Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕುಶಾಲನಗರ ತಾಲೂಕನ್ನು ಬರಪೀಡಿತವೆಂದು ಘೋಷಿಸಲು ಒತ್ತಾಯ*
  • *ವಿರಾಜಪೇಟೆ: ಸೋದರತೆಯ ಸಂಕೇತವನ್ನು ಬಿತ್ತುವ ಹಬ್ಬ ರಕ್ಷಾ ಬಂಧನ ಆಚರಣೆ*
  • *ಪೇರಿಯಂಡ ಪಿ.ಪೆಮ್ಮಯ್ಯ–ಜಿ.ಕೆ.ದೇವಕಿ ಪೆಮ್ಮಯ್ಯ ದತ್ತಿ ಪ್ರಶಸ್ತಿ : ಕೃತಿಗಳ ಆಹ್ವಾನಕ್ಕೆ ಅವಧಿ ವಿಸ್ತರಣೆ*
  • *ಶೇ.100 ಫಲಿತಾಂಶ: ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿಗೆ ಸನ್ಮಾನ*
  • *ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕಾವೇರಿ ಶಾಲಾ ವಿದ್ಯಾರ್ಥಿಗಳ ಅಮೋಘ ಸಾಧನೆ*
  •  *ರೋಟರಿ ವುಡ್ಸ್ ನಿಂದ ರಕ್ಷಾ ಬಂಧನ್ – ನಮ್ಮ ಹಬ್ಬ ನಮ್ಮ ಸೇವಾ ಯೋಜನೆ*
  • *ಕುಶಾಲನಗರ ಬಾಲಕಿಯರ ಪ್ರೌಢಶಾಲಾ ಮಕ್ಕಳಿಗೆ ಲೇಖನ ಸಾಮಾಗ್ರಿ ವಿತರಣೆ : ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವುದು ಅವಶ್ಯಕ : ಡಾ‌ ಅಚ್ಯುತನ್*
  • *ಕೊಡಗು: ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಮಂಡಳಿ ಸಭೆ*
  • *ಆಧುನೀಕತೆಯ ಭರಾಟೆಯ ದಿನಗಳಲ್ಲಿ ಪ್ರಾಚೀನ  ಸಂಸ್ಕೖತಿ ಮರೆಯದಿರಿ – ಡಾ. ಉದಯಶಂಕರ್ ಕರೆ | ಶೖತಿಲಯ ತಂಡದಿಂದ ರಾಘವೇಂದ್ರ ಆರಾಧನೆಯ ಪ್ರಯುಕ್ತ ದಾಸರಕೀತ೯ನೆ*
  • *ವಿವಿಧೆಡೆ ರಾಖಿ ಕಟ್ಟಿದ  ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಶ್ರೇಷ್ಠ ಸಹಕಾರಿ ಪ್ರಶಸ್ತಿ ವಿಜೇತರು*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಶ್ರೇಷ್ಠ ಸಹಕಾರಿ ಪ್ರಶಸ್ತಿ ವಿಜೇತರು*

ನವೆಂಬರ್ 12, 20253 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ನ.12 NEWS DESK :  ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ 72 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ನ.14 ರಿಂದ 20 ರವರೆಗೆ ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಸಹಯೋಗದೊಂದಿಗೆ ನಡೆಯಲಿದೆ. ಸಹಕಾರಿ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿರುವ ಪೊನ್ನಂಪೇಟೆಯ ಚಿರಿಯಪಂಡ ಕೆ. ಉತ್ತಪ್ಪ  ‘ಕೊಡಗು ಸಹಕಾರ ರತ್ನ’ ಪ್ರಶಸ್ತಿ, ಸೋಮವಾರಪೇಟೆ ತಾಲೂಕಿನ ಶುಂಠಿ ಗ್ರಾಮದ ಎಚ್.ಎಸ್. ಮುದ್ದಪ್ಪ, ಮಡಿಕೇರಿ ತಾಲೂಕು ಅರುವತ್ತೋಕ್ಲು ಗ್ರಾಮದ ತಳೂರು ಎ. ಕಿಶೋರ್  ಅವರಿಗೆ ‘ಶ್ರೇಷ್ಠ ಸಹಕಾರಿ ಪ್ರಶಸ್ತಿ’ ಮತ್ತು ಶನಿವಾರಸಂತೆಯ ನಿವಾಸಿ ದೇವಾಂಬಿಕ ಮಹೇಶ್ ಅವರಿಗೆ ‘ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.  ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ‘ಉನ್ನತಿ ಭವನ’ದ ಸಭಾಂಗಣದಲ್ಲಿ ನ.20 ರಂದು ಏರ್ಪಡಿಸಲಾಗಿದೆ.

