
ಮಡಿಕೇರಿ ಸೆ.23 NEWS DESK : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀದಂಡಿನ ಮಾರಿಯಮ್ಮ ದೇವಿಗೆ ದಸರಾದ ಎರಡನೇ ದಿನವಾದ ಇಂದು ಪಂಚ ಪುಷ್ಪ ಅಲಂಕಾರದಲ್ಲಿ ಗಮನ ಸೆಳೆಯುತ್ತಿದೆ. ನೂರಾರು ಭಕ್ತರು ಪೂಜೆ ಸಲ್ಲಿಸಿ ವಿಶೇಷ ಅಲಂಕಾರವನ್ನು ವೀಕ್ಷಿಸಿದರು. ನವರಾತ್ರಿಯ ಪ್ರಯುಕ್ತ ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ಪ್ರತಿದಿನ ವಿಶೇಷ ಅಲಂಕಾರ ಸೇವೆ ಮತ್ತು ವಿಶೇಷ ಪೂಜೆ ನಡೆಯುತ್ತಿದೆ. ಸೆ.24 ರಂದು ವಿಳ್ಯೆದೆಲೆ ಅಲಂಕಾರ ನಡೆಯಲಿದೆ.









