
ಮಡಿಕೇರಿ NEWS DESK ಸೆ.21 : ಅಹ್ಮದಿಯಾ ಮುಸ್ಲಿಂ ಜಮಾಅತಿನ ಮಡಿಕೇರಿ ಘಟಕದ ವತಿಯಿಂದ ‘ಹ್ಯುಮಾನಿಟಿ ಫಸ್ಟ್’ನ 30ನೇ ವರ್ಷ ಮತ್ತು ಅಂತಾರಾಷ್ಟ್ರೀಯ ಶಾಂತಿ ದಿನವನ್ನು ನಡಿಗೆ, ಓಟ ಮತ್ತು ಸೈಕಲಿಂಗ್ ಕಾರ್ಯಕ್ರಮದೊಂದಿಗೆ ಆಚರಿಸಲಾಯಿತು. “ಎಲ್ಲರಲ್ಲೂ ಪ್ರೀತಿ,ಯಾರೊಂದಿಗೂ ದ್ವೇಷವಿಲ್ಲ” ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮಕ್ಕೆ ನಗರದ ‘ಬೈತುಲ್ ಹುದಾ’ ಮಸೀದಿಯಲ್ಲಿ ಧರ್ಮಗುರುಗಳಾದ ಕಲೀಂ ಖಾನ್ ಸಾಹೇಬ್ ಅವರು ಚಾಲನೆ ನೀಡಿದರು.ನಂತರ ಶಾಂತಿ ಸಂದೇಶಗಳ ಫಲಕಗಳೊಂದಿಗೆ ನಡಿಗೆಯ ಮೂಲಕ ಮಾರುಕಟ್ಟೆ, ಇಂದಿರಾ ಗಾಂಧಿ ವೃತ್ತ, ಕಾಲೇಜು ರಸ್ತೆ, ರೇಸ್ ಕೋರ್ಸ್ ರಸ್ತೆ ಮಾರ್ಗವಾಗಿ ರಾಜಾಸೀಟ್ ವರೆಗೆ ಜಾಥಾ ನಡೆಸಲಾಯಿತು. “ವಿಶ್ವಯುದ್ಧ 3 ನಿಲ್ಲಿಸಿ” ಎಂಬ ವಿಶೇಷ ಅಭಿಯಾನದೊಂದಿಗೆ ಶಾಂತಿ, ಸಾಮರಸ್ಯ ಮತ್ತು ಸೌಹಾರ್ದದ ಸಂದೇಶಗಳನ್ನು ಸಾರುವ ಮೂಲಕ ಜಾಗತಿಕ ಸಂಘರ್ಷವನ್ನು ತಡೆಗಟ್ಟಲು ಪರಸ್ಪರ ಸಹಕಾರದ ತುರ್ತು ಅವಶ್ಯಕತೆ,ಶಾಂತಿ ಹಾಗೂ ಏಕತೆಯ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.’ಹ್ಯುಮಾನಿಟಿ ಫಸ್ಟ್’ ಸಂಸ್ಥೆಯ ಜಿಲ್ಲಾ ಸಂಚಾಲಕರಾದ ಮೊಹಮ್ಮದ್ ಶರೀಫ್ ಅವರು ಮಾತನಾಡಿ “ಹ್ಯುಮಾನಿಟಿ ಫಸ್ಟ್” ಸಂಸ್ಥೆಯು ಸ್ಥಾಪನೆಗೊಂಡು ಇದೀಗ 30ನೇ ವರ್ಷಾಚರಣೆ ಪ್ರಯುಕ್ತ ಸೆ.6 ರಿಂದ 21ರವರೆಗೆ ವಿಶ್ವದ 65 ದೇಶಗಳಲ್ಲಿ ಏಕಕಾಲದಲ್ಲಿ ಶಾಂತಿ ಸಂದೇಶದ ಅಭಿಮಾನ ಆಯೋಜಿಸಲಾಗಿದ್ದು ಓಟ, ಸೈಕಲ್ ಚಲನೆಯಂತಹ ಆರೋಗ್ಯಕರ ಮತ್ತು ಸಕಾರಾತ್ಮಕ ಚಟುವಟಿಕೆಗಳಿಗೆ ಜನರನ್ನು ಪ್ರೋತ್ಸಾಹಿಸುವ ಮೂಲಕ, ಕಲ್ಯಾಣ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.1995ರಲ್ಲಿ ಸ್ಥಾಪಿತವಾದ ಹ್ಯುಮಾನಿಟಿ ಫಸ್ಟ್, ಕಳೆದ ಮೂರು ದಶಕಗಳಲ್ಲಿ ಶಿಕ್ಷಣ, ಆರೋಗ್ಯ ರಕ್ಷಣೆ, ನೀರು ಪೂರೈಕೆ, ದುರಂತ ಪರಿಹಾರ, ಅನಾಥರು ಮತ್ತು ವಿಧವೆಯರ ಪಾಲನೆ ಸೇರಿದಂತೆ ಅಸಂಖ್ಯಾತ ಯೋಜನೆಗಳನ್ನು ವಿಶ್ವದಾದ್ಯಂತ ಯಶಸ್ವಿಯಾಗಿ ಆಯೋಜಿಸಿದೆ. ಜನಾಂಗ, ಬಣ್ಣ ಅಥವಾ ಮತದ ತಾರತಮ್ಯವಿಲ್ಲದೆ ಮಾನವಕುಲಕ್ಕೆ ಸೇವೆ ಸಲ್ಲಿಸುವ ಉದ್ದೇಶದಿಂದ ಈ ಸಂಸ್ಥೆಯು ಇಂದು 65ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಸೇವೆಗಳನ್ನು ಸಲ್ಲಿಸುತ್ತಿದೆ. ಅಹ್ಮದಿಯಾ ಮುಸ್ಲಿಂ ಜಮಾಅತಿನ ಜಾಗತಿಕ ನೇತಾರರಾದ ಹಜ್ರತ್ ಮಿರ್ಜಾ ಮಸ್ರೂರ್ ಅಹ್ಮದ್ ಅವರ ಆಧ್ಯಾತ್ಮಿಕ ನೇತೃತ್ವದಲ್ಲಿ, ಈ ಸಂಸ್ಥೆ ವಿಶ್ವವ್ಯಾಪಿಯಾಗಿ ಕಲ್ಯಾಣ ಮತ್ತು ಮಾನವೀಯ ಕಾರ್ಯಗಳಲ್ಲಿ ನಿರತವಾಗಿದೆ. ಈ ಜಾಗತಿಕ ಅಭಿಯಾನದಲ್ಲಿ “ಹ್ಯುಮಾನಿಟಿ ಫಸ್ಟ್’ ಇಂಡಿಯಾ ಘಟಕವು ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡಿದೆ. ಭಾರತದ 15 ರಾಜ್ಯಗಳಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಮಾಅತಿನ ಉಪಾಧ್ಯಕ್ಷ ಎಂ.ಬಿ.ಜಾಹೀರ್ ಅಹ್ಮದ್, ಮಾಜಿ ಅಧ್ಯಕ್ಷ ಎಂ.ಯು.ವಸೀಂ ಅಹ್ಮದ್, ಸದಸ್ಯರಾದ ಕೆ.ಎಂ.ಇಬ್ರಾಹಿಂ, ಎಂ.ಯು.ಉಸ್ಮಾನ್,









