Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕಾರ್ಯವೈಖರಿಗೆ ಮೆಚ್ಚುಗೆ : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಗೆ ಕೊಡುಗೆ*
  • *ಮರಾಠ, ಮರಾಟಿ ಸಮಾಜ ಸೇವಾ ಸಂಘ, ಅಂಬಾಭವಾನಿ ಯುವಕ-ಯುವತಿ ಕ್ರೀಡಾ ಸಂಘದಿಂದ ಮಾ.21 ಮತ್ತು 22 ರಂದು ಕ್ರೀಡಾಕೂಟ*
  • *45 ನೇ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯ ಕ್ರೀಡಾಪಟುಗಳ ಸಾಧನೆ*
  • *ಗ್ರಾಮೀಣ ಪ್ರತಿಭೆಗಳಿಗೆ ಕೆಇಎ ನೀಡಲಿದೆ ‘ನೀಟ್’ ಬಲ: ಸರ್ಕಾರಿ ಕಾಲೇಜುಗಳಲ್ಲೇ ಉಚಿತ ತರಬೇತಿ; ಸಚಿವರಿಂದ ಮಹತ್ವದ ಘೋಷಣೆ!*
  • *ಅಧಿವೇಶನದಲ್ಲಿ ಡಿಸಿಎಂ ಜೊತೆ ಶಾಸಕ ಎ.ಎಸ್.ಪೊನ್ನಣ್ಣ ಸಮಾಲೋಚನೆ*
  • *ರಾಜ್ಯದಲ್ಲಿ ಬದಲಾದ ಹವಾಮಾನ: ಹಲವೆಡೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ; ಬೀದರ್‌ನಲ್ಲಿ ಸಿಡಿಲಿಗೆ ರೈತ ಬಲಿ!*
  • *ಆದಿವಾಸಿಗಳ ಹಕ್ಕಿಗಾಗಿ ಆಗ್ರಹಿಸಿ ಪ್ರತಿಭಟನೆ : ಲೈನ್ ಮನೆಗಳಿಂದ ಮುಕ್ತಗೊಳಿಸಲು ಒತ್ತಾಯ*
  • *ಚಿನ್ನಾಭರಣ ಪ್ರಿಯರಿಗೆ ಸುವರ್ಣಾವಕಾಶ : ಕುಶಾಲನಗರದ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಗಳು*
  • *ಪಾಕ್-ಅಫ್ಘಾನ್ ಯುದ್ಧ ಭೀಕರ: ಕಾಬೂಲ್ ಆಸ್ಪತ್ರೆ ಮೇಲೆ ಪಾಕಿಸ್ತಾನ ವಾಯುದಾಳಿ; 400 ಮಂದಿ ಸಾವು, 250ಕ್ಕೂ ಹೆಚ್ಚು ಜನರಿಗೆ ಗಾಯ!*
  • *ವಿಶೇಷಚೇತನರಿಗೆ ಕ್ರೀಡಾಕೂಟ : ಕ್ರೀಡೆಯಿಂದ ದೈಹಿಕ, ಮಾನಸಿಕ ದೃಢತೆ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವಿರಾಜಪೇಟೆ : ವಿದ್ಯಾರ್ಥಿಗಳು ಸಮಾಜ ಸೇವೆಗೆ ಮುಂದಾಗಿ : ಕೌಶಿ ಕಾವೇರಮ್ಮ ಕರೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವಿರಾಜಪೇಟೆ : ವಿದ್ಯಾರ್ಥಿಗಳು ಸಮಾಜ ಸೇವೆಗೆ ಮುಂದಾಗಿ : ಕೌಶಿ ಕಾವೇರಮ್ಮ ಕರೆ*

