
ಮಡಿಕೇರಿ ನ.22 NEWS DESK : ಕಸ್ತೂರಿ ರಂಗನ್ ವರದಿ ವಿರೋಧ ಹೋರಾಟ ಸಮಿತಿಯವರು ಆಯೋಜಿಸಿದ ಸಿ ಮತ್ತು ಡಿ ಜಮೀನಿನ ಸಮಸ್ಯೆಯ ಕುರಿತಾದ ಚರ್ಚೆಯ ಸಭೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಭಾಗವಹಿಸಿದರು. ಕಸ್ತೂರಿರಂಗನ್ ವಿರೋಧಿ ಸಮಿತಿಯ ಪ್ರಮುಖರು ತಮ್ಮ ಆತಂಕವನ್ನು ಮಂಡಿಸಿ, ಸಿ ಮತ್ತು ಡಿ ಜಾಗದ ವಿಚಾರ ಕುರಿತು ತಮ್ಮ ಅನಿಸಿಕೆ ಹೇಳಿಕೊಂಡರು. ಬಳಿಕ ಮಾತನಾಡಿದ ಶಾಸಕರು ಸಿ ಮತ್ತು ಡಿ ಜಮೀನು ವಿಷಯದಲ್ಲಿ ಇರುವ ಕಾನೂನು ವಿಷಯಗಳನ್ನು ಸಭೆಗೆ ಮನವರಿಗೆ ಮಾಡಿದರಲ್ಲದೆ, ಮುಂದೆ ಯಾವ ರೀತಿ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂದು ವಿವರಿಸಿದರು. ಹೋರಾಟ ಸಮಿತಿಯ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ಮಡಿಕೇರಿ ಶಾಸಕರಾದ ಡಾ. ಮಂತರ್ ಗೌಡ, ಕರ್ನಾಟಕ ಕ್ರೀಡಾ ಉಪಾಧ್ಯಕ್ಷರು ಚೆಪ್ಪುಡೀರ ಅರುಣ್ ಮಾಚಯ್ಯ, ಮಾಜಿ ಶಾಸಕರಾದ ಕೆ.ಜಿ ಬೋಪಯ್ಯ ಹಾಗೂ ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.