:: ಚಿರಿಯಪಂಡ ಕೆ. ಉತ್ತಪ್ಪ – ಕೊಡಗು ಸಹಕಾರ ರತ್ನ :: ಜಿಲ್ಲೆಗೊಬ್ಬರಂತೆ ‘ಕೊಡಗು ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. 2025 ರ ಕೊಡಗು ಸಹಕಾರ ರತ್ನಕ್ಕೆ ಭಾಜನರಾದವರು ಶ್ರೀ ಚಿರಿಯಪಂಡ ಕೆ. ಉತ್ತಪ್ಪ. ಪೊನ್ನಂಪೇಟೆಯ ಚಿರಿಯಪಂಡ ಕೆ. ಉತ್ತಪ್ಪನವರು 1966 ರಲ್ಲಿ ಮತ್ತೂರು ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ಪ್ರಥಮ ಬಾರಿಗೆ ನಿರ್ದೇಶಕರಾಗಿ ಸಹಕಾರ ವಲಯಕ್ಕೆ ಪಾದಾರ್ಪಣೆ ಮಾಡಿ, ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ 1971 ರಿಂದ ನಿರಂತರವಾಗಿ ಅಂದರೆ ಕಳೆದ 51 ವರ್ಷಗಳಿಂದ ನಿರ್ದೇಶಕರಾಗಿ, ಸುಮಾರು 38 ವರ್ಷಗಳ ಕಾಲ ಅಧ್ಯಕ್ಷರಾಗಿ ತಮ್ಮ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಮಡಿಕೇರಿಯ ಜನತಾ ಬಜಾರ್‍ನಲ್ಲಿ ಒಂದು ಅವಧಿಗೆ ನಿರ್ದೇಶಕರಾಗಿ, ವಿರಾಜಪೇಟೆಯ ಮಾರಾಟ ಮಹಾಮಂಡಳದಲ್ಲಿ ಸತತ 3 ಅವಧಿಗೆ ನಿರ್ದೇಶಕರಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಿರುತ್ತಾರೆ.

:: ಎಚ್.ಎಸ್. ಮುದ್ದಪ್ಪ – ಶ್ರೇಷ್ಠ ಸಹಕಾರಿ ಪ್ರಶಸ್ತಿ ::  ಸೋಮವಾರಪೇಟೆ ತಾಲೂಕಿನ ಶುಂಠಿ ಗ್ರಾಮದ ಶ್ರೀ ಎಚ್.ಎಸ್. ಮುದ್ದಪ್ಪನವರು 1976 ರಲ್ಲಿ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದು, ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. 1981 ರಿಂದ 1995 ರವರೆಗೆ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಆಡಳಿತ ಮಂಡಳಿಯಲ್ಲಿದ್ದ ಇವರು 1990 ರಿಂದ 1992 ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಉಳಿದ 13 ವರ್ಷಗಳ ಅವಧಿಯಲ್ಲಿ ನಿರ್ದೇಶಕರಾಗಿದ್ದರು. 1994 ರಿಂದ 1997 ರವರೆಗೆ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ, 1995 ರಿಂದ 1998 ರವರೆಗೆ ಕೊಡಗು ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿದ್ದರು. 1995 ರಿಂದ 1998ರವರೆಗೆ ಕೋಮಾರ್ಕ್ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ.

:: ತಳೂರು ಎ. ಕಿಶೋರ್ ಕುಮಾರ್ – ಶ್ರೇಷ್ಠ ಸಹಕಾರಿ ಪ್ರಶಸ್ತಿ :: ಮಡಿಕೇರಿ ತಾಲೂಕು ಅರುವತ್ತೋಕ್ಲು ಗ್ರಾಮದ ಶ್ರೀ ತಳೂರು ಎ. ಕಿಶೋರ್ ಕುಮಾರ್‍ರವರು 1991 ರಲ್ಲಿ ಬೆಟ್ಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗುವ ಮೂಲಕ ಸಹಕಾರ ಸೇವೆಯನ್ನು ಪ್ರಾರಂಭಿಸಿ ನಿರ್ದೇಶಕರಾಗಿ ಪುನಃ ಅಧ್ಯಕ್ಷರಾಗಿ ಸತತವಾಗಿ 34 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಅಲ್ಲಿ 2009 ರಿಂದ 2014 ರವರೆಗೆ ನಿರ್ದೇಶಕರಾಗಿದ್ದ ಇವರು ಈ ಸಮಯದಲ್ಲಿ ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ, ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದಲ್ಲಿ ನಾಮನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಕೇಂದ್ರ ಕೈಮಗ್ಗ ಮತ್ತು ಜವಳಿ ಮಂಡಳಿ, ನವದೆಹಲಿ ಇದರ ನಿರ್ದೇಶಕರಾಗಿ 2002 ರಿಂದ 2007 ರವರೆಗೆ ಹಾಗೂ ಭಾರತ ಸರ್ಕಾರದ ಕಾಫಿ ಮಂಡಳಿಯ ಸದಸ್ಯರಾಗಿ 2022 ರಿಂದ ಸೇವೆ ಸಲ್ಲಿಸುತ್ತಿದ್ದಾರೆ.