ಅಕ್ಟೋಬರ್ 6, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ವಿರಾಜಪೇಟೆ ಅ.6 NEWS DESK : ಕಾಲೇಜು ಶಿಕ್ಷಣ ಪಠ್ಯೇತರ ಚಟುವಟಿಕೆಗಳನ್ನು ತಿಳಿಸಿಕೊಡುತ್ತದೆ. ಪಾಠ ಪ್ರವಚನದೊಂದಿಗೆ ಸಾಮಾಜಿಕ ಮೌಲ್ಯಗಳಿಗೆ ಗೌರವಸೂಚಿಸಿ ಉತ್ತಮ ಸಮಾಜ ರೂಪಿಸುವಲ್ಲಿ ವಿದ್ಯಾರ್ಥಿಗಳು ಮುಂದಾಗುವಂತೆ ನರಿಯಂದಡ ಗ್ರಾ.ಪಂ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಅವರು ಹೇಳಿದರು. ಕಾಲೇಜು ಶಿಕ್ಷಣ ಇಲಾಖೆ, ಕೊಡಗು ವಿಶ್ವವಿದ್ಯಾನಿಲಯ, ವಿರಾಜಪೇಟೆ ಕಾವೇರಿ ಪದವಿ ಕಾಲೇಜು ಆಶ್ರಯದಲ್ಲಿ ಕಡಂಗ ಅರಪಟ್ಟು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಅಭಿವೃದ್ಧಿಗೆ ಯುವ ಸಮೂಹವು ಪೂರಕವಾಗಿ ಪ್ರತಿಸ್ಪಂದಿಸಬೇಕು. ಕಾಲೇಜು ಶಿಕ್ಷಣದಲ್ಲಿ ಪಠ್ಯ ಪುಸ್ತಕದಲ್ಲಿರುವ ತಿರುಳು ಮತ್ತು ಮಾಹಿತಿ ತಿಳಿದುಕೊಂಡಲ್ಲಿ ಸಾಲದು. ಬಾಹ್ಯವಾದ ಚಿಂತನೆಗಳ ಬಗ್ಗೆ ಪರಿಜ್ಞಾನದ ಅರಿವು ಹೊಂದುವುದು ಮುಖ್ಯ. ಪೋಷಕರು ಮತ್ತು ಶಿಕ್ಷಕರ ಒತ್ತಡಕ್ಕೆ ಮಣಿದು ಓದುವುದು ಮುಖ್ಯವಾಗಬಾರದು. ಬದಲಿಗೆ ಆತ್ಮಗೌರವ ಶಿಕ್ಷಣದ ಹಂಬಲದೊಂದಿಗೆ ಓದುವುದು ಮುಖ್ಯವಾಗಬೇಕು. ಪ್ರಸ್ತುತ ಕಾಲಗಟ್ಟದಲ್ಲಿ ಯುವ ಸಮೂದಾಯವು ಮೊಬೈಲ್ ವ್ಯಾಮೋಹಕ್ಕೆ ಬಲಿಯಾಗುತ್ತಿದ್ದಾರೆ. ಇದರಲ್ಲಿ ಒಳ್ಳೆಯದು ಕೆಟ್ಟದ್ದು ಅಡಕವಾಗಿದೆ. ಆದರೇ ಆಯ್ಕೆ ಉತ್ತಮ ಹವ್ಯಾಸಕ್ಕೆ, ಜೀವನಕ್ಕೆ ಮಾದರಿಯಾಗುವ ವಿಷಯಗಳಿಗೆ ಸೀಮಿತವಾಗಬೇಕು. ಶಿಬಿರದಲ್ಲಿ ಲಭಿಸುವ ಮಾಹಿತಿಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ರೂಪಿಸುವಲ್ಲಿ ವಿದ್ಯಾರ್ಥಿಗಳು ಮುಂದಾಗುವಂತೆ ಕರೆ ನೀಡಿದರು. ಧ್ವಜರೋಹಣ ನೆರವೇರಿಸಿ ಮಾತನಾಡಿದ ನರಿಯಂದಡ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಕೋಡಿರ ಎಂ.ವಿನೋದ್ ನಾಣಯ್ಯ ಶಿಸ್ತು, ಸಂಯಮ, ನಡತೆ ಹಾಗೂ ನಾಯಕತ್ವ ಕಲಿಯಲು ಶಿಬಿರಗಳು ಉತ್ತಮ ವೇದಿಕೆಯಾಗಿದೆ. ಶಿಬಿರದಲ್ಲಿ ಕಲಿಯುವ ಪ್ರತಿಯೊಂದು ವಿಷಯಗಳು ಜೀವನ ಸುಧಾರಣೆಯ ಅಂಶಗಳಾಗಿವೆ. ಇವುಗಳು ಶಿಬಿರಕ್ಕೆ ಮಾತ್ರ ಸೀಮಿತವಾಗದೆ ಜೀವನದ ಸಂಗಾತಿಗಳಾಗಬೇಕು. ಎನ್.ಎಸ್.ಎಸ್ ಶಿಬಿರಗಳು ವಿದ್ಯಾರ್ಥಿಗಳಿಗೆ ಉತ್ತಮ ನಾಯಕತ್ವದ ಗುಣಮೌಲ್ಯಯುತವಾದ ಮಾಹಿತಿಗಳನ್ನು ಕಲಿಸುತ್ತದೆ. ನೀತಿಪಾಠದಂತೆ ಜೀವನದಲ್ಲಿ ರೂಡಿಸಿಕೊಂಡಲ್ಲಿ ಸಮಾಜದಲ್ಲಿ ಉತ್ತಮ ನಾಯಕನಾಗಿ ಬೆಳೆಯುವ ಅವಕಾಶ ಕಲ್ಪಿಸಿಕೊಡುತ್ತದೆ ಎಂದು ಹೇಳಿದರು. ಎಡಪಾಲ ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕರು ಮತ್ತು ರಾಜ್ಯ ಪ್ರಶಸ್ತಿ ವಿಜೇತರಾದ ಕೆ.