಟೀಂ ಇಸಾಬಾ ತಂಡದ ನಾಸೀರ್ ಮತ್ತು ಸಾಹಿಲ್ ಸೇರಿದಂತೆ ಪದಾಧಿಕಾರಿಗಳು ಇದ್ದರು.





