:: ದೇವಾಂಬಿಕ ಮಹೇಶ್ – ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿ ::  ದೇವಾಂಬಿಕ ಮಹೇಶ್, ಶನಿವಾರಸಂತೆಯ ನಿವಾಸಿಯಾಗಿದ್ದು 1977 ರಲ್ಲಿ ಅಧ್ಯಕ್ಷರಾಗಿ ಮಹಿಳಾ ಸಹಕಾರ ಸಂಘ ನಿ., ಶನಿವಾರಸಂತೆಯಲ್ಲಿ 2015 ರವರೆಗೆ ಸುದೀರ್ಘ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ತಮ್ಮ ಅತ್ತೆ ಶ್ರೀಮತಿ ಕಮಲಮ್ಮ ಮಹಾಂತಪ್ಪನವರು ಸ್ಥಾಪಿಸಿದ ಸದರಿ ಮಹಿಳಾ ಸಹಕಾರ ಸಂಘದ ಬೆಳವಣಿಗೆಗಾಗಿ ಶ್ರಮಿಸಿದ ಇವರು 2006 ರಲ್ಲಿ ಸುವರ್ಣ ಮಹೋತ್ಸವವನ್ನು ಯಶಸ್ವಿಯಾಗಿ ಆಚರಿಸಿರುತ್ತಾರೆ ಮತ್ತು ಮಾತೃವಂದನಾ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿರುತ್ತಾರೆ. ಮಹಿಳೆಯರ ಅಭ್ಯದ್ಯಕ್ಕಾಗಿ ಶಿಶುವಿಹಾರ, ಹೊಲಿಗೆ ತರಬೇತಿ ಕೇಂದ್ರ, ನಿಟ್ಟಿಂಗ್ ತರಬೇತಿ, ಅಣಬೆ ತಯಾರಿಕೆ, ಕ್ಯಾಂಡಲ್ ಮತ್ತು ಸೋಪು ತಯಾರಿಕೆಯ ತರಗತಿಗಳನ್ನು ನಡೆಸಿರುತ್ತಾರೆ. 2015 ರಿಂದ ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ 10 ವರ್ಷಗಳಿಂದ ನಿರ್ದೇಶಕಿಯಾಗಿ ಮುಂದುವರೆಯುತ್ತಿದ್ದಾರೆ.

:: ಆಲೆಮಾಡ ಕಾವೇರಮ್ಮ – ಉತ್ತಮ ಸಹಕಾರಿ ಸಿಬ್ಬಂದಿ ಪ್ರಶಸ್ತಿ ::  ಆಲೆಮಾಡ ಕಾವೇರಮ್ಮನವರು ಕೊಡಗು ಜಿಲ್ಲಾ ಸಹಕಾರ ಯೂನಿಯನ್ನಿನ ವ್ಯವಸ್ಥಾಪಕಿಯಾಗಿ 1969 ರಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡರು. ಜಿಲ್ಲಾ ಸಹಕಾರ ಯೂನಿಯನ್‍ಗೆ ಶಿಕ್ಷಣ, ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಅಗತ್ಯವಾದ ಸಭಾಂಗಣ ಮತ್ತು ಕಟ್ಟಡವನ್ನು ಪುರಸಭೆ ವ್ಯಾಪ್ತಿಯ ಪೆನ್‍ಶನ್ ಲೇನ್‍ನಲ್ಲಿ ನಿವೇಶನ ಹೊಂದಲು ಹೆಚ್ಚಿನ ಶ್ರಮ ವಹಿಸಿರುತ್ತಾರೆ.
ಸಹಕಾರ ಸಂಸ್ಥೆಗಳ ದೇಣಿಗೆ ಮಾತ್ರದಿಂದ 2 ಮಹಡಿಗಳ ಸುಸಜ್ಜಿತ ಕಟ್ಟಡ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದ್ದು, ತಮ್ಮ 38 ವರ್ಷಗಳ ಸೇವಾವಧಿಯಲ್ಲಿ ಚಟುವಟಿಕೆಯಿಂದ ಕೂಡಿ ನಿಷ್ಕಂಳಕವಾಗಿ ಸೇವೆ ಸಲ್ಲಿಸಿರುತ್ತಾರೆ.