ಎ.ಉಮ್ಮರ್ ಮಾತನಾಡಿ ಸಾಮಾಜಿಕ ಪರಿಕಲ್ಪನೆಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಶಿಸ್ತುಬದ್ದ ಜೀವನದಿಂದ ಮಾತ್ರ ವ್ಯಕ್ತಿಯ ವ್ಯಕ್ತಿತ್ವ ಗುಣಗಾಣಲು ಸಾದ್ಯ. ಸಮಾಜದಲ್ಲಿ ನಡೆಯುವ ಭ್ರಷ್ಟಾಚಾರ, ಅಹಿಂಸೆ, ಮಾದಕ ವಸ್ತುಗಳ ಉಪಯೋಗ, ಸಾಮಾಜಿಕ ಪಿಡುಗುಗಳು ದೈನಂದಿನ ಸಮಾಜವನ್ನು ವಿನಾಶಕ್ಕೆ ದೂಡುತ್ತಿದೆ. ಇವುಗಳ ವಿರುದ್ಧ ಸಮರ ಸಾರುವ ಗುರಿಯತ್ತ ವಿದ್ಯಾರ್ಥಿಗಳು ಮುಂದಾಗಬೇಕು. ಶಿಬಿರಗಳ ಆಯೋಜನೆಯಿಂದಾಗಿ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ವಿಕಸಿತ ಭೌವ್ಯ ಭಾರತದ ಕಲ್ಪನೆಯು ಸಾಕಾರವಾಗಲು ಯುವ ಸಮೂದಾಯವು ಒಂದಾಗಿ ಸಂಘಟಿತರಾಗಿ ಅಭಿವೃದ್ಧಿಗೆ ಕೈಜೋಡಿಸುವಂತಾಗಬೇಕು ಎಂದು ಹೇಳಿದರು. ಕಾವೇರಿ ಪದವಿ ಕಾಲೇಜು ವಿರಾಜಪೇಟೆ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ಡಾನ ಅವರು ಶಿಬಿರಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಿ ಮಾತನಾಡಿದರು. ಸ.ಹಿ.ಪ್ರಾ. ಶಾಲೆ ಅರಪಟ್ಟು ಕಡಂಗ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಭವ್ಯಶ್ರೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅರಪಟ್ಟು ಕಡಂಗ ಸ.ಹಿ.ಪ್ರಾ ಶಾಲೆಯ ಸಹ ಶಿಕ್ಷಕರಾದ ವತ್ಸಲ ಶ್ರೀಶ, ಕಾವೇರಿ ಪದವಿ ಕಾಲೇಜು ಕನ್ನಡ ಉಪನ್ಯಾಸಕರು ಮತ್ತು ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿ ಸುನೀಲ್ ಕುಮಾರ್ ಬಿ.ಬಿ. ಉಪಸ್ಥಿತರಿದ್ದರು. ಉಪನ್ಯಾಸಕಿ ನಿರ್ಮಿತ ಅವರು ಸ್ವಾಗತಿಸಿ, ವಿಧ್ಯಾರ್ಥಿನಿ ರಮ್ಯ ನಿರೂಪಿಸಿ ಉಪನ್ಯಾಸಕರಾದ ಮಾಣಿಕ್ಯ ಅವರು ಸರ್ವರನ್ನು ವಂದಿಸಿದರು. ಕಾವೇರಿ ಕಾಲೇಜು ವಿರಾಜಪೇಟೆ ಉಪನ್ಯಾಸಕರುಗಳಾದ ಡಾ. ವೀಣಾ, ಪ್ರಿಯ ಮುದ್ದಪ್ಪ, ಮಾಣಿಕ್ಯ, ನಿರ್ಮಿತಾ ಮತ್ತು ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯರಾದ ಪಾಂಡ0ಡ ರಾಣಿ ಗಣಪತಿ, ನಂಬಿಯಪಂಡ ವಾಣಿ ತಮ್ಮಯ್ಯ ಸೇರಿದಂತೆ ಎನ್.ಎಸ್.ಎಸ್ ಘಟಕದಶಿಬಿರಾರ್ಥಿಗಳು, ಸಾರ್ವಜನಿಕರು ಹಾಜರಿದ್ದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕಾರ್ಯವೈಖರಿಗೆ ಮೆಚ್ಚುಗೆ : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಗೆ ಕೊಡುಗೆ*

