
ಸುಂಟಿಕೊಪ್ಪ ನ.15 NEWS DESK : ಛಾಚ ನೆರೆಹರು ಅವರು ದೇಶ ಮತ್ತು ಮಕ್ಕಳನ್ನು ಅತೀವಾಗಿ ಪ್ರೀತಿಸಿದಂತೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ದೇಶದ ಸತ್ಪ್ರಜೆಗಳಾಗಿ ಮೂಡಿಬರಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ರಫೀಕ್‍ಖಾನ್ ಅಭಿಪ್ರಾಯ ವ್ಯಕ್ತಪಡಿಸಿದರು. ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಫೀಕ್‍ಖಾನ್ ಅವರು ಛಾಚ ನೆಹರು ಅವರ ಆದರ್ಶ ಗುಣಗಳನ್ನು ವಾಚಿಸಿ ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳು ಶ್ರದ್ಧೆಯಿಂದ ಈಗಿನಿಂದಲೇ ಪಾಠಪ್ರವಚನಗಳತ್ತ ಚಿತ್ತವನ್ನು ಹರಿಸಿ ವ್ಯಾಸಂಗ ಮಾಡುವುದರಿಂದ ಉನ್ನತ ಶಿಕ್ಷಣಗಳಿಗೆ ಅನುಕೂಲರವಾದ ವಾತರಣ ಸೃಷ್ಟಿಯಾಗÀಲಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣಗಳನ್ನು ಪಡೆಯುವ ಮೂಲಕ ದೇಶದ ಉನ್ನತ ಹುದ್ದೆಗಳಲ್ಲಿ ಪಡೆದುಕೊಂಡಾಗ ಮಾತ್ರ ಪೋಷಕರ, ಗ್ರಾಮ, ಶಿಕ್ಷಣ ನೀಡಿದ ಶಾಲೆಗಳ ಕೀರ್ತಿಯನ್ನು ಹೆಚ್ಚಿಸ ಬಹುದಾಗಿದೆ ಎಂದು ಅವರು ನುಡಿದರು. ಇದೇ ಸಂದರ್ಭ ಈ ಶಾಲೆಗೆ ಅಗತ್ಯತೆಗಳು ಮನವರಿಕೆಯಾಗಿದ್ದು ಮುಂದಿನ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಪಿ.ಎಂ.ಬಿಜು ಪೋಷಕರಿಗೆ ಅಯೋಜಿತ ಕ್ರೀಡಾಕೂಟವನ್ನು ಉದ್ಘಾಟಿಸಿ ಮಕ್ಕಳ ದಿನಾಚರಣೆಯ ಶುಭವನ್ನು ಕೋರಿದರು. ಶಾಲೆಯ ಸಹಶಿಕ್ಷಕಿ ಪ್ರೀತಿ ಜಾಯ್ಸ್ ಪಿಂಟೋ ದಿನದ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಬಹುಮಾನ ದಾನಿಗಳಾದ ಅಯ್ಯಪ್ಪ, ಶಾಲಾ ಮುಖ್ಯೋಪಾದ್ಯಾಯನಿ ಜೋವಿಟಾ ವಾಸ್, ವ್ಯವಸ್ಥಾಪಕರಾದ ಜೆಸ್ಸಿವೇಗಸ್ ಇದ್ದರು. 1986-87ನೇ ಸಾಲಿನ ವಿದ್ಯಾರ್ಥಿಗಳಿಂದ ಮಕ್ಕಳಿಗೆ ಪ್ರತಿ ವರ್ಷದಂತೆ ನೀಡಲಾಗುವ ವಿಶೇಷ ಭೋಜನವನ್ನು ನೀಡಿದರು. ಪೋಷಕರು ಮಕ್ಕಳ ಪೋಷಣೆ ಹಾರೈಕೆ ಮತ್ತು ಬೆಳವಣಿಗೆಗೆ ಸಿಮೀತವಾಗಿರದೆ. ಮಕ್ಕಳ ದಿನಾಚರಣೆಯ ಪ್ರಯುಕ್ತ ಪೋಷಕರಿಗೆ ವಿಶೇಷ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಮೊದಲಿಗೆ ಶಾಲಾ ಶಿಕ್ಷಕರು ಪ್ರಾರ್ಥಿಸಿ ಸ್ಟಿಸ್ಟರ್ ವೀಣಾ ನಿರೂಪಿಸಿದರು. ಮುಖ್ಯೋಪಾದ್ಯಾಯನಿ ಜೋವಿಟಾ ವಾಸ್ ಸ್ವಾಗತಿಸಿದರು.