 

 

 

 

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕುಶಾಲನಗರ ತಾಲೂಕನ್ನು ಬರಪೀಡಿತವೆಂದು ಘೋಷಿಸಲು ಒತ್ತಾಯ*

ಆಗಷ್ಟ್ 30, 2026

*ವಿರಾಜಪೇಟೆ: ಸೋದರತೆಯ ಸಂಕೇತವನ್ನು ಬಿತ್ತುವ ಹಬ್ಬ ರಕ್ಷಾ ಬಂಧನ ಆಚರಣೆ*

ಆಗಷ್ಟ್ 30, 2026

*ಪೇರಿಯಂಡ ಪಿ.ಪೆಮ್ಮಯ್ಯ–ಜಿ.ಕೆ.ದೇವಕಿ ಪೆಮ್ಮಯ್ಯ ದತ್ತಿ ಪ್ರಶಸ್ತಿ : ಕೃತಿಗಳ ಆಹ್ವಾನಕ್ಕೆ ಅವಧಿ ವಿಸ್ತರಣೆ*

ಆಗಷ್ಟ್ 30, 2026

*ವಿರಾಜಪೇಟೆ: ಸೋದರತೆಯ ಸಂಕೇತವನ್ನು ಬಿತ್ತುವ ಹಬ್ಬ ರಕ್ಷಾ ಬಂಧನ ಆಚರಣೆ*

ಆಗಷ್ಟ್ 30, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, NEWS DESK ಆ.30 : ರಕ್ಷಾ ಬಂಧನ ಹಬ್ಬವು ಪುರಾಣ ಕಾಲದಿಂದಲೂ ಸಹೋದರತೆಯ ಸಂಕೇತವಾಗಿ ಅಣ್ಣ ತಂಗಿಯ ಮಧುರ…

*ಪೇರಿಯಂಡ ಪಿ.ಪೆಮ್ಮಯ್ಯ–ಜಿ.ಕೆ.ದೇವಕಿ ಪೆಮ್ಮಯ್ಯ ದತ್ತಿ ಪ್ರಶಸ್ತಿ : ಕೃತಿಗಳ ಆಹ್ವಾನಕ್ಕೆ ಅವಧಿ ವಿಸ್ತರಣೆ*

ಆಗಷ್ಟ್ 30, 2026

*ಶೇ.100 ಫಲಿತಾಂಶ: ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿಗೆ ಸನ್ಮಾನ*

ಆಗಷ್ಟ್ 30, 2026

*ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕಾವೇರಿ ಶಾಲಾ ವಿದ್ಯಾರ್ಥಿಗಳ ಅಮೋಘ ಸಾಧನೆ*

ಆಗಷ್ಟ್ 30, 2026

 *ರೋಟರಿ ವುಡ್ಸ್ ನಿಂದ ರಕ್ಷಾ ಬಂಧನ್ – ನಮ್ಮ ಹಬ್ಬ ನಮ್ಮ ಸೇವಾ ಯೋಜನೆ*

ಆಗಷ್ಟ್ 30, 2026

*ಕುಶಾಲನಗರ ಬಾಲಕಿಯರ ಪ್ರೌಢಶಾಲಾ ಮಕ್ಕಳಿಗೆ ಲೇಖನ ಸಾಮಾಗ್ರಿ ವಿತರಣೆ : ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವುದು ಅವಶ್ಯಕ : ಡಾ‌ ಅಚ್ಯುತನ್*

ಆಗಷ್ಟ್ 30, 2026

*ಕೊಡಗು: ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಮಂಡಳಿ ಸಭೆ*

ಆಗಷ್ಟ್ 30, 2026

*ಆಧುನೀಕತೆಯ ಭರಾಟೆಯ ದಿನಗಳಲ್ಲಿ ಪ್ರಾಚೀನ  ಸಂಸ್ಕೖತಿ ಮರೆಯದಿರಿ – ಡಾ. ಉದಯಶಂಕರ್ ಕರೆ | ಶೖತಿಲಯ ತಂಡದಿಂದ ರಾಘವೇಂದ್ರ ಆರಾಧನೆಯ ಪ್ರಯುಕ್ತ ದಾಸರಕೀತ೯ನೆ*

ಆಗಷ್ಟ್ 30, 2026

*ವಿವಿಧೆಡೆ ರಾಖಿ ಕಟ್ಟಿದ  ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು*

ಆಗಷ್ಟ್ 30, 2026

*ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ : ಸಂಘಕ್ಕೆ ರೂ.35.20 ಲಕ್ಷ ಲಾಭ : ಪ್ರತಿಭಾವಂತ ವಿದ್ಯಾಥಿಗಳಿಗೆ ಪ್ರೋತ್ಸಾಹ ಧನ ವಿತರಣೆ*

ಆಗಷ್ಟ್ 30, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.