
ಮಡಿಕೇರಿ ಸೆ.10 NEWS DESK : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ವೈದ್ಯಶಾಸ್ತ್ರ ವಿಭಾಗವು “ಕ್ವಾಲಿಟೇಟಿವ್ ಮೆಥೇಡ್ಸ್ ಇನ್ ಹೆಲ್ತ್ ರಿರ‍್ಚ್” ಎಂಬ ವಿಷಯದ ಮೇಲೆ ಎರಡು ದಿನಗಳ ಕಾರ್ಯಾಗಾರ ನಡೆಸಿತು. ಮಂಗಲಗಿರಿ ಆಲ್ ಇಂಡಿಯಾ ಇನ್ಸಟಿಟ್ಯುಟ್ ಆಫ್ ಮೆಡಿಕಲ್ ಸೈನ್ಸ್ ನ ಡಾ. ಜಿ.ಕಲೈಸೇಲ್ವನ್ ಹಾಗೂ ಪಾಂಡಿಚೇರಿ ಮನಕುಲ ವಿನಯಗರ್ ವೈದ್ಯಕೀಯ ಕಾಲೇಜಿನ ಡಾ. ರೀನಾಮೋಹನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿ ಪ್ರಾಯೋಗಿಕ ಅಧಿವೇಶನಗಳನ್ನು ನಡೆಸಿ, ಕಾರ್ಯಾಗಾರದಿಂದ ಆರೋಗ್ಯ ಕ್ಷೇತ್ರದಲ್ಲಿ ಸಮಸ್ಯೆಗಳನ್ನು ಅನ್ವೇಷಣೆ ಮಾಡಿ ರೋಗಿಗಳ ಕೇಂದ್ರಿತ ಆರೈಕೆ ಅಭಿವೃದ್ಧಿ ಪಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ. ಎ.ಜೆ.ಲೋಕೇಶ್, ಸಮುದಾಯ ವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ರಾಮಚಂದ್ರ ಕಾಮತ್ ಮತ್ತು ಕಾರ್ಯಕ್ರಮದ ಕಾರ್ಯದರ್ಶಿ ಡಾ.ಎಸ್.ಹೆಚ್.ಮಹೇಶ್ ಹಾಜರಿದ್ದರು. ವಿವಿಧ ವೈದ್ಯಕೀಯ ಕಾಲೇಜುಗಳ ಬೋಧಕ ಸಿಬ್ಬಂದಿಗಳು ಹಾಗೂ ಸ್ನಾತ್ತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡು ಚಟುವಟಿಕೆಯುತ ಹಾಗೂ ಅನುಭವಾತ್ಮಕ ಅಧಿವೇಶನಗಳನ್ನು ಮೆಚ್ಚಿದರು.









