
ಗೋಣಿಕೊಪ್ಪ ಸೆ.26 NEWS DESK : ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಕೆ.ಕುಮಾರ್ ಅವರನ್ನು ಶಾಲೆ ಅಭಿವೃದ್ಧಿ ಮತ್ತು ಮೇಲುಸ್ತುವರಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಶಾಲೆ ಅಭಿವೃದ್ಧಿ ಸಮಿತಿ ಸಭೆಯ ನಂತರ ಸನ್ಮಾನ ಕಾರ್ಯಕ್ರಮ ಸಹ ಶಿಕ್ಷರ ಉಪಸ್ಥಿತಿಯಲ್ಲಿ ನಡೆಯಿತು. ಶಾಲೆಯ ಅಭಿವೃದ್ಧಿಗೆ ಪೂರಕವಾದ ಮನಸ್ಥಿತಿಯ ನಡೆಯಿಂದ ಮುಖ್ಯ ಶಿಕ್ಷಕರಿಗೆ ಪ್ರಶಸ್ತಿ ಬರಲು ಸಾಧ್ಯವಾಗಿದೆ ಇದು ಶಾಲೆಗೆ ಹೆಮ್ಮೆಪಡುವ ವಿಚಾರವಾಗಿದೆ. ಈ ಪ್ರಶಸ್ತಿಯಿಂದ ಶಾಲೆಯು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಮತ್ತಷ್ಟು ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಉನ್ನತಿಕರಣ ಗೊಳ್ಳುವ ಮೂಲಕ ಪ್ರತಿಯೊಬ್ಬ ಶಿಕ್ಷಕನು ಗೌರವಕ್ಕೆ ಪಾತ್ರರಾಗಬೇಕು ಎಂದು ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ತಿಳಿಸಿದರು. ಸನ್ಮಾನಕ್ಕೂ ಮೊದಲು ನಡೆದ ಸಮಿತಿ ಸಭೆಯಲ್ಲಿ ಶಾಲೆಯ ಅಭಿವೃದ್ಧಿಗೆ ಸಮಿತಿಯ ಸದಸ್ಯರು ತೊಡಗಿಸಿಕೊಳ್ಳುವ ಹಾಗೂ ಮಕ್ಕಳ ಪಠ್ಯ ಪ್ರವಚನ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಮಧ್ಯಾಹ್ನದ ಬಿಸಿ ಊಟ ಉತ್ತಮ ಗುಣಮಟ್ಟದಿಂದ ಕೂಡಿವೆ. ವಿದ್ಯಾರ್ಥಿಗಳು ಸಹ ಅಡುಗೆ ರುಚಿಯನ್ನು ಸವಿಯುತ್ತಿದ್ದಾರೆ. ಈ ಬಗ್ಗೆ ಯಾವುದೇ ತಕರಾರು ಇಲ್ಲ ಎಂಬುದೇ ಬಹುದೊಡ್ಡ ಸಂತೋಷದ ವಿಚಾರ ಹಾಗಾಗಿ, ಅಡಿಗೆ ಸಿಬ್ಬಂದಿಗಳನ್ನು ಮತ್ತು ಅಕ್ಷರ ದಾಸೋಹ ಶಿಕ್ಷಕರು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಜವಾಬ್ದಾರಿಯನ್ನು ಶ್ಲಾಘಿಸಲಾಯಿತು. ಶಾಲೆ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ದಿವ್ಯ, ಮತ್ತು ಸದಸ್ಯರುಗಳು, ಶಾಲೆಯ ಶಿಕ್ಷಕರುಗಳಾದ, ಬಿ.ಆರ್ ಸತೀμï, ಟಿ.ಡಿ ರಾಮನಂದ, ದಮಯಂತಿ ಎ.ಎನ್, ಅನೀತಾ ಕುಮಾರಿ, ಜೋಸ್ಲಿಯಾ ಎಂ.ಟಿ, ಜಯಶ್ರೀ ಎನ್.ಕೆ, ಎಂಸಿ ಇಂದಿರ, ಶಾರದ, ಸ್ನೇಹ ಕಾವೇರಮ್ಮ, ನಾಗರಾಜು, ಸಿದ್ದರಾಜು, ಮಂಜುಳಾ, ಸುನಿತ ಇದ್ದರು.