ಮಾರ್ಚ್ 17, 2026

*ಮರಾಠ, ಮರಾಟಿ ಸಮಾಜ ಸೇವಾ ಸಂಘ, ಅಂಬಾಭವಾನಿ ಯುವಕ-ಯುವತಿ ಕ್ರೀಡಾ ಸಂಘದಿಂದ ಮಾ.21 ಮತ್ತು 22 ರಂದು ಕ್ರೀಡಾಕೂಟ*

ಮಾರ್ಚ್ 17, 2026

*45 ನೇ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯ ಕ್ರೀಡಾಪಟುಗಳ ಸಾಧನೆ*

ಮಾರ್ಚ್ 17, 2026

*ಮರಾಠ, ಮರಾಟಿ ಸಮಾಜ ಸೇವಾ ಸಂಘ, ಅಂಬಾಭವಾನಿ ಯುವಕ-ಯುವತಿ ಕ್ರೀಡಾ ಸಂಘದಿಂದ ಮಾ.21 ಮತ್ತು 22 ರಂದು ಕ್ರೀಡಾಕೂಟ*

ಮಾರ್ಚ್ 17, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಮಾ.17 : ಕೊಡಗು ಜಿಲ್ಲಾ ಮರಾಠ, ಮರಾಟಿ ಸಮಾಜ ಸೇವಾ ಸಂಘ, ತಾಳತ್ತಮನೆಯ ಅಂಬಾಭವಾನಿ ಯುವಕ-ಯುವತಿ…

*45 ನೇ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯ ಕ್ರೀಡಾಪಟುಗಳ ಸಾಧನೆ*

ಮಾರ್ಚ್ 17, 2026

*ಗ್ರಾಮೀಣ ಪ್ರತಿಭೆಗಳಿಗೆ ಕೆಇಎ ನೀಡಲಿದೆ ‘ನೀಟ್’ ಬಲ: ಸರ್ಕಾರಿ ಕಾಲೇಜುಗಳಲ್ಲೇ ಉಚಿತ ತರಬೇತಿ; ಸಚಿವರಿಂದ ಮಹತ್ವದ ಘೋಷಣೆ!*

ಮಾರ್ಚ್ 17, 2026

*ಅಧಿವೇಶನದಲ್ಲಿ ಡಿಸಿಎಂ ಜೊತೆ ಶಾಸಕ ಎ.ಎಸ್.ಪೊನ್ನಣ್ಣ ಸಮಾಲೋಚನೆ*

ಮಾರ್ಚ್ 17, 2026

*ರಾಜ್ಯದಲ್ಲಿ ಬದಲಾದ ಹವಾಮಾನ: ಹಲವೆಡೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ; ಬೀದರ್‌ನಲ್ಲಿ ಸಿಡಿಲಿಗೆ ರೈತ ಬಲಿ!*

ಮಾರ್ಚ್ 17, 2026

*ಆದಿವಾಸಿಗಳ ಹಕ್ಕಿಗಾಗಿ ಆಗ್ರಹಿಸಿ ಪ್ರತಿಭಟನೆ : ಲೈನ್ ಮನೆಗಳಿಂದ ಮುಕ್ತಗೊಳಿಸಲು ಒತ್ತಾಯ*

ಮಾರ್ಚ್ 17, 2026

*ಚಿನ್ನಾಭರಣ ಪ್ರಿಯರಿಗೆ ಸುವರ್ಣಾವಕಾಶ : ಕುಶಾಲನಗರದ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಗಳು*

ಮಾರ್ಚ್ 17, 2026

*ಪಾಕ್-ಅಫ್ಘಾನ್ ಯುದ್ಧ ಭೀಕರ: ಕಾಬೂಲ್ ಆಸ್ಪತ್ರೆ ಮೇಲೆ ಪಾಕಿಸ್ತಾನ ವಾಯುದಾಳಿ; 400 ಮಂದಿ ಸಾವು, 250ಕ್ಕೂ ಹೆಚ್ಚು ಜನರಿಗೆ ಗಾಯ!*

ಮಾರ್ಚ್ 17, 2026

*ವಿಶೇಷಚೇತನರಿಗೆ ಕ್ರೀಡಾಕೂಟ : ಕ್ರೀಡೆಯಿಂದ ದೈಹಿಕ, ಮಾನಸಿಕ ದೃಢತೆ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ*

ಮಾರ್ಚ್ 16, 2026

*ಕೊಡಗಿನ ವಿವಿಧೆಡೆ ಸ್ವಚ್ಛತಾ ಅಭಿಯಾನ*

ಮಾರ್ಚ್ 16, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.